ಬೆಂಗಳೂರು: ದಿನಪತ್ರಿಕೆಗಳ ಮೂಲಕ ಕರೊನಾ ವೈರಸ್ ಪಸರಿಸುವುದಿಲ್ಲ ಹಾಗೂ ಪತ್ರಿಕೆಗಳಿಂದ ಯಾರೂ ಸೋಂಕಿಗೆ ಒಳಗಾಗುವುದಿಲ್ಲ ಎಂದು ಬೆಂಗಳೂರಿನ ವೈದ್ಯರು, ವಿಶ್ವದ ಉನ್ನತ ವಿಜ್ಞಾನಿಗಳು, ಸಂಶೋಧಕರು ಮತ್ತು ಕೆಲ ಪ್ರಮುಖ ರಾಜಕೀಯ ನಾಯಕರು ಸ್ಪಷ್ಟನೆ ನೀಡಿದ್ದಾರೆ.
ವಿಶ್ವದ ಪ್ರಖ್ಯಾತ ಸಂಶೋಧನಾ ಜರ್ನಲ್ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್​ನಲ್ಲಿ ಈ ಕುರಿತ ಅಧ್ಯಯನ ಪ್ರಕಟವಾಗಿದೆ. ರಂಧ್ರಗಳಿರುವ ಅಥವಾ ಯಾವುದೇ ವಸ್ತುವೊಂದರ ಮೂಲಕ ನೀರು ಮತ್ತೊಂದು ಕಡೆಗೆ ಸೋರಬಹುದಾದ ವಸ್ತುಗಳಲ್ಲಿ ಕರೊನಾ ವೈರಸ್ ಹೆಚ್ಚು ಕಾಲ ಬದುಕುಳಿಯುವುದಿಲ್ಲ. ಹೀಗಾಗಿ ಪತ್ರಿಕೆಗಳು ವೈರಸ್​ನಿಂದ ಸಂಪೂರ್ಣ ಸುರಕ್ಷಿತವಾಗಿವೆ. ಆದರೆ ಗಾಳಿಯ ಮೂಲಕ ಹರಡುವ ಕಣಗಳು, ಪ್ಲಾಸ್ಟಿಕ್ ಮತ್ತು ಸ್ಟೇನ್​ಲೆಸ್ ಸ್ಟೀಲ್ ಮೂಲಕ ಕರೊನಾ ವೈರಸ್ ಹರಡುವ ಸಂಭವ ಅತಿಹೆಚ್ಚು ಇರುತ್ತದೆ. ಕರೊನಾ ವೈರಸ್ ಪ್ರತಿ 66 ನಿಮಿಷಕ್ಕೆ ತನ್ನ ಅರ್ಧದಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಹಾಗೂ ರಂಧ್ರಯುತ ವಸ್ತುಗಳ ಮೇಲೆ ಬಿದ್ದ ಮೂರು ತಾಸಿನಲ್ಲಿ ತನ್ನ ಎಂಟನೆ ಒಂದು ಭಾಗದಷ್ಟಾಗುತ್ತದೆ. ಅದರಲ್ಲೂ ಪೇಪರ್ ಮೇಲೆ ಇನ್ನೂ ಕಡಿಮೆ ಸಮಯ ಮಾತ್ರ ಇದರ ಜೀವಿತಾವಧಿ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಪೊಲೀಸರಿಗೆ ಸೂಚನೆ
ದಿನಪತ್ರಿಕೆ, ಹಾಲು, ತರಕಾರಿ, ಹಣ್ಣು, ಔಷಧ ಸರಬರಾಜು ಮಾಡಲು ಪೊಲೀಸರು ಅಡ್ಡಿ ಪಡಿಸುತ್ತಿರುವ ಮಾಹಿತಿಗಳಿವೆ. ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಸರಬರಾಜಿಗೆ ಅಡ್ಡಿ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು.
| ಬಿ.ಎಸ್.ಯಡಿಯೂರಪ್ಪ ಸಿಎಂ
ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ನಾಗರಿಕ ಸಮಾಜದ ಅವಿಭಾಜ್ಯ ಅಂಗ. ಕರೊನಾ ವಿರುದ್ಧದ ಹೋರಾಟದಲ್ಲಿ ದಿನಪತ್ರಿಕೆಗಳ ಪ್ರಾಮುಖ್ಯತೆ ಕುರಿತು ಪ್ರಕಟವಾಗಿರುವ ಒಂದೇ ಸಂಪಾದಕೀಯವು ಕನ್ನಡ ಪತ್ರಿಕೋದ್ಯಮದಲ್ಲಿ ಐತಿಹಾಸಿಕವಾಗಿದೆ. ಸ್ನೇಹಿತರೇ, ಭಯ ಬೇಡ, ನಮ್ಮ ಪತ್ರಿಕೆಗಳು ಅತ್ಯಂತ ಸುರಕ್ಷಿತವಾಗಿವೆ. ಎಂದಿನಂತೆ ರ್ಸ³ಸಿ, ಸುದ್ದಿಗಳನ್ನು ಓದಿ.
| ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ
ಮಾಧ್ಯಮದ ಪ್ರತಿಯೊಂದು ವಿಭಾಗವೂ ಸಂಕಷ್ಟದ ನಡುವೆ ಒಳ್ಳೆಯ ಕೆಲಸ ಮಾಡುತ್ತಿದೆ. ಮಾಧ್ಯಮದ ಸೇವೆಗೆ ಅಭಿನಂದನೆ ಸಲ್ಲಿಸೋಣ. ಎಂದಿನಂತೆ ಪತ್ರಿಕೆಗಳನ್ನು ಓದಿ ಬೆಂಬಲಿಸೋಣ.
| ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ
ಪತ್ರಿಕೆಗಳನ್ನು ಮನೆ ಮನೆಗೆ ಹಂಚುವುದರಿಂದ ಕರೊನಾ ವೈರಾಣು ಹರಡುತ್ತದೆ ಎಂಬ ವದಂತಿ ಸುಳ್ಳು. ಕರೊನಾ ಸೋಂಕು ಇರುವ ವ್ಯಕ್ತಿ ಕ್ವಾರಂಟೈನ್​ನಲ್ಲಿ ಇದ್ದರೆ ಸಾಕು ತಡೆಗಟ್ಟಬಹುದು. ಪತ್ರಿಕಾ ವಿತರಕರಿಂದ ಸೋಂಕು ಬಂದ ಉದಾಹರಣೆ ಎಲ್ಲಿಯೂ ಇಲ್ಲ. ಎಂದಿನಂತೆ ಓದಿ.
| ಎನ್. ರವಿಕುಮಾರ್ ವಿಧಾನ ಪರಿಷತ್ ಸದಸ್ಯ
ದಿನ ಪತ್ರಿಕೆಯಿಂದ ಕರೊನಾ ಸೋಂಕು ಹರಡುವುದಿಲ್ಲ. ಪ್ರಿಂಟಿಂಗ್ ಪ್ರೆಸ್​ನಲ್ಲಿ ಪ್ರಕಟಣೆಯಿಂದ ಪತ್ರಿಕೆ ಬಂಡಲ್ ಆಗುವವರೆಗೂ ಎಲ್ಲವೂ ಯಂತ್ರಗಳಿಂದ ನಿರ್ವಹಿಸಲ್ಪಡುತ್ತದೆ. ವಿತರಕರಿಂದ ಪತ್ರಿಕೆ ವಿತರಣೆ ಆಗುತ್ತದೆ. ನಿತ್ಯ ಜಗತ್ತಿನಲ್ಲಿ ನಡೆಯುವ ಘಟನೆಗಳ ಮಾಹಿತಿ ನೀಡುವ ಪತ್ರಿಕೆಗಳು ನಮ್ಮನ್ನು ಜಾಗೃತಗೊಳಿಸುತ್ತಿವೆ. ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು. ಅಂತಹ ಆತಂಕ ಇದ್ದಲ್ಲಿ ಪತ್ರಿಕೆ ಓದಿದ ನಂತರ ಕೈಗಳನ್ನು ತೊಳೆದುಕೊಳ್ಳಿ.
|ಡಾ. ಪ್ರವೀಣ್ ಇಎನ್​ಟಿ ತಜ್ಞ, ರಾಜರಾಜೇಶ್ವರಿ ನಗರ ಆಸ್ಪತ್ರೆ ಮೈಸೂರು ರಸ್ತೆ
ಮಾಧ್ಯಮ ಕ್ಷೇತ್ರದಲ್ಲಿ ನೂರಾರು ಜನ ಕೆಲಸ ಮಾಡುವುದರಿಂದ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿರುತ್ತಾರೆ. ಸ್ವಚ್ಚತೆ ಕಾಪಾಡಲು ಆದ್ಯತೆ ನೀಡಿರುತ್ತಾರೆ. ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ಸುಳ್ಳು ಸುದ್ದಿಗೆ ಕಿವಿಗೊಡುವ ಅಗತ್ಯವಿಲ್ಲ. ಅಗತ್ಯ ಸೇವೆಯಲ್ಲಿ ಮಾಧ್ಯಮ ಕೆಲಸ ಮಾಡುತ್ತದೆ. ಆದ್ದರಿಂದ ಯಾವುದೇ ಭೀತಿ ಬೇಡ. ಸುಳ್ಳು ಸುದ್ದಿಯನ್ನು ನಂಬಬೇಡಿ. ಕರೊನಾ ಬಗ್ಗೆ ಎಲ್ಲ ಮಾಹಿತಿಯನ್ನು ನೀಡುತ್ತಿದೆ. ಸರ್ಕಾರ ಕೈಗೊಂಡ ಕ್ರಮ, ಔಷಧಗಳ ವಿವರವನ್ನು ನೀಡುತ್ತಿದೆ. ನಾವೆಲ್ಲ ಮಾಧ್ಯಮ ರಂಗದ ಕೆಲಸವನ್ನು ಮೆಚ್ಚಬೇಕು.
| ಆರ್. ಅಶೋಕ್ ಕಂದಾಯ ಸಚಿವ
ಪತ್ರಿಕಾ ವಿತರಕರಿಗೆ ಯಾವುದೇ ತೊಂದರೆ ಮಾಡುವುದು ಬೇಡ. ಅವರು ಸರ್ಕಾರದ ಸೂಚನೆ ಮತ್ತು ಆದೇಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಪತ್ರಿಕೆ ಸಿಬ್ಬಂದಿಗೆ ಏನಾದರೂ ತೊಂದರೆಯಾದರೆ ನೇರವಾಗಿ ನನ್ನನ್ನು ಸಂರ್ಪಸಿ.
| ಭಾಸ್ಕರರಾವ್ ಬೆಂಗಳೂರು ನಗರ ಪೊಲೀಸ್ ಆಯುಕ್ತ
ಪತ್ರಿಕೆಗಳು ಅಗತ್ಯ ಸೇವೆಯಡಿ ಬರುತ್ತವೆ. ವಿತರಕರು ಹಾಗೂ ಹಂಚುವವರು ಅಭಿನಂದನೀಯ ಕೆಲಸ ಮಾಡುತ್ತಿದ್ದಾರೆ. ಕರೊನಾ ಬಗ್ಗೆ ಜನರಿಗೆ ಸರ್ಕಾರದ ಮಾಹಿತಿಯನ್ನು ನೀಡುತ್ತಿದ್ದಾರೆ. ಇಂತಹ ಮಾಧ್ಯಮದ ಬಗ್ಗೆ ಅನಗತ್ಯ ಗೊಂದಲ ಬೇಡ. ಎಂದಿನಂತೆ ಪತ್ರಿಕೆಗಳನ್ನು ಓದಿ.
| ಡಾ. ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ
ಮಾಧ್ಯಮವನ್ನು ಸರ್ಕಾರ ಅಗತ್ಯ ಸೇವೆಗಳಿಗೆ ಸೇರಿಸಿದೆ. ವಿತರಕರಿಗೆ ಯಾವುದೇ ಪೊಲೀಸ್ ಸಿಬ್ಬಂದಿ ತೊಂದರೆ ಕೊಡಬಾರದು. ಆ ರೀತಿಯಲ್ಲಿ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪತ್ರಿಕೆಗಳಿಂದ ಯಾವುದೇ ರೀತಿಯ ವೈರಾಣು ಹರಡುವುದಿಲ್ಲ. ಆತಂಕಕ್ಕೆ ಒಳಗಾಗದೆ ಎಂದಿನಂತೆ ಓದಬಹುದು.
| ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಮಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಕರೊನಾ ವೈರಸ್​: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
