ಬೆಂಗಳೂರು: ಕರೊನಾ ಹೊಡೆತ ಅಷ್ಟಿಷ್ಟಲ್ಲ. ಸಾಮಾನ್ಯನ ಬದುಕನ್ನು ಮೂರಾಬಟ್ಟೆ ಆಗಿಸುವ ಜತೆಗೆ ರಾಜ್ಯದ ಅಭಿವೃದ್ಧಿ ಚಟುವಟಿಕೆ ಮೇಲೂ ದೂರಗಾಮಿ ಪರಿಣಾಮ ಬೀರುವುದನ್ನು ಈಗಾಗಲೇ ಅಂದಾಜಿಸಲಾಗಿದೆ.
ಜನರಿಗೆ ಕೆಲಸ ಕೊಡುವ ಮತ್ತು ರಸ್ತೆ ಸಂಪರ್ಕ ಉತ್ತಮಗೊಂಡು ಸಂಚಾರ ವ್ಯವಸ್ಥೆ ಉತ್ತಮಗೊಳಿಸಿ ಆರ್ಥಿಕ ಚಟುವಟಿಕೆ ಬೆಳೆಯಲು ಕಾರಣವಾಗುವ ರಸ್ತೆ ಅಭಿವೃದ್ಧಿ ಯೋಜನೆ ಮೇಲೆ ಕರೊನಾ ಪರಿಣಾಮ ಭೀಕರವಾಗಬಹುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಊಹಿಸಿದ್ದಾರೆ. ರಸ್ತೆ ಅಭಿವೃದ್ಧಿಗೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀಸಲಿಟ್ಟ ಹಣ ಈಗ ಆಪತ್ಕಾಲದ ಖರ್ಚಿಗೆ ಬಳಕೆ ಆಗುವುದು ನಿಶ್ಚಿತ. ಕೇಂದ್ರ ಹಣ ನೀಡಲು ತಾತ್ವಿಕ ಒಪ್ಪಿಗೆ ನೀಡಿದ ಕಾಮಗಾರಿಗಳಿಗೂ ಸದ್ಯಕ್ಕೆ ಹಣ ಬಿಡುಗಡೆ ಮುಂದೂಡಲ್ಪಡಬಹುದು. ಹೀಗಾದಲ್ಲಿ ದೊಡ್ಡಮಟ್ಟದ ರಸ್ತೆ ಅಭಿವೃದ್ಧಿ ಒಂದಷ್ಟು ವರ್ಷಗಳು ಮುಂದೆ ಹೋಗುತ್ತದೆ, ಜತೆಗೆ ರಸ್ತೆ ಕಾಮಗಾರಿಯಲ್ಲಿ ತೊಡಗುವ ಕಾರ್ವಿುಕರು ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ.
ಅಂದಹಾಗೆ ರಾಜ್ಯದಲ್ಲಿ 6,038 ಕಿ.ಮೀ. ಉದ್ದದ 72 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಮಂತ್ರಾಲಯ (ಇನ್ ಪ್ರಿನ್ಸಿಪಲ್) ಕೆಲವು ತಿಂಗಳ ಹಿಂದಷ್ಟೇ ತಾತ್ವಿಕ ಅನುಮೋದನೆ ನೀಡಿತ್ತು. ಒಪ್ಪಿಗೆ ಬಳಿಕ ರಾಜ್ಯ ಸರ್ಕಾರ 72 ರಸ್ತೆಗಳಲ್ಲಿ 30 ರಸ್ತೆಗಳಿಗೆ ಯೋಜನಾ ವರದಿ ತಯಾರಿಸಲು ಯೋಜನಾ ಸಮಾಲೋಚಕರನ್ನೂ ನೇಮಿಸಿದೆ. ಈ ನಡುವೆ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನೀತಿಯನ್ನು ಅಂತಿಮಗೊಳಿಸುವ ಉದ್ದೇಶದಿಂದ ಯೋಜನಾ ತಯಾರಿಕೆ ತಡೆ ಹಿಡಿಯಲು ನಿರ್ದೇಶನ ಬಂದಿದೆ. ಉಳಿದ 33 ರಸ್ತೆಗಳಿಗೆ ಯೋಜನಾ ವರದಿ ತಯಾರಿಸಲು ಯೋಜನಾ ಸಮಾಲೋಚಕರನ್ನು ನೇಮಿಸಲು ಕೇಂದ್ರಕೆ್ಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರೊನಾ ಕಾರಣಕ್ಕೆ ಸದ್ಯ ಅದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯೂ ಇಲ್ಲ.
ಕೇಂದ್ರ ಸಚಿವರು ಬೆಂಗಳೂರಿಗೆ ಆಗಮಿಸಿ ಸಭೆ ನಡೆಸಿ ಬರೋಬ್ಬರಿ 50 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದ್ದರು. ಈ ಭರವಸೆಗೆ ಕರೊನಾ ಯಾವ ರೀತಿ ಅಡ್ಡಗಾಲು ಹಾಕುತ್ತದೆ ಎಂಬ ಪ್ರಶ್ನೆ ಇದೆ.
ರಾಜ್ಯ ಸರ್ಕಾರದ ವಿಚಾರಕ್ಕೆ ಬಂದರೆ, ಲೋಕೋಪಯೋಗಿ ಇಲಾಖೆಯು ಜಿಲ್ಲಾ ಪಂಚಾಯಿತಿ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವ ದೊಡ್ಡ ಯೋಜನೆ ರೂಪಿಸಿತ್ತು.
ಪ್ರಸ್ತುತ ರಾಜ್ಯದಲ್ಲಿ 7,252 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದ್ದು, 19,772 ಕಿ.ಮೀ. ರಾಜ್ಯ ಹೆದ್ದಾರಿ, 49,903 ಕಿ.ಮೀ. ಜಿಲ್ಲಾ ಮುಖ್ಯರಸ್ತೆ.. ಹೀಗೆ ರಾಜ್ಯ ವಿಸõತ ರಸ್ತೆ ಜಾಲ ಹೊಂದಿದೆ. ಇದೀಗ 30 ಜಿಲ್ಲೆಗಳಿಂದ 17,508 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸರ್ಕಾರದ ಮುಂದಿದೆ. ರಾಜ್ಯದಲ್ಲಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಕೆಳದರ್ಜೆಗಿಳಿಸುವ ಕುರಿತ ಪರಿಶೀಲನಾ ಸಮಿತಿ ಈ ಪ್ರಸ್ತಾವನೆ ಪರಿಶೀಲಿಸಿ 2010ರ ಮಾನದಂಡಕ್ಕೆ ಅನುಗುಣವಾಗಿ ಅರ್ಹತೆ ಹೊಂದಿದ ರಸ್ತೆಗಳನ್ನು ಗುರುತಿಸಿದ ನಂತರ ಅನುದಾನದ ಲಭ್ಯತೆ ನೋಡಿಕೊಂಡು ಸರ್ಕಾರ ಅನುಮತಿ ನೀಡಲಿದೆ. ತಕ್ಷಣಕ್ಕಂತೂ ರಾಜ್ಯ ಸರ್ಕಾರ ರಸ್ತೆ ಬಗ್ಗೆ ಗಮನ ಹರಿಸುವ ಮನಸ್ಥಿತಿಯಲ್ಲಿಲ್ಲ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನೂ ಕರೊನಾ ನಿರ್ವಹಣೆಗೇ ಬಳಸಬೇಕೆಂದು ಹೇಳಿದೆ. ಹೀಗಾಗಿ ಎಲ್ಲ ರೀತಿಯ ರಸ್ತೆ ಅಭಿವೃದ್ಧಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಶ್ರೀಕಾಂತ ಶೇಷಾದ್ರಿ
ಕರೊನಾ ಲಾಕ್​ಡೌನ್​ 14ರ ನಂತರವೂ ಮುಂದುವರಿವ ಸಾಧ್ಯತೆ, ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಜಾವ್ಡೇಕರ್​ ಸುಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
