ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕು ಏರಿಕೆಯಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಲಾಕ್​ಡೌನ್ ನಿಯಮವನ್ನು ಸೋಮವಾರ ಭಾಗಶಃ ಸಡಿಲಿಸಿದೆ. ಮಾರ್ಚ್ 23ರಿಂದ ಬಹುತೇಕ ಗೃಹಬಂಧನದಲ್ಲಿರುವ ಜನರಿಗೆ ಇದು ಖುಷಿ ನೀಡಿದ್ದರೂ, ಎಚ್ಚರಿಕೆಯೂ ಅಗತ್ಯ. ಏಕೆಂದರೆ, ಲಾಕ್​ಡೌನ್ ಸಡಿಲಿಕೆ ಖುಷಿಯಲ್ಲಿ ಜನರು ಅನವಶ್ಯಕವಾಗಿ ಬೇಕಾಬಿಟ್ಟಿ ಓಡಾಡಿದರೆ ಮತ್ತು ಮುನ್ನೆಚ್ಚರಿಕೆ ವಹಿಸದಿದ್ದರೆ ಕರೊನಾ ವ್ಯಾಪಕವಾಗಿ ಪಸರಿಸುವ ಸಾಧ್ಯತೆ ಇದ್ದು, ರಾಜ್ಯ ಮತ್ತೆ ದೀರ್ಘಕಾಲ ಲಾಕ್​ಡೌನ್ ಎದುರಿಸಬೇಕಾಗಬಹುದು. ಹೀಗಾಗಿ ಜನರ ವರ್ತನೆ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ನಿಯಮ ಸಡಿಲಿಕೆ ಕುರಿತು ತೀರ್ಮಾನ ಪ್ರಕಟಿಸಿದ್ದಾರೆ. ಕೆಎಸ್​ಆರ್​ಟಿಸಿ ಸೇರಿ ಎಲ್ಲ್ಲ ಸಾರಿಗೆ ನಿಗಮಗಳು ಮತ್ತು ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಆಟೋ, ಟ್ಯಾಕ್ಸಿ, ಕ್ಯಾಬ್, ರಾಜ್ಯದೊಳಗಿನ ರೈಲು ಸಂಚಾರ, ಸಲೂನ್, ಎಲ್ಲ ರೀತಿಯ ಅಂಗಡಿ ಆರಂಭಕ್ಕೂ ಅವಕಾಶ ನೀಡಲಾಗಿದೆ.
‘ಜನರು ಇತಿಮಿತಿಯಲ್ಲಿ ಓಡಾಡಬೇಕು. ಈ ವೇಳೆ ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡುತ್ತೇವೆ. ನಂತರ ಅಗತ್ಯ ಬಿದ್ದರೆ ರಿಯಾಯಿತಿ ಕಡಿತ ಮಾಡುತ್ತೇವೆ. ಮಾಸ್ಕ್ ಧರಿಸುವುದು ಕಡ್ಡಾಯ. ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಉಳಿದ ಅವಧಿಯಲ್ಲಿ ಕರ್ಫ್ಯೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗಿಳಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿಎಸ್​ವೈ ಹೇಳಿದರು.
ಇದನ್ನೂ ಓದಿ:ಲಾಕ್​ಡೌನ್​ 4.0 ಮಾರ್ಗಸೂಚಿ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ
ಸಾರಿಗೆ ಸೇವೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಆಟೋ, ಕ್ಯಾಬ್​ಗಳಲ್ಲಿ ಓಡಾಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಮೇ 24 ಹಾಗೂ ಮೇ 31ರ ಭಾನುವಾರದಂದು ರಾಜ್ಯಾ ದ್ಯಂತ ಸಂಪೂರ್ಣ ಲಾಕ್​ಡೌನ್ ಇರಲಿದೆ. ಆರೋಗ್ಯ ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಯಾವುದೇ ಚಟುವಟಿಕೆ ಇರುವುದಿಲ್ಲ. ಕಾರು, ಬಸ್, ಆಟೋ, ದ್ವಿಚಕ್ರವಾಹನ ಸೇರಿ ಎಲ್ಲಾ ಬಗೆಯ ಸಂಚಾರಕ್ಕೂ ನಿರ್ಬಂಧ ಇರಲಿದೆ. ಅಂಗಡಿಗಳು, ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶವಿಲ್ಲ. ಹೋಟೆಲ್​ಗಳಲ್ಲಿ ಪಾರ್ಸೆಲ್ ಮಾತ್ರ ಕೊಡಬಹುದು.
ಜವಾಬ್ದಾರಿ ಮರೆಯದಿರೋಣ…
ಯಾವುದಕ್ಕಿಲ್ಲ ಅವಕಾಶ
ಗೊಂದಲದ ತೀರ್ಮಾನ
ಬಸ್, ಆಟೋ, ಟ್ಯಾಕ್ಸಿ ಸಂಚಾರ, ಸಲೂನ್ ಸೇರಿ ಎಲ್ಲ ರೀತಿಯ ಅಂಗಡಿಗೆ ಅವಕಾಶ ನೀಡಿ ಜಿಮ್ ಹೋಟೆಲ್​ಗಳ ಆರಂಭಕ್ಕೆ ಅವಕಾಶ ನೀಡದಿರುವ ಸರ್ಕಾರದ ತೀರ್ವನಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಜಿಮ್ ಮತ್ತು ಹೋಟೆಲ್​ಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸೇವೆ ನೀಡಲು ಅವಕಾಶವಿದೆ. ಆದರೂ ಅವಕಾಶ ಕೊಟ್ಟಿಲ್ಲ ಎಂದು ಈ ಕ್ಷೇತ್ರದ ಕಾರ್ವಿುಕರು, ಗ್ರಾಹಕರು, ಮಾಲೀಕರು ಬೇಸರ ಹೊರಹಾಕಿದ್ದಾರೆ.

ರಾಜ್ಯದ 40 ಲಕ್ಷ ಜನರಿಗೆ ಮೇ 26ರಿಂದ ಉಚಿತ ಧಾನ್ಯ ವಿತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 16 =
Remember me
