ಬೆಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಕೋವಿಡ್​ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಅ.13ರಂದು ಜಾಲಹಳ್ಳಿಯ ಎಎಸ್​ಐ ಅಶ್ವಥಯ್ಯ, ಪೇದೆ ಗುರು ಜಂಬಗಿ ಮತ್ತು ಪಾಲಿಕೆ ಮಾರ್ಷಲ್​ ಮುನಿರಾಜು ಕೋವಿಡ್​-19 ಮಾರ್ಗಸೂಚಿ ಉಲ್ಲಂಘನೆ ಮಾಡುವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಗೋಕುಲ ಬ್ರಿಡ್ಜ್​ ಕೆಳಗಡೆ ಹಳೆ ರೈಲ್ವೆ ಗೇಟ್​ ಹತ್ತಿರ ಇರುವ ಬಾಬು ಮೋಟರ್ಸ್ ಗ್ಯಾರೇಜ್​ನಲ್ಲಿ ನೌಕರ ಮಾಸ್ಕ್​ ಧರಿಸದೆ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಹತ್ತಿರ ಹೋಗಿ ಮಾಸ್ಕ್​ ಧರಿಸುವಂತೆ ಸೂಚನೆ ನೀಡಿದ್ದರು. ಅಷ್ಟಕ್ಕೆ ಕುಪಿತಗೊಂಡ ಕೆಲ ಕಿಡಿಗೇಡಿಗಳು ಏನು ಮಾಡಿದ್ರು ಗೊತ್ತಾ?
ಮಾಸ್ಕ್​ ಧರಿಸಿ ಎಂದ ಪೊಲೀಸ ಮೇಲೆ ಕುಪಿತಗೊಂಡ ಗ್ಯಾರೇಜ್​ನಲ್ಲಿದ್ದ ಶಿವಕುಮಾರ್​ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಅದೇ ವೇಳೆ ಕಾರ್ಲ್​ ಮಾರ್ಕ್ಸ್​ ಎಂಬಾತ, ನಮಗೆ ಕೊರನಾ ಬಂದಿಲ್ಲ. ಅದಕ್ಕಾಗಿ ಮಾಸ್ಕ್​ ಹಾಕುವುದಿಲ್ಲ ಎಂದ. ಇದನ್ನು ಪ್ರಶ್ನೆ ಮಾಡಿದ ಪೊಲೀಸರ ವಿರುದ್ಧವೇ ಗಲಾಟೆ ಮಾಡಿ ಕೈ ಮುಷ್ಠಿಯಿಂದ ಹಲ್ಲೆ ನಡೆಸುತ್ತಿದ್ದಾರೆ.
ಕೂಡಲೇ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡ ಪೊಲೀಸರು ಆರ್​.ಟಿ. ನಗರದ ಮನೋರಾಯನಪಾಳ್ಯದ ಕಾರ್ಲ್​ಮಾರ್ಕ್ಸ್​(25), ಸಿಂಗಾಪುರ ಲೇಔಟ್​ನ ಶಿವಕುಮಾರ್​(54) ಮತ್ತು ಎಸ್​. ಬಾಬು(40) ಎಂಬುವವರನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಕೇಸ್​ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

ಡಿಜೆ ಹಳ್ಳಿ ಗಲಭೆ: ಶಾಸಕರಾದ ರಿಜ್ವಾನ್​, ಜಮೀರ್​ಗೆ ಎನ್​ಐಎ ಡ್ರಿಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
