ಉಡುಪಿ:ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು(ಶನಿವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶ್ರೀ ಸುಗುಣೇಂದ್ರ ತೀರ್ಥರು ಹರಿ-ವಾಯು-ಗುರುಗಳ ಕಾರುಣ್ಯದ ಫಲವಾಗಿ ಅಸ್ಪತ್ರೆಯಿಂದ ಬಿಡುಗಡೆಗೊಂಡು ಉಡುಪಿಯ ಶ್ರೀಮಠ ತಲುಪಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ತುಸು ಕಾಲ ಶ್ರೀಗಳು ವಿಶ್ರಾಂತಿಯಲ್ಲಿ ಇರಲಿದ್ದಾರೆ. ಅನಾರೋಗ್ಯ ಕಾಲದಲ್ಲಿ ಕ್ಷೇಮ ವಿಚಾರಿಸಿ ಪ್ರೀತಿ ತೋರಿದ ಎಲ್ಲರಿಗೂ ಶ್ರೀಕೃಷ್ಣ-ವಿಠಲ- ಮುಖ್ಯಪ್ರಾಣರ ಕಾರುಣ್ಯ ಪ್ರಾಪ್ತವಾಗುವಂತೆ ಶ್ರೀಗಳು ಪ್ರಾರ್ಥಿಸಿರುತ್ತಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿರಿನಾಲ್ಕೇ ದಿನದಲ್ಲಿ ಕರೊನಾ ಗೆದ್ದ 110 ವರ್ಷದ ಸಿದ್ದಮ್ಮಜ್ಜಿ
ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜು.21ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಡುವೆಯೂ ಶ್ರೀಗಳು ಪ್ರತಿದಿನ ನಿರಂತರ ಪೂಜೆ, ಅನುಷ್ಠಾನದಲ್ಲಿ ತೊಡಗಿದ್ದರು. ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವಿವಿಧೆಡೆ ಭಕ್ತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ಇನ್ಮುಂದೆ ಭಾನುವಾರವೂ ಬಸ್ ಸಂಚಾರ, ರಾತ್ರಿ ವೇಳೆಯೂ ಸಾರಿಗೆ ಸೇವೆ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eight =
Remember me
