ಬೆಂಗಳೂರು:ಈಗಾಗಲೇ ರಾಜ್ಯದೆಲ್ಲೆಡೆ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಇಲ್ಲಿಯವರೆಗೆ ಇದ್ದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಭಾರಿ ದಂಡ ತೆರಬೇಕಾಗತ್ತೆ ಹುಷಾರ್​!
ಹೌದು. ಇಂಥದ್ದೊಂದು ಎಚ್ಚರಿಕೆ ಈಗ ಸರ್ಕಾರ ನೀಡಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್​ಗಳನ್ನು ಈಗಾಗಲೇ ಕಡ್ಡಾಯ ಮಾಡಲಾಗಿದ್ದು, ಅದನ್ನು ಧರಿಸದೇ ರಸ್ತೆಗಿಳಿದವರಿಂದ ದಂಡ ವಸೂಲಿ ಮಾಡುವ ಪ್ರಕ್ರಿಯೆ ಶುರು ಮಾಡಲಾಗಿದೆ. ಅದರ ಮುಂದುವರೆದಿರುವ ಭಾಗವಾಗಿ ಇನ್ನೊಂದಿಷ್ಟು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಇದನ್ನೂ ಓದಿ:ಭಾರತದ ಮೇಲೆ ಅಟ್ಯಾಕ್​ಗೆ ಪಾಕ್​ನಿಂದ ದಿನಾಂಕ ಫಿಕ್ಸ್​​! ಸಿಕ್ಕಿದೆ ಸ್ಫೋಟಕ ಮಾಹಿತಿ
ಬಾಯಿ ಮತ್ತು ಮೂಗು ಮುಚ್ಚುವಂಥ ಮಾಸ್ಕ್​ ಧರಿಸುವುದು ಕಡ್ಡಾಯ. ಮಾಸ್ಕ್​ ಬಟ್ಟೆಯದ್ದೂ ಆಗಿರಬಹುದು, ಹ್ಯಾಂಡ್​ ಕರ್ಚಿಫ್​ ಕೂಡ ಬಳಸಬಹುದಾಗಿದೆ. ಹೊರಗಡೆ ಹೋಗುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಎಂದರೆ ಇಬ್ಬರು ವ್ಯಕ್ತಿಗಳ ನಡುವೆ ಕನಿಷ್ಠ ಒಂದು ಮೀಟರ್​ ಅಂತರವಿರಬೇಕು.
ಈ ನಿಯಮ ಪಾಲನೆ ಮಾಡದೇ ಹೋದರೆ ನಗರ ಪಾಲಿಕೆ ಪ್ರದೇಶಗಳಲ್ಲಿ 200 ರೂಪಾಯಿ ಹಾಗೂ ನಗರ ಪಾಲಿಕೆ ಹೊರತಾದ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುವುದು. ಈ ದಂಡವನ್ನು ವಸೂಲು ಮಾಡುವ ಅಧಿಕಾರದ ಬಗ್ಗೆಯೂ ಸರ್ಕಾರ ಸ್ಪಷ್ಟಪಡಿಸಿದೆ. ಸಬ್​ ಇನ್ಸ್​ಪೆಕ್ಟರ್​ ದರ್ಜೆಗಿಂತ ಮೇಲಿನ ದರ್ಜೆಯ ಅಧಿಕಾರಿಗಳು, ನಗರ ಪಾಲಿಕೆಯ ಆರೋಗ್ಯ ಇನ್ಸ್​ಪೆಕ್ಟರ್​, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಥವಾ ಸರ್ಕಾರದಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ಸ್ಥಳದಲ್ಲಿಯೇ ದಂಡವನ್ನು ವಸೂಲು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
ಇದನ್ನೂ ಓದಿ:ವಿಫಲವಾಯಿತೆ ಕರೊನಾ ಸೋಂಕಿತರ ‘ಸಂಜೀವಿನಿ’ ಪ್ಲಾಸ್ಮಾ ಚಿಕಿತ್ಸೆ? ಹುಸಿಯಾಯ್ತು ವೈದ್ಯ ಲೋಕದ ಭರವಸೆ, ನಿಜವಾಯ್ತು ಎಚ್ಚರಿಕೆ!
ಅಂದಹಾಗೆ ಈ ಹೊಸ ನಿಯಮಗಳು ಇನ್ನೂ ಒಂದು ವರ್ಷದವರೆಗೆ ಚಾಲ್ತಿಯಲ್ಲಿ ಇರುತ್ತದೆ. ಕರೊನಾ ಸೋಂಕು ಸಂಪೂರ್ಣ ನಿರ್ಮೂಲನೆ ಆದ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರಕ್ಕೆ ಅನ್ನಿಸಿದರೆ ಈ ನಿಯಮವನ್ನು ಒಂದು ವರ್ಷಕ್ಕಿಂತ ಮುನ್ನವೇ ಸ್ಥಗಿತಗೊಳಿಸುತ್ತದೆ. ಇಲ್ಲದೇ ಹೋದರೆ ಸರ್ಕಾರ ಮುಂದಿನ ಆದೇಶ ಹೊರಡಿಸುವವರೆಗೂ ನಿಯಮವನ್ನು ಕಟ್ಟುನಿಟ್ಟಾಗಿ, ಕಡ್ಡಾಯವಾಗಿ ಜನರು ಪಾಲಿಸಬೇಕಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
