ಬೆಂಗಳೂರು:ಹೊಸ ರೂಪಾಂತರ ಕರೊನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿ ಮಾಡಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆದೇಶಿಸಿದ್ದಾರೆ.
ಕರೊನಾದ ಹೊಸ ಪ್ರಬೇಧ ಹಾಗೂ ಎರಡನೇ ಅಲೆ ಆತಂಕ ಹಿನ್ನೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಜ.2ರವರೆಗೆ ರಾತ್ರಿ‌ ನೈಟ್​ ಕರ್ಫ್ಯೂ ಜಾರಿಯಾಗಿದೆ. ಕೋವಿಡ್​ ಟೆಕ್ನಿಕಲ್​ ಟೀಂನ ಸಲಹೆಯಂತೆ ಕರ್ಫ್ಯೂ ಜಾರಿಯಲ್ಲಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್​ ಆಗಲಿವೆ.
10 ದಿನಗಳ ಕಾಲ ಅಂದರೆ ಇಂದಿನಿಂದ ಜ.2ರ ವರೆಗೆ ರಾತ್ರಿ‌ 10 ರಿಂದ ಬೆಳಗ್ಗೆ ‌6ರ ವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಹೊಸ ವರ್ಷದ ಸಂಭ್ರಮಾಚಾರಣೆಯ ಪಾರ್ಟಿಗಳು ಸ್ಥಗಿತ ಆಗಲಿವೆ. ಈಗಾಗಲೇ ಬುಕಿಂಗ್​ ಮಾಡಿಕೊಂಡಿದ್ದ ಪಾರ್ಟಿಗಳೂ ಕ್ಯಾನ್ಸಲ್​ ಆಗಲಿವೆ. ರಾತ್ರಿ 10ರ ಬಳಿಕ ಬಿಎಂಟಿಸಿ ಬಸ್​ ಇರಲ್ಲ.
ಹೊಸ ರೂಪಾಂತರ ಕರೊನಾ ವೈರಲ್​ ಪತ್ತೆ ಹಚ್ಚಲು ನಿಮ್ಹಾನ್ಸ್, ವೈರಲಾಜಿ ಸೇರಿ ನಾಲ್ಕು ಕಡೆ ಟೆಸ್ಟಿಂಗ್​ ವ್ಯವಸ್ಥೆ ಇದೆ. ನಮ್ಮಲ್ಲಿ ಇನ್ನೂ ಆ ಮಾದರಿಯ ವೈರಸ್ ಪತ್ತೆಯಾಗಿಲ್ಲ. ಅಂತಹ ಪ್ರಕರಣ ಬಂದರೆ ಹೆಚ್ಚು ಟೆಸ್ಟ್ ಮಾಡುತ್ತೇವೆ. ಟೆಸ್ಟ್‌ ಮಾಡಲು ಯಾವುದೇ ಚಾರ್ಜ್ ಇಲ್ಲ. ಹಳೇ ಮಾದರಿಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 3 =
Remember me
