ಹುಬ್ಬಳ್ಳಿ:ವಿಶ್ವದ ವಿವಿಧೆಡೆ ಆತಂಕ ಮೂಡಿಸಿರುವ ಕರೊನಾ ಸೋಂಕು ದೇಶದಲ್ಲಿ ಮೊದಲ ಬಲಿಯನ್ನು ಪಡೆದಿದೆ. ಈಗಾಗಲೇ ಆರ್ಥಿಕ ಚಟುವಟಿಕೆ ಮೇಲೆ ಗದಾಪ್ರಹಾರ ಮಾಡಿರುವ ಕರೊನಾ ಕೋಟ್ಯಂತರ ಮೌಲ್ಯದ ಸಂಪತ್ತು ನಷ್ಟಕ್ಕೆ ಕಾರಣವಾಗಿದೆ. ಅಚ್ಚರಿಯೆಂದರೆ, ಇಷ್ಟೆಲ್ಲ ಹಿನ್ನಡೆಯ ನಡುವೆಯೂ ರಿಯಲ್ ಎಸ್ಟೇಟ್ ಉದ್ಯಮ ಸ್ಥಿರವಾಗಿದೆ.
‘ರಿಯಲ್ ಎಸ್ಟೇಟ್ ರಿಯಲ್ ಹೈ’ ಎಂಬ ಮಾತು ಈ ಉದ್ಯಮದಲ್ಲಿ ಚಾಲ್ತಿಯಲ್ಲಿದೆ. ಕರೊನಾ ಭೀತಿಯ ನಡುವೆಯೂ ರಿಯಲ್ ಎಸ್ಟೇಟ್ ಉದ್ಯಮ ದಂಗಾಗಿಲ್ಲ. ಎಂಥಾ ಅನಿಶ್ಚಿತ ಸಮಯದಲ್ಲೂ ಬಂಡವಾಳ ಹೂಡಿಕೆಗೆ ಈ ಉದ್ಯಮ ಪ್ರಶಸ್ತವಾದುದು ಎಂಬುದು ಮತ್ತೊಮ್ಮೆ ರುಜುವಾತಾಗಿದೆ.
ಭೀತಿಯ ಜತೆಗೆ ಕರೊನಾ ತಿಂಗಳ ಅವಧಿಯಲ್ಲಿ ಷೇರು ಮಾರುಕಟ್ಟೆ ಹಿಂದೆಂದೂ ಕಂಡರಿಯದ ಕುಸಿತ ಕಂಡಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಕಂಡಿದೆ ಎಂದು ದೇಶದ ಯಾವ ಮೂಲೆಯಿಂದಲೂ ವರದಿಯಾಗಿಲ್ಲ. ಈ ವಲಯದಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಎಂಬುದು ನಿಜವಾಗಿದೆ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ. ಇಲ್ಲಿ ಹೂಡಿಕೆ ಮಾಡಿ ಸಂಪತ್ತು ವೃದ್ಧಿಸಿಕೊಳ್ಳಿ ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ. ನೋಟ್ ಬ್ಯಾನ್ ಮತ್ತು ಜಿಎಸ್​ಟಿ ಜಾರಿ ಮಾಡಿದ್ದು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಕೆಲ ದಿನ ಪರಿಣಾಮ ಉಂಟು ಮಾಡಿತ್ತು. ಅದರಿಂದ ಇದೀಗ ಉದ್ಯಮ ಚೇತರಿಸಿಕೊಂಡಿದೆ. ಕರೊನಾದಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ. ಹೂಡಿಕೆಗೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್​ಗಿಂತ ರಿಯಲ್ ಎಸ್ಟೇಟ್ ಸೂಕ್ತ.
ಮನೆ ಖರೀದಿಗೆ ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಉತ್ತೇಜನ ನೀಡುತ್ತಿವೆ. ಬಡ್ಡಿದರ ಶೇ.8ರ ಆಸುಪಾಸಿನಲ್ಲಿದೆ. ಕೇಂದ್ರ ಸರ್ಕಾರ 2.67 ಲಕ್ಷ ರೂ. ವರೆಗೆ ಬಡ್ಡಿ ಸಬ್ಸಿಡಿ ನೀಡುತ್ತಿದೆ. ಕಡಿಮೆ ಮಾಸಿಕ ಕಂತಿನಲ್ಲಿ ದೀರ್ಘ ಅವಧಿಯ ಸಾಲ ಸೌಲಭ್ಯವು ಮನೆ ಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಈಗ ಹಣ ಕೂಡಿಟ್ಟು ಮುಂದೆ ಮನೆ ಕಟ್ಟುವುದಕ್ಕಿಂತ ಈಗಲೇ ಸಾಲ ಮಾಡಿ ಸ್ವಂತ ಮನೆ ಹೊಂದುವುದೇ ಲೇಸು ಎಂಬುದು ಬಹುತೇಕರ ಅನಿಸಿಕೆ. ಬ್ಯಾಂಕ್​ಗಳು ಸರ್ಕಾರಿ ನೌಕರರಿಗೆ ಸಾಲ ನೀಡಲು ಹಿಂಜರಿಯುತ್ತಿಲ್ಲ. ಇವೆಲ್ಲ ಅಂಶಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಳ್ಳೆಯ ದಿನಗಳನ್ನು ತಂದಿವೆ. ಇದರ ಪರಿಣಾಮವಾಗಿ ರಿಯಲ್ ಎಸ್ಟೇಟ್ ಉದ್ಯಮವೂ ತ್ವರಿತಗತಿಯಲ್ಲಿ ಏರುಮುಖವನ್ನು ಕಂಡಿದೆ.
ದೇಶದ ಜನಸಂಖ್ಯೆಯಲ್ಲಿ 38 ಕೋಟಿ ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಕೇಂದ್ರದ ವಸತಿ ಹಾಗೂ ನಗರ ಬಡತನ ನಿಮೂಲನೆ ಸಚಿವಾಲಯದ ಅಂಕಿ ಅಂಶ. 26.53 ಮಿಲಿಯನ್ ಕುಟುಂಬಗಳು ವಸತಿ ಸೌಲಭ್ಯ ಹೊಂದಿಲ್ಲ ಎಂದು ದೇಶದ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಹೇಳಲಾಗಿದೆ. ಇವು ಬಡತನ ನಿಮೂಲನೆ ಹಾಗೂ ವಸತಿ ಸೌಲಭ್ಯದ ಅಗತ್ಯತೆಯನ್ನು ಎತ್ತಿ ಹೇಳುತ್ತವೆ.
ಕರೊನಾದಿಂದ ದೇಶದಲ್ಲಿ ಎಲ್ಲ ವಲಯಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ. ಷೇರು ಮಾರುಕಟ್ಟೆ, ಎಂಎಫ್, ಹೂಡಿಕೆದಾರರ ವಿಶ್ವಾಸ ಕಳೆದು ಕೊಂಡಿದೆ. ಇಂಥಾ ಪರಿಸ್ಥಿತಿಯಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಅತ್ಯಂತ ಸ್ಥಿರವಾಗಿದೆ. ಈ ಉದ್ಯಮವೇ ಹೂಡಿಕೆಗೆ ಹೆಚ್ಚು ಸುರಕ್ಷಿತವಾದುದು.
| ಪ್ರದೀಪ ರಾಯ್ಕರ್ ಉಪಾಧ್ಯಕ್ಷರು, ಕ್ರೆಡೈ ಕರ್ನಾಟಕ
ಮಹಾಮಾರಿ ಕರೊನಾಗೆ ದೇಶದಲ್ಲಿ ಎರಡನೇ ಬಲಿ: ದೆಹಲಿಯಲ್ಲಿ 69 ವರ್ಷದ ವೃದ್ಧೆ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
