ಬೆಂಗಳೂರು:ಆಂಬುಲೆನ್ಸ್ ಬಾರದಿದ್ದಕ್ಕೆ ಅಸಮಾಧಾನಗೊಂಡ ಕರೊನಾ ಸೋಂಕಿತನೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಿಎಂ ನಿವಾಸ ಕಾವೇರಿ ಬಳಿಗೆ ಬಂದ ಘಟನೆ ಇಂದು(ಗುರುವಾರ) ನಡೆದಿದೆ.
‘ನನಗೆ ಕರೊನಾ ಪಾಸಿಟಿವ್​ ಇದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಎಲ್ಲೂ ಬೆಡ್ ಸಿಗುತ್ತಿಲ್ಲ. ಆಂಬುಲೆನ್ಸ್​ ಬರ್ತಿಲ್ಲ …ಸುಸ್ತಾಗ್ತಿದೆ ಆಸ್ಪತ್ರೆಗೆ ಶಿಫ್ಟ್ ಮಾಡಿ.. ಸಿಎಂ ಸರ್ ದಯವಿಟ್ಟು ಟ್ರೀಟ್ಮೆಂಟ್​ ಕೊಡ್ಸಿ…’ ಎಂದು ಕರೊನಾ ಸೋಂಕಿತನು ಸಿಎಂ ಮನೆ ಬಳಿ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ದೃಶ್ಯ ರಾಜ್ಯದ ದುರ್ಗತಿಯನ್ನೇ ಅನಾವರಣ ಮಾಡಿದಂತಿತ್ತು.
ಇದನ್ನೂ ಓದಿರಿಶ್ರೀರಾಮುಲು ಆಪ್ತನ ನಿಗೂಢ ಸಾವು; ತನಿಖೆಗೆ ರವಿ ಕೃಷ್ಣಾರೆಡ್ಡಿ ಆಗ್ರಹ
ಚಿಕಿತ್ಸೆ ಕೊಡಿಸುವಂತೆ ಸಿಎಂ ಮನೆ ಬಳಿಗೆ ಬಂದಿದ್ದ ಕರೊನಾ ಸೋಂಕಿತ ವ್ಯಕ್ತಿ ಬನಶಂಕರಿಯ ಅಂಬೇಡ್ಕರ್​ ನಗರದ ನಿವಾಸಿ. ಲಾಕ್​ಡೌನ್​ ಸಂದರ್ಭದಲ್ಲಿ ಅಲ್ಲಿಂದ ಸಿಎಂ ನಿವಾಸದ ಬಳಿಗೆ ಕುಟುಂಬದೊಂದಿಗೆ ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದ ಅವರನ್ನ ಒಂದು ಕಡೆ ನಿಲ್ಲಿಸಿದ್ದ ಭದ್ರತಾ ಸಿಬ್ಬಂದಿ, ಆಂಬುಲೆನ್ಸ್​ ಕರೆಸುವುದಾಗಿ ಭರವಸೆ ನೀಡಿದರು. ಆದರೆ, ತುಂಬಾ ಪ್ರಯಾಸ ಪಡುತ್ತಿದ್ದ ಸೋಂಕಿತನು ‘ಮುಖ್ಯಮಂತ್ರಿಗಳೇ ಬೇಗ ಆಸ್ಪತ್ರೆಗೆ ಸೇರಿ.. ನನಗೆ ಸುಸ್ತು ಆಗ್ತಿದೆ.. ಆಂಬುಲೆನ್ಸ್ ಕರೆಸಿ.. ‘ ಎಂದು ಗೋಗರೆಯುತ್ತಿದ್ದ ಪರಿ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.
ಸಿಎಂ ನಿವಾಸದ ಬಳಿಯಿದ್ದ ಪೊಲೀಸರು ಆಂಬುಲೆನ್ಸ್​ ಕರೆಸಿ ಕರೊನಾ ಸೋಂಕಿತನನ್ನು ಕುಟುಂಬ ಸಮೇತ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಸೋಂಕಿತನ ಪತ್ನಿಗೂ ಜ್ವರ ಇತ್ತು ಎನ್ನಲಾಗಿದೆ.
ಇದನ್ನೂ ಓದಿರಿಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್​
ಕೋವಿಡ್​ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವಂತಾಗಬೇಕು. ಆಂಬುಲೆನ್ಸ್ ಸೇವೆ, ಬೆಡ್​ ಅಭಾವ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ಹಲವು ಏರಿಯಾಗಳಲ್ಲಿ ಜನರಿಗೆ ಕರೊನಾ ಸೋಂಕು ದೃಢಪಟ್ಟು ಎರಡ್ಮೂರು ದಿನಗಳಾದರೂ ಆಂಬುಲೆನ್ಸ್​ ಬಾರದ, ಬೆಡ್​ ಸಿಗದ ನಿದರ್ಶನಗಳು ಸಾಕಷ್ಟು ಇವೆ. ಇದೀಗ ಜನರೇ ರಾಜ್ಯದ ಸಿಎಂ ಮನೆ ಬಾಗಿಲಿಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡು ಹೋಗುತ್ತಿರುವ ಪ್ರಹಸನ ಕರೊನಾ ಕರಾಳತೆಯ ನೈಜಸ್ಥಿತಿಯನ್ನು ತೆರೆದಿಟ್ಟಿದೆ.
ಲಾಕ್​ಡೌನ್​ ಸಂದರ್ಭದಲ್ಲಿ ಆಗಬೇಕಿದ್ದ ತಯಾರಿಗಳು ಈ ಹಿಂದೆ ಆಗಿಲ್ಲ. ಇಂದೊಂದು ಒಳ್ಳೆಯ ಅವಕಾಶ. ಈಗ ಲಾಕ್​ಡೌನ್​ ಜಾರಿಯಲ್ಲಿದ್ದು, ಕೂಡಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇನ್ನಾದೂ ಬಿಬಿಎಂಪಿ ಮತ್ತು ಆರೋಗ್ಯ ಅಧಿಕಾರಿಗಳು ಜನರಿಗೆ ಕಷ್ಟಕ್ಕೆ ಕೂಡಲೇ ಸ್ಪಂದಿಸುವ ಮೂಲಕ ಸಾವು-ನೋವನ್ನು ನಿಯಂತ್ರಿಸಬೇಕಿದೆ.ಸಿಎಂ ಮನೆ ಬಳಿ ಕರೊನಾ ಸೋಂಕಿತ ಕುಟುಂಬ ಸಮೇತ ಬಂದ ಮತ್ತಷ್ಟು ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.
https://www.facebook.com/DighvijayNews/videos/410952433182130/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
