ಬೆಂಗಳೂರು:5.70 ಲಕ್ಷ ರೂಪಾಯಿ ಪಾವತಿಸದಿದ್ದರೆ ಶವ ಕೊಡುವುದಿಲ್ಲ ಎಂದು ಧಮ್ಕಿ ಹಾಕಿದ್ದ ಆಸ್ಪತ್ರೆ ಸಿಬ್ಬಂದಿಯೇ ಈಗ ಹಣವೂ ಬೇಡ.. ಏನೂ ಬೇಡ.. ಮೊದಲು ಶವ ಕೊಂಡೊಯ್ಯಿರಿ ಎಂದು ಕುಟುಂಬ ಸದಸ್ಯರಿಗೆ ಕರೆ ಮಾಡಿ ಅಂಗಲಾಚುತ್ತಿದ್ದಾರೆ!
ಹೌದು, ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ನೀಡಲು 5.70 ಲಕ್ಷ ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚ ಪಾವತಿಸಲೇಬೇಕು ಎಂದು ಹೇಳಿದ್ದ ಆಸ್ಪತ್ರೆ ಸಿಬ್ಬಂದಿಯ ವರ್ತನೆ ಹಾಗೂ ಸಾವಿನ ಹಿಂದೆ ಕೆಲ ಅನುಮಾನ ಮೂಡಿದ್ದರಿಂದ ಮೃತನ ಕುಟುಂಬಸ್ಥರು ಮೃತದೇಹ ಪಡೆಯದೇ ಉತ್ತರ ಕ್ರಿಯೆಗಳನ್ನು ಮಾಡಿ ಮುಗಿಸಿದ್ದಾರೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಆಗಿದ್ದೇನು?:ಹಾಸನ ಮೂಲದ ಸ್ವಾಮಿ(67) 20 ವರ್ಷಗಳಿಂದ ಬೆಂಗಳೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಸ್ವಾಮಿ ಅವರು ಹಲವು ವರ್ಷಗಳ ಹಿಂದೆಯೇ ಪತ್ನಿಯಿಂದ ವಿಚ್ಛೇದನ ಪಡೆದು, ಕುಟುಂಬದ ಒಡನಾಟವಿಲ್ಲದೆ ಪ್ರಿಂಟಿಂಗ್​ ಪ್ರೆಸ್​ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಕಾಲುನೋವಿನ ಹಿನ್ನೆಲೆಯಲ್ಲಿ ಸ್ವಾಮಿ ಜು.11ರಂದು ವಿಶ್ವೇಶ್ವರಪುರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ತಪಾಸಣೆ ವೇಳೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಸೆ.11ರಂದು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿರಿಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ಹಾಸನದಲ್ಲಿರುವ ಮೃತನ ಸಹೋದರರಿಗೆ ಕರೆ ಮಾಡಿ ಸಾವಿನ ವಿಚಾರವನ್ನು ತಿಳಿಸಿದ್ದ ಆಸ್ಪತ್ರೆ ಸಿಬ್ಬಂದಿ, ಮೃತದೇಹ ಕೊಂಡೊಯ್ಯುವಂತೆ ತಿಳಿಸಿದ್ದರು. ಮರುದಿನ ಬೆಳಗ್ಗೆ ಆಸ್ಪತ್ರೆಗೆ ಕುಟುಂಬಸ್ಥರು ಬಂದಾಗ “ಕಾಲುನೋವೆಂದು ಸ್ವಾಮಿ ಆಸ್ಪತ್ರೆಗೆ ದಾಖಲಾದ ಬಳಿಕ ಯಾರೊಬ್ಬರೂ ಈ ಕಡೆ ತಲೆಹಾಕಿಲ್ಲ. ಕೋವಿಡ್​ ಟೆಸ್ಟ್​ ಮಾಡಿಸಿದಾಗ ಪಾಸಿಟಿವ್​ ಇರುವುದು ಗೊತ್ತಾಗಿತ್ತು. ಚಿಕಿತ್ಸೆ ನೀಡಲಾಯಿತಾದರೂ ಕಿಡ್ನಿ ಸಮಸ್ಯೆ ಇದ್ದಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಿಕಿತ್ಸಾ ವೆಚ್ಚ ಒಟ್ಟು 5.7 ಲಕ್ಷ ರೂ. ಆಗಿದ್ದು, ಅದನ್ನು ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ’ ಎಂದು ಹೇಳಿದ್ದರು.
ಮೃತನ ಸಹೋದರ ಸೀನ, ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಹೇಗಾದರೂ ಮಾಡಿ 2 ಲಕ್ಷ ರೂ. ಕಟ್ಟುತ್ತೇವೆ ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರು. ವಿಚಾರವನ್ನು ಬಿಬಿಎಂಪಿ ಗಮನಕ್ಕೆ ತಂದಾಗ “ಕರೊನಾ ಚಿಕಿತ್ಸಾ ವೆಚ್ಚ 1.7 ಲಕ್ಷ ರೂ.ನ್ನು ಬಿಬಿಎಂಪಿಯಿಂದ ಪಾವತಿಸಲಾಗಿದೆ. ಆಸ್ಪತ್ರೆಯವರಿಗೆ ಬಾಕಿ ಹಣ ಕಟ್ಟಿ” ಎಂದಿದ್ದರು. ಆದರೆ, ಬಾಕಿ 4 ಲಕ್ಷ ರೂ. ಕಟ್ಟುವಂತೆ ಆಸ್ಪತ್ರೆಯವರು ಪಟ್ಟು ಹಿಡಿದಿದ್ದರು. ಅಲ್ಲದೆ, ಮೃತದೇಹವನ್ನೂ ಕುಟುಂಬಕ್ಕೆ ತೋರಿಸಿರಲಿಲ್ಲ.
ಇದನ್ನೂ ಓದಿರಿಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!
ಹಣ ಕಟ್ಟಲಾಗದಿದ್ದರಿಂದ ಕುಟುಂಬದವರು ಉತ್ತರ ಕ್ರಿಯೆ ಮಾಡಿ ಮುಗಿಸಿದ್ದರು. ಸೆ.18ರಂದು ಕರೆ ಮಾಡಿದ್ದ ಆಸ್ಪತ್ರೆಯವರು, 2 ಲಕ್ಷ ರೂ. ಪಾವತಿಸಿ, ಬಾಕಿ ಮೊತ್ತಕ್ಕೆ ಖಾಲಿ ಚೆಕ್​ ಕೊಟ್ಟು ಮೃತದೇಹ ಪಡೆಯುವಂತೆ ಒತ್ತಾಯಿಸಿದ್ದರು. ಆದರೆ, ಖಾಲಿ ಚೆಕ್​ ಕೊಡಲು ಯಾರೂ ಮುಂದೆ ಬಾರದಿದ್ದರಿಂದ ಕುಟುಂಬ ಸುಮ್ಮನಾಗಿತ್ತು. ನಂತರ ಇತ್ತೀಚೆಗೆ ಕರೆ ಮಾಡಿ ಹಣ ಬೇಡ ಶವ ಕೊಂಡೊಯ್ಯಿರಿ ಎಂದು ಹೇಳಿದ್ದಾರೆ.
ಮೃತದೇಹ ಪಡೆಯಲು ಕಾನೂನು ಅಡ್ಡಿ:ನಿರ್ಮಲಾ ಎಂಬುವರು ಪತ್ನಿ ಎಂದು ಸಹಿ ಮಾಡಿ ಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಾಮಿ ಹಲವು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ. ಪತ್ನಿ ಎಂದು ಸಹಿ ಮಾಡಿರುವ ನಿರ್ಮಲಾ ಯಾರು? ಎಂಬ ಪ್ರಶ್ನೆ ಕುಟುಂಬಸ್ಥರಿಗೆ ಕಾಡಿದೆ. ಸ್ವಾಮಿ ಮರುವಿವಾಹ ಆಗಿರುವ ವಿಚಾರವೂ ತಿಳಿದಿಲ್ಲ. ಆದ್ದರಿಂದ, ಆಕೆಯ ಅನುಪಸ್ಥಿತಿಯಲ್ಲಿ ಮೃತದೇಹ ಪಡೆಯಲು ಸಾಧ್ಯವಿಲ್ಲ. ಮುಂದೊಂದು ದಿನ ಆಕೆ, “ನಾನು ಸ್ವಾಮಿ ಪತ್ನಿ. ಹಣ ಹಾಗೂ ಚಿನ್ನಾಭರಣಕ್ಕಾಗಿ ನನಗೆ ತಿಳಿಸದೇ ಮೃತದೇಹ ಪಡೆದಿದ್ದಾರೆ” ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಮೃತದೇಹ ತೆಗೆದುಕೊಂಡು ಹೋಗುವಂತೆ ಪೊಲೀಸರಿಂದಲೂ ಆಸ್ಪತ್ರೆಯವರು ಕರೆ ಮಾಡಿಸಿದ್ದರು. ಈ ವಿಚಾರವನ್ನು ಅವರಿಗೂ ತಿಳಿಸಲಾಗಿದೆ. ಆಸ್ಪತ್ರೆಯವರು ಖಾಲಿ ಚೆಕ್​ ಕೇಳಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮೃತ ಸ್ವಾಮಿ ಸಹೋದರ ಸೀನ ಮಾಹಿತಿ ನೀಡಿದ್ದಾರೆ.
ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
