ಬೆಳಗಾವಿ:ಕರೊನಾ ಸೋಂಕಿತನೋರ್ವ ಐಸಿಯುನಲ್ಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರೆಲ್ಲ ಸೇರಿ ಆಂಬುಲೆನ್ಸ್​ಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಮ್ಸ್​ ಆಸ್ಪತ್ರೆಯ ಕೊವಿಡ್​ ವಾರ್ಡ್​ ಬಳಿ ಘಟನೆ ನಡೆದಿದೆ.
ಕರೊನಾ ಸೋಂಕಿತನನ್ನು ಅಥಣಿಯಿಂದ ಆಂಬುಲೆನ್ಸ್​ ಮೂಲಕ ಕರೆತರಲಾಗಿತ್ತು. ನಂತರ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಅಲ್ಲೇ ಮೃತಪಟ್ಟಿದ್ದಾರೆ.
ಸೋಂಕಿತನ ಸಾವಿನ ಸುದ್ದಿ ಕೇಳುತ್ತಲೇ ಅವರ ಸಂಬಂಧಿಕರು ಆಸ್ಪತ್ರೆ ಎದುರು ಗಲಾಟೆ ಶುರು ಮಾಡಿದ್ದಾರೆ. ಅದನ್ನು ನೋಡಿದ ಆಂಬುಲೆನ್ಸ್ ಚಾಲಕ ಮತ್ತು ನರ್ಸ್​ಗಳು ಆಸ್ಪತ್ರೆಯೊಳಗೆ ಓಡಿ ಹೋಗಿದ್ದಾರೆ. ಉದ್ರಿಕ್ತ ಗುಂಪು ಐಸಿಯುನಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡಲೂ ಯತ್ನಿಸಿದೆ.ಇದನ್ನೂ ಓದಿ:ಕೊವಿಡ್​-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ
ಪೊಲೀಸ್​ ವಾಹನ, ಸ್ಥಳದಲ್ಲಿದ್ದ ಕಾರುಗಳ ಗಾಜನ್ನೂ ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ವಾರ್ಡ್​ಗಳಿಗೂ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಆಂಬುಲೆನ್ಸ್​ಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಪೊಲೀಸರೇ ನಂದಿಸಿದ್ದು, ಗುಂಪನ್ನು ಚದುರಿಸಿದ್ದಾರೆ. ಸ್ಥಳಕ್ಕೆ ಡಿಸಿ ಎಂ. ಜಿ.ಹಿರೇಮಠ, ಎಸ್​ಪಿ ಲಕ್ಷ್ಮಣ್​ ನಿಂಬರಗಿ, ಪೊಲೀಸ್​ ಕಮಿಷನರ್​ ತ್ಯಾಗರಾಜ್​, ಜಿಲ್ಲಾ ಪಂಚಾಯಿತಿ ಸಿಇಒ ರಾಜೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್​)
VIDEO| ಅಮಾವಾಸ್ಯೆ ದಿನದಂದೇ ಹೂತಿದ್ದ ಶವವನ್ನು ಹೊತ್ತೊಯ್ದ ದುಷ್ಕರ್ಮಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 7 =
Remember me
