ದೇವನಹಳ್ಳಿ :ಸರ್ಕಾರಿ ಕೋವಿಡ್​ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯಿಲ್ಲದೆ ಆಕ್ಸಿಜನ್ ಸ್ಥಗಿತಗೊಂಡು ಕರೊನಾ ರೋಗಿಗಳು ನರಳಾಟ ಅನುಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಸರ್ಕಾರಿ ಕೋವಿಡ್​ ಆಸ್ಪತ್ರೆಯಲ್ಲಿ ಸಂಭವಿಸಿರುವ ಈ ಸಾವಿಗೆ ಆಸ್ಪತ್ರೆಯ ಮೈಂಟೇನೆನ್ಸ್​​ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
ಇಂದು‌ ಬೆಳಗ್ಗೆ 11 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಕಟ್​ ಆಯಿತು. ಆದರೆ ಕರೆಂಟ್​ ಹೋದರೂ ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಜನರೇಟರ್ ಆನ್ ಮಾಡದೆ ನಿರ್ಲಕ್ಷ್ಯ ವಹಿಸಿದರು. ಅರ್ಧ ಗಂಟೆ ಕರೆಂಟ್ ಬಾರದ ಹಿನ್ನೆಲೆಯಲ್ಲಿ ಆಕ್ಸಿಜನ್ ಮೇಲೆ ಅವಲಂಬಿತರಾಗಿರುವ ರೋಗಿಗಳ ನರಳಾಟ ಶುರುವಾಯಿತು. ಈ ವೇಳೆ ಮಾಲೂರು ಮೂಲದ ಕರಿನಾಯಕನಹಳ್ಳಿ ಗ್ರಾಮದ ಸುರೇಶ್(33) ಆಕ್ಸಿಜನ್ ಸಿಗದೆ ಸಾವಪ್ಪಿದರು.
ಇದನ್ನೂ ಓದಿ:ಸೋಂಕಿತರು, ಸಿಬ್ಬಂದಿಯ ನೋವಿಗೆ ಮಿಡಿದ ತರಳಬಾಳು ಮಠ; ವಿಕ್ಟೋರಿಯಾ ಆಸ್ಪತ್ರೆಗೆ ಆಹಾರ ಪೂರೈಕೆ
ಆಸ್ಪತ್ರೆಯ ಬಳಿ ಮೃತನ ಕುಟುಂಬಸ್ಥರ ಆಕ್ರಂದನ ಗಗನ ಮುಟ್ಟಿದೆ. ಕರೆಂಟ್​ ಕಟ್​​​ ಆದ ತಕ್ಷಣ ಜನರೇಟರ್ ಹಾಕದೆ ಸಾವಿಗೆ ಕಾರಣರಾದ ಆಸ್ಪತ್ರೆ ಸಿಬ್ಬಂದಿ ವಿರುದ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 2 =
Remember me
