ಕಾರವಾರ:ಸೋಮವಾರ ಇಲ್ಲಿನ ಕ್ರಿಮ್ಸ್ ಕೋವಿಡ್ ವಾರ್ಡ್ ನಿಂದ ಮೊಬೈಲ್ ಎಗುರಿಸಿ ಗ್ಲಾಸ್ ಒಡೆದು ಪರಾರಿಯಾಗಿದ್ದ ಕರೊನಾ ಸೋಂಕಿತ ಕಳ್ಳ ಎರಡನೇ ಬಾರಿ ನಾಪತ್ತೆಯಾಗಿ ನಗರದಲ್ಲಿ ತಲ್ಲಣ ಮೂಡಿಸಿದ್ದಾನೆ.
ಸೋಮವಾರ ಓಡಿ ಹೋದವನನ್ನು ಕದ್ರಾದಲ್ಲಿ ಪೊಲೀಸರು ಬಂಧಿಸಿದ್ದರು. ವಿಶೇಷ ಕೋಣೆಯಲ್ಲಿ ಇಟ್ಟಿದ್ದರು. ಮಂಗಳವಾರ ಮಧ್ಯರಾತ್ರಿ ಮತ್ತೆ ಓಡಿದ್ದು, ಬೆಳಗಿನವರೆಗೂ ಪೊಲೀಸರು ನಗರದಾದ್ಯಂತ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:VIDEO| ಮೆಡಿಕಲ್​ ಕ್ಲೀನಿಕ್​ನಲ್ಲಿ ಸ್ಪೋಟ: 19 ಮಂದಿಯ ದುರ್ಮರಣ, 6 ಜನರ ಸ್ಥಿತಿ ಗಂಭೀರ
ಧಾರವಾಡ ಮೂಲದ ರಾಜೇಶ ನಾಯಿಕ ಎಂಬ ಕತರನಾಖ್ ಕಳ್ಳ ಉಡುಪಿ ಪೊಲೀಸರಿಂದ ಬಂಧಿತನಾಗಿದ್ದ. ಧಾರವಾಡ ಪೊಲೀಸರು ತನಿಖೆಗೆ ಪಡೆದಿದ್ದರು‌‌. ಬೈಕ್ ಕಳ್ಳತನದ ತನಿಖೆಗೆ ಶಿರಸಿ ಶಹರ ಠಾಣೆ ಪೊಲೀಸರು ಜೂನ್ 24 ರಂದು ವಶಕ್ಕೆ ಪಡೆದಿದ್ದರು.
ನ್ಯಾಯಾಧೀಶರ ಸೂಚನೆಯಂತೆ ಕರೊನಾ ಪರೀಕ್ಷೆ ನಡೆಸಿದಾಗ ಆತನಲ್ಲಿ ಸೋಂಕು ಖಚಿತವಾಗಿತ್ತು‌. ಇದರಿಂದ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. 6 ಜನ ಪೊಲೀಸರು, ನ್ಯಾಯಾಧೀಶರನ್ನು, ನ್ಯಾಯಾಲಯದ ನಾಲ್ವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆತನನ್ನು ಕಾರವಾರ ಕ್ರಿಮ್ಸ್ ಕರೊನಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಇದನ್ನೂ ಓದಿ:ಡೇಟಿಂಗ್​ಗೆ ಯುವತಿ ಜತೆಗೆ ರೂಂ ಬುಕ್ ಮಾಡಿಕೊಳ್ಳುವ ಆಸೆಗೆ ಬಿದ್ದ ಯುವಕನ ವ್ಯಥೆ ಹೇಳತೀರದು
ಈ ಹತ್ತು ಸಿನಿಮಾಗಳನ್ನು ಆನ್​ಲೈನ್​ನಲ್ಲಿ ನೋಡಲೇಬೇಡಿ!; ನಿಮ್ಮ ಅಕೌಂಟ್​ ಹ್ಯಾಕ್​ ಆಗೋದು ಪಕ್ಕಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
