ಹುಬ್ಬಳ್ಳಿ:ಜನರೇ, ಸ್ವಲ್ಪ ಜಾಗ್ರತೆ! ಕೋವಿಡ್ ವಾಡ್೯ನಿಂದ ಇಂದು ಮುಂಜಾನೆ ಸೋಂಕಿತನೊಬ್ಬ ಎಸ್ಕೇಪ್​ ಆಗಿದ್ದು, ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್​ ಠಾಣೆಗೆ ಮಾಹಿತಿ ಕೊಡಿ.
ಕಳ್ಳತನ ಪ್ರಕರಣದಲ್ಲಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಗೆ ಕರೊನಾ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಯ ಕೋವಿಡ್​ ವಾರ್ಡ್​ಗೆ ಸೇರಿಸಲಾಗಿತ್ತು. ಇಂದು ಬೆಳಗ್ಗೆ 5.30ರ ಸುಮಾರಿನಲ್ಲಿ ಆಸ್ಪತ್ರೆಯಿಂದ ಈತ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿರಿಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್​ ಹಿಸ್ಟರಿ!
ಇಬ್ಬರು ಪೊಲೀಸ್ ಸಿಬ್ಬಂದಿ ಕಾವಲಿದ್ದರೂ ಅವರ ಕಣ್ತಪ್ಪಿಸಿ ಕರೊನಾ ಸೋಂಕಿತನು(P.no. 14537) ಎಸ್ಕೇಪ್​ ಆಗಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಾರ್ವಜನಿಕರು ಮಾತ್ರವಲ್ಲ, ಕಿಮ್ಸ್ ಸಿಬ್ಬಂದಿಯಲ್ಲೂ ಆತಂಕ ಶುರುವಾಗಿದೆ.
ಕಳ್ಳತನ ಆರೋಪದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರಿಗೂ ಕರೊನಾ ಭೀತಿ ಕಾಡುತ್ತಿದ್ದು, ಇದೀಗ ಮತ್ತೊಂದು ಟೆನ್ಷನ್​ ತಂದೊಡ್ಡಿದ್ದಾನೆ. ಎರಡು ದಿನಗಳ‌ ಹಿಂದೆ ಕಳ್ಳತನ ಆರೋಪಿಯೂ ಆದ ಕರೊನಾ ಸೋಂಕಿತನನ್ನು ಕಿಮ್ಸ್​ಗೆ ಅಡ್ಮಿಟ್ ಮಾಡಲಾಗಿತ್ತು.
ಕರೊನಾ ಸೋಂಕಿತರು ಆಸ್ಪತ್ರೆಗಳಿಂದ ಪರಾರಿ ಆಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಪದೇಪದೆ ಸಂಭವಿಸುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸುತ್ತಿದೆ. ಕಳೆದ ವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ ವಾರ್ಡ್​ನಲ್ಲಿದ್ದ ಸೋಂಕಿತನೊಬ್ಬ ಸೆಕ್ಯೂರಿಟಿಗಳಿಗೆ ಉಗಿದು ಎಸ್ಕೇಪ್​ ಆಗಿದ್ದ.
https://www.facebook.com/VVani4U/videos/315474599637835/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − five =
Remember me
