ಮುಳಗುಂದ:ಇಂದು ಕರೊನಾ ಸೋಂಕಿಗೆ ಬಲಿಯಾದ ಗದಗ ತಾಲೂಕಿನ ಸೀತಾಲಹರಿ ಗ್ರಾಮದ ಕೆಎಸ್​ಆರ್​ಟಿಸಿ ಬಸ್ ಚಾಲಕ (52 ವರ್ಷ)ನ ಪ್ರೈಮರಿ ಕಾಂಟ್ಯಾಕ್ಟ್ ನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.
ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಈತ ಗುರುವಾರ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಈತನ ಗಂಟಲಿನಲ್ಲಿ ಕೈ ಹಾಕಿ ಹಲವರು ಕಿರುನಾಲಿಗೆ ತಿಕ್ಕಿದ್ದಾರೆ, ಮೈ-ಕೈ ಒತ್ತಿದ್ದಾರೆ. ಇಷ್ಟೇ ಅಲ್ಲ, ಉಸಿರಾಟದ ತೊಂದರೆ ಆಗಿದೆ ಎಂದು ಕೆಲವರು ಈತನ ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟಿದ್ದಾರೆ…
ಇದನ್ನೂ ಓದಿರಿಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ
ಮೃತನು ಕೊಪ್ಪಳ ಡಿಪೋದಲ್ಲಿ ಚಾಲಕನಾಗಿದ್ದ. ಲಾಕ್​ಡೌನ್​ ವೇಳೆ ಊರಿಗೆ ಬಂದವ ವಾಪಸ್​ ಹೋಗಿರಲಿಲ್ಲ. ಕಳೆದ ಒಂದು ವಾರದಿಂದ ಈತನಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದರೂ ಗ್ರಾಮದ ಹಲವರು ಈತನೊಂದಿಗೆ ಚಕ್ಕಾ ಆಡಿದ್ದಾರೆ. ಟೈಂ ಪಾಸ್​ಗಾಗಿ ಇಸ್ಪೀಟ್​ ಆಡಿದ್ದಾರೆ. ಹುಷಾರಿಲ್ಲ, ಕಿರುನಾಲಿಗೆ ಬಿದ್ದಿದೆ ಎಂದು ಈತನ ಗಂಟಲಿಗೆ ಕೈ ಹಾಕಿ ನಾಲಿಗೆಯನ್ನು ತಿಕ್ಕಿದ್ದರು. ಆದರೆ ಗುರುವಾರ ಆತ ಅಸುನೀಗಿದ್ದ.
ಮೃತನಿಗೆ ಕರೊನಾ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಈತನೊಂದಿಗೆ ಸಂಪರ್ಕ ಹೊಂದಿದ 60 ಜನರನ್ನು ಪಟ್ಟಣದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ.
ಸೀತಾಲಹರಿ ಗ್ರಾಮದ ಜನಸಂಖ್ಯೆ ಸಾವಿರ ಸಮೀಪ ಇದೆ. ಮೃತನು ಸಾವಿಗೂ ಮುನ್ನ ಹಲವರ ಸಂಪರ್ಕ ಹೊಂದಿದ್ದರಿಂದ ಇಡೀ ಗ್ರಾಮದ ಜನರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಕೆಎಸ್​ಆರ್​ಟಿಸಿ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ, ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಮರಣಶಾಸನ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
