ರಾಯಚೂರು:ಜಿಲ್ಲೆಯಲ್ಲಿ ಮತ್ತೆ 39 ಮಂದಿಗೆ ಕರೊನಾ ಪಾಸಿಟಿವ್​ ಬಂದಿದ್ದು, ಇದರಲ್ಲಿ ಎರಡು ಮತ್ತು ಮೂರು ವರ್ಷ ವಯಸ್ಸಿನ ಹೆಣ್ಣು ಮಗು ಕೂಡ ಸೇರಿವೆ. ಶನಿವಾರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಕರೊನಾ ಬುಲೆಟಿನ್​ನಲ್ಲಿ 39 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ. ಇನ್ನು ಸಂಜೆಯ ಬುಲೆಟಿನ್​ನಲ್ಲಿ ಇನ್ನೆಷ್ಟು ಸೋಂಕಿತರ ಸಂಖ್ಯೆ ಹೊರಬೀಳಲಿದೆಯೋ ಎಂಬ ಆತಂಕ ದಟ್ಟವಾಗಿದೆ.
ಇದನ್ನೂ ಓದಿರಿರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!
ಇಲ್ಲಿಯವರೆಗೆ ಒಟ್ಟು 66 ಮಂದಿಗೆ ಸೋಂಕು ದೃಢಪಟ್ಟಿದೆ. ಶನಿವಾರ ಒಂದೇ ದಿನ ಪತ್ತೆಯಾದ 39 ಸೋಂಕಿತರ ಪೈಕಿ ಒಬ್ಬರು ಆಂಧ್ರಪ್ರದೇಶದಿಂದ ಬಂದ ಕಾರ್ಮಿಕ. ಇನ್ನೊಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕರೊನಾ ಬಂದಿದೆ. ಉಳಿದ 37 ಜನ ಮಹಾರಾಷ್ಟ್ರದಿಂದ ಬಂದು ಜಿಲ್ಲೆಯ ವಿವಿಧೆಡೆ ಕ್ವಾರಂಟೈನಲ್ಲಿದ್ದವರು. ಇಂದು ಕರೊನಾ ಪಾಸಿಟಿವ್​ ಬಂದ ಪುಟ್ಟ ಕಂದಮ್ಮಗಳು ಕೂಡ ಮಹಾರಾಷ್ಟ್ರದಿಂದ ಬಂದವರ ಮಕ್ಕಳು. ಶನಿವಾರ ಬೆಳಗಿನ ಜಾವದಿಂದಲೇ ಮೌಖಿಕ ಮಾಹಿತಿ ಪಡೆದ ಜಿಲ್ಲಾಡಳಿತ ಎಲ್ಲರನ್ನೂ ರಾಯಚೂರಿನ ಸರ್ಕಾರಿ ಆಸ್ಪತ್ರೆಯ ಕರೊನಾ ವಿಭಾಗಕ್ಕೆ ರವಾನಿಸುತ್ತಿತ್ತು.
ಇದನ್ನೂ ಓದಿರಿಮೊಬೈಲ್​ ನೆಟ್​ವರ್ಕ್ ಸಿಗ್ತಿಲ್ಲ ಎಂದು ಗುಡ್ಡ ಏರಿದ್ದ ಯುವಕನಿಗೆ ಗುಂಡೇಟು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + one =
Remember me
