ಬೆಂಗಳೂರು:ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾ ಸೋಂಕಿನ ಛಾಯೆ ನಗರ ಪೊಲೀಸ್ ಕಮಿಷನರ್ ಭಾಸ್ಕರರಾವ್ ಅವರ ಮೇಲೂ ಆವರಿಸಿದೆ.ಭಾಸ್ಕರರಾವ್ ಅವರ ಕಾರು ಚಾಲಕನಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, ಆಯುಕ್ತರು ಸದ್ಯ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕರೊನಾ ಚೈನ್​ ಲಿಂಕ್​ ಕತ್ತರಿಲು ಸರ್ಕಾರ, ಬಿಬಿಎಂಪಿ, ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜಧಾನಿಯನ್ನು ಕಂಪ್ಲೀಟ್ ಲಾಕ್​ಡೌನ್ ಮಾಡಲಾಗಿದ್ದು, ಜನರು ಅನಗತ್ಯವಾಗಿ ರಸ್ತೆಗಿಳಿಯದಂತೆ ಎಲ್ಲ ವಾರ್ಡ್​ನಲ್ಲೂ ಪೊಲೀಸ್​ ಕಣ್ಗಾವಲಿದೆ.
ಇದನ್ನೂ ಓದಿರಿಬೆಂಗಳೂರಿನಲ್ಲಿ ಇನ್ನೂ 15 ದಿನ ಲಾಕ್​ಡೌನ್​ ಸಾಧ್ಯತೆ
ಸದ್ಯ ತಮ್ಮ ಕಾರು ಚಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ಭಾಸ್ಕರರಾವ್​ ಅವರು ಮನೆಯಿಂದಲೇ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿಗೆ ಅಗತ್ಯ ನಿದರ್ಶನ ನೀಡಲಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಐದು ಬಾರಿ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದಾಗಿ ಟ್ವಿಟರ್​ನಲ್ಲಿ ಹೇಳಿಕೊಂಡಿರುವ ಭಾಸ್ಕರ್ ರಾವ್​ ಅವರು ತಮಗೆ ಸೋಂಕು ಇಲ್ಲ ಎಂದು ಹೇಳಿದ್ದಾರೆ.
My driver is tested Corona positive, I have home quarantined myself for 4 days and will get myself tested again on Monday for the (5) fifth time since 3 months. I had to be in numerous inadvertent interactions with positive cases. Seek your good wishes, am not yet positive !!
— Bhaskar Rao (@Nimmabhaskar22)July 17, 2020

ಸಿಬ್ಬಂದಿಗೆ ಸಾಮೂಹಿಕವಾಗಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪೈಕಿ ಭಾಸ್ಕರ್​ ರಾವ್​ರ ಕಾರು ಚಾಲಕನ ವರದಿ ಪಾಸಿಟಿವ್​ ಬಂದಿದೆ.
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
