ದಾವಣಗೆರೆ:ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್​ ಬಿ.ಜಿ. ಅಜಯಕುಮಾರ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ನಾಲ್ಕೈದು ದಿನಗಳಿಂದ ಸುಸ್ತು, ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಶನಿವಾರ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್​ ಬಂದಿದೆ. ಅವರ ಪತ್ನಿ ಹಾಗೂ ಮಗನಿಗೂ ಸೋಂಕು ತಗುಲಿದೆ. ಮಗಳಿಗೆ ನೆಗೆಟಿವ್​ ಬಂದಿದೆ.
ಇದನ್ನೂ ಓದಿರಿಐಸೋಲೇಷನ್ ವಾರ್ಡ್​ನಲ್ಲಿ ಕಾಮೇಗೌಡರಿಗೆ ಆರೈಕೆ ಮಾಡೋರಿಲ್ಲ, ಅನ್ನ-ನೀರು ತ್ಯಜಿಸಿ ನೋವಿನಿಂದ ನರಳಾಟ!
ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇಯರ್​ ಅಜಯಕುಮಾರ್​ ಕುಟುಂಬ ಹೋಂ ಐಸೋಲೇಶನ್​ಗೆ ಒಳಪಟ್ಟಿದೆ.
ಜನಪ್ರತಿನಿಧಿಯಾಗಿ ವಾರ್ಡ್​ಗಳಿಗೆ ಹೋಗಿರುತ್ತೇವೆ. ಯಾರೇ ಕರೆದರೂ ಅವರ ಅಹವಾಲು ಆಲಿಸುತ್ತೇವೆ. ಅಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೋಂಕು ಬಂದಿರಬಹುದು. ಆದರೆ, ಹೆದರುವ ಅಗತ್ಯವಿಲ್ಲ ಎಂದು ಮೇಯರ್ ಹೇಳಿದರು.
ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಕಡಿಮೆ. ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಎಚ್ಚರ ವಹಿಸಬೇಕು. ಬೇರೆ ಕೆಲವು ಜಿಲ್ಲೆಗಳಿಗೆ ಹೋಲಿಸಿದಾಗ ದಾವಣಗೆರೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ. ಇದು ಹೆಚ್ಚಾಗಲು ಆಸ್ಪದ ನೀಡಬಾರದು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು ಎಂದು ಮೇಯರ್ ಸಲಹೆ ನೀಡಿದರು.
ತಾರಕಕ್ಕೇರಿದೆ ‘ಕುದುರೆ’ ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ‘ಸತ್ತ ಕುದುರೆ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
