ಮೈಸೂರು:ಮಹಾಮಾರಿ ಕರೊನಾ ಸೋಂಕು ರಾಜಕಾರಣಿಗಳನ್ನೂ ಬಿಟ್ಟುಬಿಡದೆ ಕಾಡುತ್ತಿದೆ. ರಾಜ್ಯದ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾದಿಯಾಗಿ ಬಹುತೇಕ ರಾಜಕಾರಣಿಗಳಿಗೂ ಸೋಂಕು ತಗುಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಜಿ.ಟಿ.ದೇವೇಗೌಡ ಅವರಿಗೂ ಕರೊನಾ ಪಾಸಿಟಿವ್​ ಬಂದಿದೆ.
ಚಾಮುಂಡೇಶ್ವರಿ ಕೇತ್ರದ ಶಾಸಕ ದೇವೇಗೌಡಗೆ ಕರೊನಾ ದೃಢಪಟ್ಟಿದ್ದು, ಮೈಸೂರು ಜಿಲ್ಲೆಯಲ್ಲಿ ಸೋಂಕು ತಗುಲಿದ ಮೊದಲ ಶಾಸಕ ಇವರು.
ಇದನ್ನೂ ಓದಿರಿಸಿಎಂ ಯಡಿಯೂರಪ್ಪಗೆ ವರ್ಕ್​ ಫ್ರಮ್ ಹಾಸ್ಪಿಟಲ್
ತಮಗೆ ಸೋಂಕು ದೃಢಪಟ್ಟಿರುವ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಟಿಡಿ, ‘ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು ವರದಿ ಪಾಸಿಟಿವ್ ಬಂದಿದೆ. ರೋಗ ಲಕ್ಷಣ ಇಲ್ಲದಿದ್ದರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ 7 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಕೂಡಲೇ ಕ್ವಾರಂಟೈನ್​ಗೆ ಒಳಗಾಗುವ ಮೂಲಕ ಮುಂಜಾಗ್ರತೆ ವಹಿಸಿ’ ಎಂದು ಮನವಿ ಮಾಡಿದ್ದಾರೆ.
ನಾನು ಕೋವಿಡ್-19ಪರೀಕ್ಷೆಗೆ ಒಳಗಾಗಿದ್ದು ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ.ಕಳೆದ 7 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಪರೀಕ್ಷೆಗೆ ಒಳಪಟ್ಟು,ಕೂಡಲೇ ಕ್ವಾರಂಟೈನ್ ಗೆ ಒಳಗಾಗಿ ಮುಂಜಾಗ್ರತೆ ವಹಿಸಿ ಎಂದು ವಿನಂತಿಸುತ್ತೇನೆ.
— GT Devegowda (@GTDevegowda)August 5, 2020

ವಿಚಾರಣೆ ವೇಳೆ ಮತ್ತೊಂದು ಭಯಾನಕ ಸುಳ್ಳು ಹೇಳಿದ ಡ್ರೋನ್ ಪ್ರತಾಪ್​, ವೈದ್ಯರ ವಿರುದ್ಧವೇ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
