ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಆಪ್ತಸಹಾಯಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ.
ಬೆಳಗ್ಗೆ ಅಷ್ಟೇ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ. ಇದೀಗ ಎಚ್​ಡಿಕೆ ಆಪ್ತಸಹಾಯಕರಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಹೋಗಿದ್ದರು. ಇವರೊಂದಿಗೆ ಕರೊನಾ ಸೋಂಕು ತಗುಲಿರುವ ಆಪ್ತ ಸಹಾಯಕರೂ ಇದ್ದರು. ಬೋಜೆಗೌಡ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಭದ್ರತಾ ತಂಡವನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿರಿಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!
ವರದಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಕಾರು ಚಾಲಕನಿಗೆ ವರದಿ ನೆಗೆಟಿವ್ ಬಂದಿದೆ. ಆಪ್ತ ಸಹಾಯಕನಿಗೆ ಪಾಸಿಟಿವ್ ಬಂದಿರುವುದು ಎಚ್‌ಡಿಕೆ ಕುಟುಂಬ ಮತ್ತು ಕೆಲ ನಾಯಕರಿಗೂ ಸೋಂಕಿನ ಭೀತಿ ಶುರುವಾಗಿದೆ.
ರಾಜ್ಯದಲ್ಲಿ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಸೋಂಕು ರಾಜ್ಯದ ಶಕ್ತಿಸೌಧ ವಿಧಾನಸೌಧ, ವಿಕಾಸಸೌಧ, ವೈದ್ಯ ಸಿಬ್ಬಂದಿ, ಪೊಲೀಸ್‌ ಠಾಣೆ, ಅಗ್ನಿಶಾಮಕ ದಳ, ಕೆಎಸ್​ಆರ್​ಪಿ, ಹೋಮ್​ ಗಾರ್ಡ್, ಸಿಸಿಬಿ, ಸಿಐಡಿ, ಎಸಿಬಿ, ‌ವಿಧಿವಿಜ್ಞಾನ ಪ್ರಯೋಗಾಲಯ, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಶಾಸಕರ ಕಚೇರಿ… ಹೀಗೆ ಎಲ್ಲಕಡೆಯೂ ಕಾಲಿಟ್ಟು ಸಾವು-ನೋವು ಉಂಟು ಮಾಡಿದೆ.
4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
