ಬೆಂಗಳೂರು:ಇತರ ವಿದ್ಯಾರ್ಥಿಗಳೊಂದಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕನಿಗೂ ಕರೊನಾ ಪಾಸಿಟಿವ್ ಬಂದಿದೆ. ಈತನ ಜತೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳು ಮತ್ತು ಕೊಠಡಿ ಸಿಬ್ಬಂದಿಗೆ ಕೋವಿಡ್​ ಭೀತಿ ಆವರಿಸಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಇಂದು ಗಣಿತ ವಿಷಯದ ಪರೀಕ್ಷೆ ಇತ್ತು. ಎಂದಿನಂತೆ ಬಾಲಕ ಪರೀಕ್ಷೆ ಬರೆಯುತ್ತಿದ್ದ. ಕಳೆದ ವಾರ ಡೆಂಘೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅಂದರೆ ಜೂನ್ 23ರಂದು ಈ ಬಾಲಕನಿಗೆ ಡೆಂಘೆ ಜತೆಗೆ ಕರೊನಾ ಟೆಸ್ಟ್ ಕೂಡ ಮಾಡಿಸಲಾಗಿತ್ತು. ಬಳಿಕ ಜ್ವರ ಇರಲಿಲ್ಲ. ಹಾಗಾಗಿ ಈತ ಮೊನ್ನೆಯಷ್ಟೇ ಇಂಗ್ಲಿಷ್​ ಪರೀಕ್ಷೆ ಬರೆದು, ಇಂದು ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಆದರೆ, ಗಣಿತ ಪರೀಕ್ಷೆ ಮುಗಿಯುವಷ್ಟರಲ್ಲಿ ಆತನ ವರದಿಯಲ್ಲಿ ಕರೊನಾ ಪಾಸಿಟಿವ್​ ಬಂದಿದೆ.ಇದನ್ನೂ ಓದಿರಿಥರ್ಮಲ್​ ಸ್ಕ್ರೀನಿಂಗ್​ ವೇಳೆ ಕುಸಿದುಬಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ
ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಕರೊನಾ ಪಾಸಿಟಿವ್​ ಇದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಆ ಬಾಲಕನಿಗೆ ಪ್ರತ್ಯೇಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತು. ಸೋಂಕಿತ ವಿದ್ಯಾರ್ಥಿಗೆ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಸೋಂಕಿತ ವಿದ್ಯಾರ್ಥಿ ಸಂಪರ್ಕಕ್ಕೆ ಬಂದವರ ಪತ್ತೆಗಾಗಿ ಆರೋಗ್ಯ ಇಲಾಖೆ ಮುಂದಾಗಿದೆ.
ಇನ್ನು ಮೊದಲ ದಿನ ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ಬಾಗಲಕೋಟೆಯ ಕಲಾದಗಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಪರೀಕ್ಷೆ ರದ್ದುಗೊಳಿಸಲು ಪಾಲಕರು ಆಗ್ರಹಿಸಿದ್ದಾರೆ.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
