ಮಂಗಳೂರು:‘ವಿದ್ಯಾಗಮ’ದ ನಂತರವೇ ಅಮ್ಮನಿಗೆ ಈ ಸ್ಥಿತಿ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಅಮ್ಮನನ್ನು ದಯವಿಟ್ಟು ಉಳಿಸಿಕೊಡಿ, ಚಿಕಿತ್ಸೆಗಾಗಿ ಆರ್ಥಿಕ ‌ನೆರವು ನೀಡಿ… ಎಂದು ಸರ್ಕಾರಿ ಶಾಲೆ ಶಿಕ್ಷಕ ದಂಪತಿಯ ಪುತ್ರಿಯೊಬ್ಬರು ಫೇಸ್​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮೂಡಬಿದರೆಯ ಶಿಕ್ಷಕ ಕುಟುಂಬಕ್ಕೆ ಕರೊನಾ ಆಘಾತ ನೀಡಿದೆ. ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್​ನ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಇವರ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ‌ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ಅವರಿಗೂ ಕರೊನಾ ದೃಢಪಟ್ಟಿದೆ.
ಪದ್ಮಾಕ್ಷಿ ಮತ್ತು ಶಶಿಕಾಂತ್​ ದಂಪತಿ ಇಬ್ಬರಿಗೂ ಕರೊನಾ ಸೋಂಕು ಕಾಡುತ್ತಿದ್ದು, ಇವರ ಪುತ್ರಿ ಐಶ್ವರ್ಯಾ ಜೈನ್ ಆತಂಕಗೊಂಡಿದ್ದಾರೆ. ಸದ್ಯ ಅಮ್ಮನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ, ಆ ಮೂಲಕ ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಫೇಸ್​ಬುಕ್​ನಲ್ಲಿ ಫೋಟೋ ಸಹಿತ ಐಶ್ವರ್ಯಾ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿದ್ಯಾಗಮದ ಪರಿಣಾಮ ಅಮ್ಮನಿಗೆ ಈ ಸ್ಥಿತಿ ಬಂದಿದೆ ಎಂದೂ ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯಾಗಮಕ್ಕೂ ಮೊದಲು ಅಮ್ಮ ಆರಾಮಾಗಿದ್ದರು. ವಿದ್ಯಾಗಮದ ನಂತರವೇ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂದು ಯೋಚಿಸಿದ ಸರ್ಕಾರ, ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿತ್ತು. ಸರ್ಕಾರಿ ಶಾಲೆ ಮಕ್ಕಳು ಇರುವಲ್ಲಿಗೇ ಹೋಗಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ನಡುವೆ ಕೆಲ ಶಿಕ್ಷಕರು ಮತ್ತು ಮಕ್ಕಳಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾಗಮ ವಿರುದ್ಧ ಅಪಸ್ವರ ಶುರುವಾಯ್ತು. ಬಹುತೇಕ ಪೋಷಕರು, ಶಿಕ್ಷಕರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಈ ಯೋಜನೆಗೆ ಸರ್ಕಾರ ಇತ್ತೀಚಿಗಷ್ಟೇ ತಾತ್ಕಾಲಿಕ ಬ್ರೇಕ್​ ಹಾಕಿದೆ.

ಪ್ಲೀಸ್​… ಅಮ್ಮನನ್ನು ಉಳಿಸಿಕೊಡಿ ಎಂದ ಟೀಚರ್​ ಮಗಳು: ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ಪಿಪಿಇ ಕಿಟ್​ ಧರಿಸಿ ಬಂದ ಗೆಳೆಯನೊಂದಿಗೆ ಟೆಕ್ಕಿ ಪತ್ನಿ ಎಸ್ಕೇಪ್​! ಬೆಚ್ಚಿ ಬೀಳ್ತೀರಿ ಆಕೆಯ ಮಾಸ್ಟರ್​ ಪ್ಲ್ಯಾನ್​ ಕೇಳಿದ್ರೆ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
