ಯಾದಗಿರಿ:ಹಸೆಮಣೆ ಏರಲೆಂದು ನೂರಾರು ಕನಸಿನೊಂದಿಗೆ ಬೆಂಗಳೂರಿಂದ ಸ್ವಗ್ರಾಮಕ್ಕೆ ಬಂದಿದ್ದ ವರನಿಗೂ ಕೋವಿಡ್​ ಸೋಂಕು ತಗುಲಿದೆ. ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವಕನೀಗ ಕೋವಿಡ್​ ಆಸ್ಪತ್ರೆ ಸೇರಿದ್ದಾನೆ.
ಇದುವರೆಗೂ ಮಹಾರಾಷ್ಟ್ರದ ಕಂಟಕ ಅನುಭವಿಸುತ್ತಿದ್ದ ಯಾದಗಿರಿಗೆ ರಾಜ್ಯರಾಜಧಾನಿಯ ಕಂಟಕ ಎದುರಾಗಿದೆ. ಶಹಾಪುರ ತಾಲೂಕಿನ ಹಳ್ಳಿಯೊಂದರ ಯುವಕನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿದ್ದ ಆತ ತನ್ನ ಮದುವೆ ಸಲುವಾಗಿ ಜಿಲ್ಲೆಗೆ ಬಂದಿದ್ದ.ಇದನ್ನೂ ಓದಿರಿvideo/ ಈ ಊರಿಗೆ ನೀವು ಕಾಲಿಟ್ರೆ 10 ಸಾವಿರ ರೂ. ದಂಡ ಫಿಕ್ಸ್!
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನೈದು ದಿನದಲ್ಲಿ ಆತ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಕರೊನಾ ಪಾಸಿಟಿವ್ ಬಂದ ಯುವಕನ ಮದುವೆ ಇದೇ ತಿಂಗಳ 13ಕ್ಕೆ ಫಿಕ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 29ರಂದು ಯುವಕ ಬೆಂಗಳೂರಿನಿಂದ ಯಾದಗಿರಿಗೆ ಬಂದಿದ್ದ. ಆ ವೇಳೆಯೇ ಆತ ಅನಾರೋಗ್ಯಕ್ಕೀಡಾಗಿದ್ದ ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಯುವಕನಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ.
ಇದಕ್ಕೂ ಮುನ್ನ ಮದುವೆ ಕೆಲಸದ ಸಲುವಾಗಿ ಯುವಕ ಓಡಾಡಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಸೋಂಕಿನ ಭೀತಿ ಆವರಿಸಿದೆ. ಸದ್ಯ ಮದುವೆಯನ್ನು ಮುಂದೂಡಲಾಗಿದೆ.
ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − seven =
Remember me
