ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯಲು ಸೋಂಕಿತರಿಗೆ ಅನುವು ಮಾಡಿಕೊಟ್ಟಿದೆ.
ಇಲ್ಲಿಯವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದರ ಹೆಚ್ಚಿಗೆ ಇರುವ ಹಿನ್ನೆಲೆಯಲ್ಲಿ ಸರ್ಕಾರವೇ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಳೆದ ವಾರ ದರ ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಈ ಬಗ್ಗೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಅನುಮತಿಯನ್ನು ಕೇಳಿತ್ತು. ಈ ದರಕ್ಕೆ ಸಂಬಂಧಿಸಿದಂತೆ ಎಲ್ಲಾ ಆಸ್ಪತ್ರೆಗಳು ನೀಡಿರುವ ಮಾಹಿತಿ ಹಾಗೂ ಎಲ್ಲರ ಒಪ್ಪಿಗೆ ಮೇರೆಗೆ ಅಂತಿಮವಾಗಿ ಅಧಿಕೃತ ದರ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಮಾಡಿದ ಕರೊನಾ ಸೋಂಕಿತರಿಗೆ ಒಂದು ರೀತಿಯ ದರವಿದ್ದು, ನಗದು ಪಾವತಿ (ವಿಮೆ ಅಲ್ಲದ) ಮಾಡುವ ಪಿಎಚ್ ಪಿಗಳಿಂದ ನೇರವಾಗಿ ಪ್ರವೇಶ ಪಡೆದ ಖಾಸಗಿ ರೋಗಿಗಳಿಗೆ ಮತ್ತೊಂದು ರೀತಿಯ ದರ ನಿಗದಿ ಮಾಡಲಾಗಿದೆ.
ಅದರ ಸಂಪೂರ್ಣ ವಿವರ ಇಲ್ಲಿದೆ:ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್‌ ಮಾಡಿರುವ ಸೋಂಕಿತರಿಗೆ ಒಂದು ದಿನದ ದರ:ಜನರಲ್‌ ವಾರ್ಡ್‌- 5,200 ರೂಎಚ್‌ಡಿಯು- 7,000 ರೂಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ರಹಿತ)- 8,500 ರೂಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ಸಹಿತ)-10,000 ರೂ
ನಗದು ಪಾವತಿ (ವಿಮೆ ಅಲ್ಲದ) ವಿಎಚ್‌ಪಿಗಳಿಂದ ನೇರವಾಗಿ ಪ್ರವೇಶ ಪಡೆಯುವವರ ದರ ಒಂದು ದಿನಕ್ಕೆಜನರಲ್‌ ವಾರ್ಡ್‌- 10, 000 ರೂ.ಎಚ್‌ಡಿಯು- 12,000 ರೂ.ಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ರಹಿತ)- 15,000 ರೂಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ಸಹಿತ)-25,000 ರೂ

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ.Cost fixed by Government of Karnataka to treat COVID19 patients in Private Healthcare.pic.twitter.com/tZzJl1Y4jM
— K'taka Health Dept (@DHFWKA)July 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
