ಬೆಂಗಳೂರು:ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ಕರೊನಾ ವೈರಸ್​ ಹರಡುವಿಕೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಏ.10 ರಿಂದ ಮೇ.10 ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಕರೊನಾ ಆರ್​ ನಾಟ್​ (R-Naught ಅಥವಾ R0) ವ್ಯಾಲ್ಯೂ 1.66 ಇತ್ತು. ಅದು ಈಗ 1 ರ ಅಸುಪಾಸಿನಲ್ಲಿದ್ದು, ದಿನೇ ದಿನೇ ವೈರಸ್​ ಹರಡುವಿಕೆ ಪ್ರಮಾಣ ಕುಸಿಯುತ್ತಿದೆ ಎನ್ನಲಾಗಿದೆ.
2020 ರ ಡಿಸೆಂಬರ್ 9 ರಂದು ದೇಶದಲ್ಲಿ ಆರ್​ ನಾಟ್​ ವ್ಯಾಲ್ಯೂ 0.91 ಕ್ಕಿಂತ ಕಡಿಮೆ ಇತ್ತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ 1.0 ಇತ್ತು. ಆದರೆ, 2021 ರ ಮಾರ್ಚ್​ 27 ರ ವೇಳೆಗೆ ದೇಶದಲ್ಲಿ ಆರ್​ ನಾಟ್​ ಮೌಲ್ಯ 1.53 ಇತ್ತು. ಅಲ್ಲದೆ, ದೇಶದ 19 ರಾಜ್ಯಗಳಲ್ಲಿ ಆರ್​ ನಾಟ್​ ಮೌಲ್ಯ 1 ಕ್ಕಿಂತ ಹೆಚ್ಚಿತು. ಕರ್ನಾಟಕದಲ್ಲಿ 1.0 ಯಿಂದ 1.66 ಕ್ಕೆ ಏರಿಕೆ ಆಯಿತು. ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ವೈರಸ್​ ಪಸರಿಸುತ್ತಿತ್ತು ಎಂಬ ಸೂಚನೆ ಸಿಕ್ಕಿತು. ಜೊತೆಗೆ, ದೇಶದಲ್ಲಿ ಸರಾಸರಿ ನಾಲ್ಕು ಲಕ್ಷದವರೆಗೆ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಯಿತು. ಕರೊನಾ ನಿಯಂತ್ರಿಸಲು ಕಠಿಣ ಲಾಕ್​ಡೌನ್​ ಹೇರಿದ್ದರಿಂದ ಇದೀಗ ಸೋಂಕು ಇಳಿಕೆಯಾಗುತ್ತಿದೆ ಎಂದು ಇಂಟಿಗ್ರೇಟೆಡ್​ ವೈದ್ಯ ಡಾ. ನಿರಂಜನ್​ ಯೆಲ್ಲೂರು ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ ಕಾಂಗ್ರೆಸ್ ದೇಶದ ಜನರ ಬಳಿ ಕ್ಷಮೆಯಾಚಿಸಲಿ
ಏನಿದು ಆರ್​ ನಾಟ್​ ವ್ಯಾಲ್ಯೂ? :ಸಾಂಕ್ರಾಮಿಕ ರೋಗವು ಪಸರಿಸುವ ಪ್ರಮಾಣವನ್ನು ಅಳೆಯುವುದನ್ನು ವೈದ್ಯಕೀಯ ಭಾಷೆಯಲ್ಲಿ ಆರ್​ ನಾಟ್​ ವ್ಯಾಲ್ಯೂ ಎಂದು ಕರೆಯಲಾಗುತ್ತದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಓರ್ವ ಸೋಂಕಿತನಿಂದ 2 ರಿಂದ 3 ಜನರಿಗೆ ಈ ಕರೊನಾ ಸೋಂಕು ಹರಡುತ್ತದೆ ಎಂಬುದು ಜಾಗತಿಕವಾಗಿ ಕರೊನಾದ ಆರ್​ ನಾಟ್​ ವ್ಯಾಲ್ಯೂ ಎಂದು ನಿರ್ಧರಿಸಲಾಗಿದೆ. ಆರ್​ ನಾಟ್​ ಮೌಲ್ಯ ಹೆಚ್ಚಾದಷ್ಟು ಮತ್ತಷ್ಟು ಜನರಿಗೆ ಸೋಂಕು ತಗಲುತ್ತದೆ ಎಂಬ ಸೂಚನೆ ಕಂಡುಬರುತ್ತದೆ.
ಒಂದಕ್ಕಿಂತ ಕಡಿಮೆ ಆರ್​ ನಾಟ್​ ಕಂಡುಬಂದರೆ ವೈರಾಣು ಪಸರಿಸುವ ಪ್ರಮಾಣ ಕಡಿಮೆಯಾಗಿದೆ ಅಥವಾ ಸುರಕ್ಷಿತ ಎಂದರ್ಥ. ಒಂದಕ್ಕಿಂತ ಜಾಸ್ತಿ ಇದ್ದರೆ ವೈರಸ್​ ಹರಡುವಿಕೆ ಹೆಚ್ಚಾಗಿದೆ ಎಂದು ತಿಳಿಯುತ್ತದೆ. ದೇಶದ ಒಟ್ಟಾರೆ ಜನಸಂಖ್ಯೆ, ರೋಗ ಶರೀರದಲ್ಲಿ ಇರುವ ಅವಧಿ, ಸಾಮಾಜಿಕ ಸ್ಥಿತಿಗತಿ ಹಾಗೂ ರಾಜಕೀಯ ನಿರ್ಣಯ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಗಣಿಸಿ ಕರೊನಾ ಆರ್​ ನಾಟ್​ ವ್ಯಾಲ್ಯೂ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​
ಅಮೆರಿಕದಲ್ಲಿ 2.30 ಇತ್ತು :ಕರೊನಾ ಮೊದಲನೇ ಅಲೆಗೆ ಅಮೆರಿಕ ತತ್ತರಿಸಿತ್ತು. ಲಕ್ಷಾಂತರ ಪ್ರಕರಣಗಳು ದಾಖಲಾಗಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಸಾವಿರಾರು ಜನರು ಮೃತಪಟ್ಟಿದ್ದರು. ನ್ಯೂಯಾರ್ಕ್​ ಮತ್ತು ನ್ಯೂಜಸಿರ್ಯಲ್ಲಿ ಆಗ 2.30 ಆರ್​ ನಾಟ್​ ವ್ಯಾಲ್ಯೂ ಕಂಡುಬಂದಿತ್ತು. ಆ ಸಂದರ್ಭದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವೈರಸ್​ ಹರಡುವಿಕೆ ಪ್ರಮಾಣ ಹೆಚ್ಚಾಗಿತ್ತು. ಕ್ರಮೇಣ ಲಾಕ್​ಡೌನ್​ ಹಾಗೂ ಪರಿಣಾಮಕಾರಿ ಚಿಕಿತ್ಸೆ ಅಭಿಯಾನ ಜಾರಿಗೆ ತಂದಿರುವುದರಿಂದ ವೈರಸ್​ ಹರಡುವಿಕೆ ಪ್ರಮಾಣ ಕುಸಿಯಿತು ಎಂದು ಡಾ. ಯೆಲ್ಲೂರು ತಿಳಿಸಿದ್ದಾರೆ.
17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!

ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
