ಬೆಂಗಳೂರು:ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಲ್ಲಿಯವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಹಲವರು ತಮಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬೇಕೆಂದು ಕೋರಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗಾಗಿ ಅವಕಾಶವನ್ನು ಮಾಡಿಕೊಡಲಾಗಿದೆ.ಇದನ್ನೂ ಓದಿ:ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗಸಹಜವಾಗಿ ಖಾಸಗಿ ಆಸ್ಪತ್ರೆಗಳು ಎಂದರೆ ಅಲ್ಲಿ ದುಬಾರಿ ಬೆಲೆ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ, ಚಿಕಿತ್ಸೆಗೆ ನಿಜವಾಗಿ ತಗಲುವ ಖರ್ಚು-ವೆಚ್ಚ ಇತ್ಯಾದಿಗಳ ಆಧಾರದ ಮೇಲೆ ಇದೀಗ ರೇಟ್​ ಫಿಕ್ಸ್​ ಮಾಡಿದೆ. ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಆದರೆ ಈ ದರದ ಬಗ್ಗೆ ಸರ್ಕಾರ ಖಾಸಗಿ ಆಸ್ಪತ್ರೆಗಳ ಜತೆ ಸಮಾಲೋಚನೆ ನಡೆಸಬೇಕಿದೆ. ಈ ದರಕ್ಕೆ ಅವುಗಳ ಒಪ್ಪಿಕೊಂಡರೆ ಅಧಿಕೃತ ಆದೇಶ ಹೊರಬೀಳಲಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಇದಕ್ಕೆ ಒಪ್ಪಿಕೊಂಡರೆ ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಸೋಂಕಿತರು ಚಿಕಿತ್ಸೆ ಪಡೆಯಬಹುದಾಗಿದೆ.
ಹಾಗಿದ್ದರೆ ಯಾವ್ಯಾವುದಕ್ಕೆ ಎಷ್ಟೆಷ್ಟು ರೇಟ್​ ಇದೆ? ಇಲ್ಲಿದೆ ಮಾಹಿತಿ
ಒಂದು ದಿನದ ಚಿಕಿತ್ಸೆಗೆ ತಗಲುವ ಮಾಹಿತಿ:
ಜನರಲ್ ವಾರ್ಡ್: ₹ 5,200ಜನರಲ್ ವಾರ್ಡ್ ವಿತ್ ಆಕ್ಸಿಜನ್: ₹ 7,500ಐಸೋಲೇಷನ್ ವಾರ್ಡ್: ₹ 8,500ಐಸಿಯು ವಿಥ್​ ವೆಂಟಿಲೇಟರ್: ₹12,000ಗಂಟಲು ದ್ರವ ಪರೀಕ್ಷೆಗ: ₹2,600

ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + 19 =
Remember me
