ರಾಣೆಬೆನ್ನೂರ:ಕರೊನಾ ಶಂಕಿತನ ಮೃತದೇಹವನ್ನು ಸಮೀಪದ ಬಸ್​ ನಿಲ್ದಾಣದಲ್ಲೇ ಆಸ್ಪತ್ರೆ ಸಿಬ್ಬಂದಿ ಇಟ್ಟು ಹೋಗಿದ್ದ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು.
ನಗರದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕರೊನಾ ಶಂಕಿತ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆ ಪಕ್ಕದ ಬಸ್​ ನಿಲ್ದಾಣದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಇಟ್ಟ ಘಟನೆ ಶನಿವಾರ ನಡೆದಿದೆ. ಮೃತದೇಹವನ್ನು ಪಿಪಿಇ ಕಿಟ್​ನಿಂದ ಪೂರ್ಣವಾಗಿ ಪ್ಯಾಕ್​ ಮಾಡಿದ್ದರಿಂದ ಜನ ಭಯದಲ್ಲಿಯೇ ಓಡಾಡಿದರು.ಇದನ್ನೂ ಓದಿರಿಕೋವಿಡ್​ಗೆ ಔಷಧಿ ಕೊಡಿಸುವ ನೆಪದಲ್ಲಿ ಅತ್ಯಾಚಾರ! ಸೋಂಕಿನ ಹೆಸರಲ್ಲಿ ಕಾಮುಕರ ಅಟ್ಟಹಾಸ
ಕರೊನಾ ಶಂಕಿತ ವ್ಯಕ್ತಿಯ ಶವವನ್ನು ಬಸ್​ ನಿಲ್ದಾಣದಲ್ಲೇ ಬಿಟ್ಟು ಹೋಗಿರುವ ವಿಷಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿತು. ನಂತರ ಶವವನ್ನು ಕುಟುಂಬಸ್ಥರ ಜತೆ ಆಂಬುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗಿ, ಹಲಗೇರಿ ರಸ್ತೆಯ ಸ್ಮಶಾನದಲ್ಲಿ ಕೋವಿಡ್​ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ವ್ಯಕ್ತಿಯ ಸ್ವಾಬ್​ ಟೆಸ್ಟ್​ ವರದಿ ಇನ್ನೂ ಬಂದಿಲ್ಲ.
ಆಗಿದ್ದೇನು?:ಮೂರು ದಿನಗಳ ಹಿಂದೆ ಕೆಮ್ಮಿನಿಂದ ಬಳಲುತ್ತಿದ್ದ ರಾಣೆಬೆನ್ನೂರ ಮಾರುತಿನಗರದ 45 ವರ್ಷದ ವ್ಯಕ್ತಿಯು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ. ಈತನಿಗೆ ಕರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಜು.1ರಂದು ಸ್ವಾಬ್​ ಟೆಸ್ಟ್​ಗೆ ಪಡೆದು ಹೋಂ ಕ್ವಾರಂಟೈನ್​ಗೆ ವೈದ್ಯರು ಸೂಚಿಸಿದ್ದರು. ಆದರೆ, ಈ ವ್ಯಕ್ತಿ ಶನಿವಾರ ಬೆಳಗ್ಗೆ ಮಾರುತಿ ನಗರದ ಪಕ್ಕದ ರಸ್ತೆಯೊಂದರಲ್ಲಿ ಪ್ರಜ್ಞಾಹಿನವಾಗಿ ಬಿದ್ದಿದ್ದ. ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಈತ ಮೃತಪಟ್ಟಿರುವುದು ತಿಳಿದುಬಂತು. ಹೀಗಾಗಿ ಶವವನ್ನು ಪಿಪಿಇ ಕಿಟ್​ನಿಂದ ಪ್ಯಾಕ್​ ಮಾಡಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಕುಟುಂಬಸ್ಥರು ಬರಲು ವಿಳಂಬ ಮಾಡಿದ್ದರು. ಹಾಗಾಗಿ ಆಸ್ಪತ್ರೆಯ ಮುಂಭಾಗದ ಬಸ್​ ನಿಲ್ದಾಣದಲ್ಲಿ ಸಿಬ್ಬಂದಿಯು ಶವ ಇಟ್ಟು ಹೋಗಿದ್ದರು.
ಬಸ್​ ನಿಲ್ದಾಣದಲ್ಲಿ ಶವ ಬಿಟ್ಟಹೋದ ಬಗ್ಗೆ ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ ಎಂದು ಟಿಎಚ್​ಒ ಡಾ. ಸಂತೋಷಕುಮಾರ ತಿಳಿಸಿದ್ದಾರೆ.
ವಿಭೂತಿ ಹಚ್ಚಿದರೆ ಕರೊನಾ ಬರಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
