ಬೆಂಗಳೂರು: ಜ್ವರ ಇದ್ದರಷ್ಟೇ ಅಲ್ಲ ಇನ್ನು ಬಿಕ್ಕಳಿಕೆ ಬಂದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು! ನಗರದ ಜಯದೇವ ಹೃದಯ ವಿಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಬಿಕ್ಕಳಿಕೆಯೂ ಒಂದು ಲಕ್ಷಣ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಕೇವಲ ಟೆಂಪರೇಚರ್ ಪರೀಕ್ಷೆಯಿಂದ ಪ್ರಯೋಜನವಿಲ್ಲ ಎನ್ನುತ್ತಾರೆ ವೈದ್ಯರು.
ಕೋವಿಡ್-19 ಸೋಂಕು ಹೊಂದಿರುವ ಸುಮಾರು 200 ರೋಗಿಗಳ ಮೇಲೆ ಸಂಸ್ಥೆ ಅಧ್ಯಯನ ನಡೆಸಿದೆ. ಈ ವೇಳೆ ಸೋಂಕಿತರಲ್ಲಿ ಕೇವಲ ಶೇ. 20-25 ಮಂದಿಗೆ ಮಾತ್ರವೇ ಜ್ವರ ಲಕ್ಷಣ ಕಂಡು ಬಂದಿದ್ದು, ಉಳಿದ ಶೇ. 75 ಮಂದಿಯಲ್ಲಿ ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಂಡಿರುವುದು ತಿಳಿದುಬಂದಿದೆ.ಈಗಾಗಲೇ ಜ್ವರ, ಶೀತ ಸಂಬಂಧಿ ಸಮಸ್ಯೆ, ತೀವ್ರ ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರವೇ ಕೋವಿಡ್-19 ತಪಾಸಣೆ ಮಾಡಲಾಗುತ್ತಿದೆ. ಆದರೆ ಸೋಂಕಿತರಲ್ಲಿ ತಲೆ ನೋವು, ಮೈ-ಕೈ ನೋವು, ರುಚಿ ಮತ್ತು ವಾಸನೆ ಇಲ್ಲದಿರುವುದು ಸೇರಿ ಹಲವು ಲಕ್ಷಣಗಳು ಕಂಡುಬಂದಿದೆ. ಈ ಮೇಲಿನ ಯಾವ ಲಕ್ಷಣಗಳೂ ಕಂಡು ಬರದಿದ್ದರೂ, ಸೋಂಕಿತರಲ್ಲಿ ಮೇಲಿಂದ ಮೇಲೆ ಬಿಕ್ಕಳಿಕೆ ಬರುತ್ತಿರುವುದು ಮತ್ತೊಂದು ಲಕ್ಷಣ ಎನ್ನಲಾಗಿದೆ.
ಇದನ್ನೂ ಓದಿ:ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ
ಆದರೆ ಬಿಕ್ಕಳಿಗೆ ಕೋವಿಡ್ ಲಕ್ಷಣ ಎಂದು ಎಲ್ಲಿಯೂ ನಮೂದಾಗಿಲ್ಲ. ಜ್ವರದೊಂದಿಗೆ ಬಿಕ್ಕಳಿಕೆಯೂ ಕಂಡು ಬಂದರೆ ಅದನ್ನು ಕೋವಿಡ್ ಎಂದು ಶಂಕಿಸಬಹುದಾಗಿದ್ದು,ಈ ನಿಟ್ಟಿನಲ್ಲಿ ಸೋಂಕಿತರ ಕುರಿತು ಇನ್ನಷ್ಟು ನಿಗಾ ವಹಿಸುವ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.
ದೇಹದ ಉಷ್ಣಾಂಶವೇ ಮಾನದಂಡ: ವ್ಯಕ್ತಿಯ ದೇಹದ ಉಷ್ಣಾಂಶ ಆಧರಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಮಾಲ್​ಗಳು, ಅಪಾರ್ಟ್ ಮೆಂಟ್​ಗಳು, ಸರ್ಕಾರ ಹಾಗೂ ಖಾಸಗಿ ಕಚೇರಿಗಳು ಸೇರಿ ಎಲ್ಲ ರೀತಿಯ ಕೆಲಸದ ಸ್ಥಳಗಳು ಎಲ್ಲೆಡೆ ಆರಂಭದಿಂದಲೂ ಕೇವಲ ದೇಹದ ಉಷ್ಣಾಂಶವನ್ನು ಅವಲಂಬಿಸಿಯೇ ಕೋವಿಡ್ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಸೋಂಕು ಪತ್ತೆ ಸಾಧ್ಯವಾಗುತ್ತಿಲ್ಲ. ಯಾವುದೇ ಒಂದು ಆರೋಗ್ಯ ಸಮಸ್ಯೆಗೆ ಒಂದೇ ರೀತಿಯ ಲಕ್ಷಣಗಳಿರು ವುದಿಲ್ಲ. ಹಲವು ಬಗೆಯ ಲಕ್ಷಣಗಳಿರುತ್ತವೆ. ಹೀಗಾಗಿ ರೋಗ ಪತ್ತೆಗೆ ನಾನಾ ರೀತಿಯ ಪರೀಕ್ಷೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
https://www.vijayavani.net/congress-president-sonia-gandhi-hospitalised/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
