ರಮೇಶ ದೊಡ್ಡಪುರಬೆಂಗಳೂರು
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಮುದಾಯಕ್ಕೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಹೆಚ್ಚಿಸುವುದೇ ಸರಿಯಾದ ಮಾರ್ಗ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದರೆ, ದಿನೇದಿನೆ ಪರೀಕ್ಷೆಯ ಸಂಖ್ಯೆ ಕುಸಿಯುತ್ತಿದೆ. ಶೀಘ್ರ ಸೋಂಕಿತರನ್ನು ಪತ್ತೆ ಹಚ್ಚಿ ಗುಣಪಡಿಸಬೇಕೆಂಬ ಕೂಗಿನ ನಡುವೆ ಪರೀಕ್ಷೆ ಪ್ರಮಾಣ ಕಡಿಮೆ ಆಗಿರುವುದು ಮತ್ತು ಸ್ಥಿರತೆ ಇಲ್ಲದಿರುವುದು ಒಟ್ಟಾರೆ ಕರೊನಾ ನಿರ್ವಹಣೆ ಯಲ್ಲಿ ರಾಜ್ಯದ ಮನೋಧೋರಣೆಯ ಕುರಿತೇ ಅನುಮಾನಗಳು ಏಳುತ್ತಿವೆ.
15 ಸಾವಿರವೇ ಗರಿಷ್ಠ:ರಾಜ್ಯದಲ್ಲಿ ಕರೊನಾ ಸೋಂಕಿನ ಪರೀಕ್ಷೆ ಆರಂಭವಾದ ಮಾರ್ಚ್​ನಲ್ಲಿ ಪ್ರತಿದಿನ 60-100 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ನಂತರದಲ್ಲಿ ಜಿಲ್ಲೆಗೊಂದರಂತೆ ಪ್ರಯೋಗಾಲಯ ಆರಂಭಿಸುವ, ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಯಂತ್ರಗಳನ್ನು ಅಳವಡಿಸಿದ್ದರಿಂದ ಸಂಖ್ಯೆ ಏರಿಕೆಯಾಯಿತು. ಮಾರ್ಚ್ ಅಂತ್ಯಕ್ಕೆ ಪ್ರತಿದಿನ 300ರ ಹಂತ ತಲುಪಿತು. ಖಾಸಗಿ ಪ್ರಯೋಗಾಲಯಗಳಿಗೂ ಅನುಮತಿ ನೀಡಿದ್ದರಿಂದ ಈ ಸಂಖ್ಯೆ ಏಪ್ರಿಲ್ ಅಂತ್ಯಕ್ಕೆ 5 ಸಾವಿರದ ಗಡಿ ಸಮೀಪಿಸಿತು. ಈ ಹಂತದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದರಿಂದ ಮೇ 30ರಂದು 15,728 ಪರೀಕ್ಷೆ ನಡೆಸಲಾಯಿತು. ಇದು ಇಲ್ಲಿಯವರೆಗೆ ರಾಜ್ಯದಲ್ಲಿ ಒಂದುದಿನದಲ್ಲಿ ನಡೆದ ಗರಿಷ್ಟ ಪರೀಕ್ಷೆ. ಇದು ಬಿಟ್ಟರೆ, ಜೂ.3ರಂದು 15,197 ಪರೀಕ್ಷೆ ನಡೆಯಿತು. ಜೂ.9ರ ನಂತರದಲ್ಲಿ 10 ಸಾವಿರಕ್ಕಿಂತ ಕಡಿಮೆಗೆ ಇಳಿದಿದೆ. ಕಳೆದ 20 ದಿನದಲ್ಲಿ ಕೇವಲ 3 ದಿನ ಮಾತ್ರ 10 ಸಾವಿರ ಗಡಿ ದಾಟಿದೆ. ಜೂ.1ರಿಂದ 10ರವರೆಗೆ ಒಟ್ಟು 1,14,931 ಅಂದರೆ ಪ್ರತಿದಿನ ಸರಾಸರಿ 11,493 ಪರೀಕ್ಷೆ ನಡೆಸಲಾಗಿತ್ತು. ಜೂ.14ರಿಂದ ಜೂ.23ರವರೆಗಿನ 10 ದಿನದಲ್ಲಿ ಒಟ್ಟು 89,820 ಪರೀಕ್ಷೆ ಅಂದರೆ ಪ್ರತಿದಿನ ಸರಾಸರಿ 8,983. ಪ್ರತಿದಿನ ಹೆಚ್ಚಳವಾಗುವ ಬದಲಿಗೆ ಸರಾಸರಿ ಶೇ.21 ಕಡಿಮೆಯಾಗಿದೆ.
25 ಸಾವಿರ ಪರೀಕ್ಷೆ ಯಾವಾಗ?:ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಕಳೆದ ವಾರವೇ ಪ್ರತಿಕ್ರಿಯಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೆಲವೇ ದಿನಗಳಲ್ಲಿ ಪ್ರತಿದಿನ ಕನಿಷ್ಠ 15 ಸಾವಿರ ಹಾಗೂ ಗರಿಷ್ಠ 25 ಸಾವಿರ ಪರೀಕ್ಷೆ ನಡೆಸಲಾಗುತ್ತದೆ ಎಂದಿದ್ದರು. ಆದರೆ ಸಂಖ್ಯೆ ಹೆಚ್ಚುವ ಬದಲಿಗೆ ಕುಸಿಯುತ್ತಲೇ ಸಾಗಿದೆ. ಹೊರರಾಜ್ಯಗಳಿಂದ ಕಾರ್ವಿುಕರು ಹೆಚ್ಚು ಬಂದಿದ್ದರಿಂದ ಗರಿಷ್ಠ ಪರೀಕ್ಷೆ ನಡೆದಿತ್ತು. ಇದೀಗ ರಾಜ್ಯದಲ್ಲಿರುವವರ ಪರೀಕ್ಷೆ ಮಾತ್ರ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಸಮರ್ಥನೆ ಕೊಡುತ್ತಾರೆ.
ಬೆಂಗಳೂರಿನಲ್ಲಿ ಅತಿ ಕಡಿಮೆ:ರಾಜ್ಯದಲ್ಲಿ ಸೋಂಕಿತರೊಂದಿಗೆ ಸಂಪರ್ಕವಿಲ್ಲದೆ ಸೋಂಕು ಹೆಚ್ಚುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲಿ. ಖಾಸಗಿ ಹಾಗೂ ಸರ್ಕಾರಿ ಸೇರಿ ಹೆಚ್ಚು ಪ್ರಯೋಗಾಲಯಗಳಿರುವುದೂ ಇಲ್ಲೇ. ಪ್ರತಿ ಹತ್ತು ಲಕ್ಷ ಜನರಲ್ಲಿ ನಿಧನರಾದವರ ಸಂಖ್ಯೆ ಬೀದರ್​ನಲ್ಲಿ 8.8 ಬಿಟ್ಟರೆ ಬೆಂಗಳೂರಿನಲ್ಲೇ (7.6) ಅಧಿಕ. ಆದರೆ ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಜನರಲ್ಲಿ 2,052 ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ಇದೇ ಸಂಖ್ಯೆ ಕಲಬುರಗಿಯಲ್ಲಿ 4,435, ಬೀದರ್​ನಲ್ಲಿ 3,245, ಕೊಡಗಿನಲ್ಲಿ 2,640, ಯಾದಗಿರಿಯಲ್ಲಿ 2,591 ಇದೆ.
ರಾಜ್ಯದಲ್ಲಿ ಪರೀಕ್ಷಾ ಉಪಕರಣಗಳ ಕೊರತೆ ಇಲ್ಲ. ಸೋಂಕಿತರ ಸಂಪರ್ಕ ಇಲ್ಲದೆ ಹೆಚ್ಚು ಜನರಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಸಮುದಾಯ ಸಾರಿಗೆ ವಾಹನ ಚಾಲಕರು, ಪೊಲೀಸರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳಂತಹ ಗುಂಪುಗಳಲ್ಲಿ ರ್ಯಾಂಡಂ ಪರೀಕ್ಷೆ ನಡೆಸಬಹುದು.
| ಡಾ. ಸಿ.ಎನ್. ಮಂಜುನಾಥ್
ಹೃದ್ರೋಗ ತಜ್ಞರು, ಕೋವಿಡ್-19 ಪಡೆ ಸದಸ್ಯ
https://www.vijayavani.net/west-bengal-extends-lockdown-till-july-31-schools-colleges-to-stay-shut/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
