ತುಮಕೂರು:ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಕರೊನಾ ಎರಡನೇ ಅಲೆಯ ಆತಂಕ ಸಾರ್ವಜನಿಕರನ್ನು ದಟ್ಟವಾಗಿ ಕಾಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಬೆಳಗಾವಿ ಲೋಕಸಭೆ ಹಾಗೂ ಬಸವ ಕಲ್ಯಾಣ, ಮಸ್ಕಿ ವಿಧಾನಸಣಾ ಕ್ಷೇತ್ರಗಳಿಗೆ ಏಪ್ರಿಲ್​ನಲ್ಲಿ ಉಪಚುನಾವಣೆ ನಡೆಯಲಿದ್ದು, ಮೂರು ಪಕ್ಷದ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮನೆಮನೆಗೆ ಭೇಟಿ ನೀಡುವಲ್ಲಿ, ಸಭೆ ನಡೆಸುವಲ್ಲಿ ಬಿಜಿಯಾಗಿದ್ದಾರೆ.
ಈ ನಡುವೆ ತಿಪಟೂರಿಗೆ ಕಾರ್ಯಕ್ರಮ ನಿಮಿತ್ತ ಇಂದು ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅವರನ್ನ ‘ಕರೊನಾ ಹೆಚ್ಚಾಗ್ತಿದೆ, ಉಪಚುನಾವಣೆ ಬೇರೆ ಇದೆ. ಇದಕ್ಕೂ ಟಫ್​ ರೂಲ್ಸ್​ ಅಪ್ಲೈ ಆಗುತ್ತಾ? ಎಂದು ಸುದ್ದಿಗಾರರು ಕೇಳಿದರು. ಇದಕ್ಕುತ್ತರಿಸಿದ ಸಿಎಂ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಕ್ಕೆ ಷರತ್ತು ಹಾಕಿದ್ದೇವೆ. ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ ಎಂದರು.ಇದನ್ನೂ ಓದಿರಿಆರ್​​ಎಸ್​ಎಸ್​ ನೂತನ ಸರಕಾರ್ಯವಾಹ ಆಗಿ ಆಯ್ಕೆಯಾದ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ
ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ. ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡಬಹುದು. ಶಾಲಾ ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ. ಒಂದು ವಾರ ನೋಡ್ತೀವಿ. ಕೋವಿಡ್ ಸಂಖ್ಯೆ ಜಾಸ್ತಿ ಆಗ್ತಿದ್ರೆ ಪರಿಸ್ಥಿತಿ ನೋಡಿ ತೀರ್ಮಾನ ತಗೋತೀವಿ ಎಂದು ಯಡಿಯೂರಪ್ಪ ಹೇಳಿದರು.
ಸಿಎಂರ ಈ ಹೇಳಿಕೆ ಪರೋಕ್ಷವಾಗಿ ಉಪಚುನಾವಣೆಗೆ ಕರೊನಾ ಟಫ್​ ರೂಲ್ಸ್​ ಅಪ್ಲೈ ಆಗಲ್ಲ ಎಂದು ಹೇಳಿದಂತೆ. ರಾಜಕೀಯಕ್ಕೆ ಒಂದು ರೂಲ್ಸ್​, ಸಾಮಾನ್ಯ ಜನರಿಗೊಂದು ರೂಲ್ಸ್​ ಏಕೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಸಿಡಿ ಪ್ರಕರಣ: ವಿಚಾರಣೆಗೆ ಹಾಜರಾದ ಜಾರಕಿಹೊಳಿಗೆ 50 ಪ್ರಶ್ನೆ ಎದುರಾಯ್ತು! ಏನೆಲ್ಲ ಉತ್ತರ ಕೊಟ್ರು ಗೊತ್ತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + nineteen =
Remember me
