ಬೆಂಗಳೂರು:ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣಲಾರಂಭಿಸಿದೆ. ಹಲವು ವಾರಗಳ ನಂತರ ಇದೀಗ ಸತತ ಎರಡನೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿವೆ.
ಶನಿವಾರದಂದು ಕರ್ನಾಟಕದಲ್ಲಿ 523 ಕರೊನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,50,730ಕ್ಕೆ ಏರಿಕಯಾಗಿದೆ. ಇದರಲ್ಲಿ 9,32,747 ಮಂದಿ ಗುಣಮುಖರಾಗಿದ್ದು, 5,638 ಸಕ್ರಿಯ ಪ್ರಕರಣಗಳ ಬಾಕಿಯುಳಿದಿವೆ. ಇಂದು ಒಂದೇ ದಿನ 380 ಜನರು ಗುಣಮುಖರಾಗಿರುವ ವರದಿ ಬಂದಿದೆ. ಸದ್ಯ ಸಕ್ರಿಯವಿರುವ ಪ್ರಕರಣಗಳಲ್ಲಿ 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಆರು ಮಂದಿ ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲದ ರಾಜ್ಯಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 12,326ಕ್ಕೆ ಏರಿಕೆಯಾಗಿದೆ.
ಇಂದು ದೃಢವಾದ ಪ್ರಕರಣಗಳಲ್ಲಿ ಅತಿ ಹೆಚ್ಚು (329) ಪ್ರಕರಣಗಳು ಬೆಂಗಳೂರಿನದ್ದಾಗಿದೆ. ಉಳಿದಂತೆ ಮೈಸೂರಿನಲ್ಲಿ 31, ದಕ್ಷಿಣ ಕನ್ನಡದಲ್ಲಿ 21, ಉಡುಪಿಯಲ್ಲಿ 18, ಕಲಬುರಗಿಯಲ್ಲಿ 17, ಬೆಳಗಾವಿಯಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)
ಇಂದಿನ 27/02/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/bj4Jd8L0fz@PMOIndia@narendramodi@CMofKarnataka@BSYBJP@MoHFW_INDIA@drharshvardhan@mla_sudhakar@Comm_dhfwka@MDNHM_Kar@CovidIndiaSeva@KarnatakaVarthe@PIBBengalurupic.twitter.com/NF7w8yxpc5
— K'taka Health Dept (@DHFWKA)February 27, 2021

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಲಾಕ್​ಡೌನ್​ ವಿಸ್ತರಣೆ; ಮಾರ್ಚ್​ 8ರವರೆಗೆ ಮನೆಯಲ್ಲೇ ಇರಿ ಎಂದ ಸರ್ಕಾರ

ವೈರಲ್​ ಆಯ್ತು ರಾಹುಲ್​ ಫಿಟ್​ನೆಸ್​ ಫೋಟೋ: ನೆಟ್ಟಿಗರಿಂದ ಪ್ರಶ್ನೆಗಳ ಜತೆ ಮೆಚ್ಚುಗೆಯ ಮಹಾಪೂರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
