ಬೆಂಗಳೂರು: ಕರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ರಾಜ್ಯದಲ್ಲಿ ಗುರುವಾರ 15ಕ್ಕೆ ಏರಿಕೆಯಾಗಿದ್ದು, ವಿದೇಶದಿಂದ ಆಗಮಿಸುವವರನ್ನು ಗುರುತಿಸಿ ಎಲ್ಲರ ಕೈಗೂ ಸ್ಟ್ಯಾಂಪಿಂಗ್ ಮಾಡುವ ಕೆಲಸಕ್ಕೆ ಸರ್ಕಾರ ಚಾಲನೆ ನೀಡಿದೆ. ಇದನ್ನು ಕಡ್ಡಾಯವಾಗಿ ಮಾಡುತ್ತಿದ್ದು, ಈ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರುತ್ತಲೇ 14 ದಿನಗಳ ಪ್ರತ್ಯೇಕ ವಾಸಕ್ಕೆ ಸೂಚಿಸಲಾಗುತ್ತದೆ.
ಕೈಗೆ ಹಾಕುವ ಮೊಹರಿನಲ್ಲಿ, ಪ್ರೌಡ್ ಟು ಪ್ರೊಟೆಕ್ಟ್ ಬೆಂಗಳೂರು, ಹೋಮ್ ಕ್ವಾರಂಟೈನ್ಡ್​ ಟಿಲ್ ಎಂದ ಬರೆಹವಿದ್ದು, ಚೌಕಟ್ಟಿನಿಂದ ಹೊರಗೆ ಎಲ್ಲಿಯವರೆಗೆ ಪ್ರತ್ಯೇಕವಾಗಿರಬೇಕು ಎಂಬ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಈ ಮೊಹರು ಬೇಗನೆ ಅಳಿಸಿ ಹೋಗಬಾರದು ಎನ್ನುವ ಕಾರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಬಳಸುವ ಶಾಯಿಯನ್ನು ಬಳಸುತ್ತಿದ್ದಾರೆ.ಕರೊನಾ ನಿಯಂತ್ರಣದ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರನ್ನು ಈ ರೀತಿ ಬೇರ್ಪಡಿಸಿ 14 ದಿನ ಪ್ರತ್ಯೇಕ ಇರುವಂತೆ ಸೂಚಿಸುವುದು ಅನಿವಾರ್ಯ. ಹೀಗಾಗಿ, ಕೈಗಳಲ್ಲಿ ಇಂಥ ಮೊಹರು ಇರುವ ಜನರೊಂದಿಗೆ ವ್ಯವಹರಿಸುವಾಗ ಈಗಾಗಲೇ ಸೂಚಿಸುವ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ನಡುವೆ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ #Covid19 ಕುರಿತ ಸಂದೇಹಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈಗಾಗಲೇ ಚಾಲ್ತಿಯಲ್ಲಿರುವ104ಎಂಬ ಸಹಾಯವಾಣಿಗೆ ಹೊರತಾಗಿ ಇನ್ನೊಂದು ಸಹಾಯವಾಣಿ ಸಂಖ್ಯೆಯನ್ನು ಚಾಲ್ತಿಗೆ ತಂದಿದೆ. ಅದು ಇಂತಿದೆ-080-46848600. ಇದಕ್ಕೆ ಹೊರತಾಗಿ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ1075ಇದ್ದೇ ಇದೆ.
ಕರೊನಾ ಕರಾಳಮುಖವನ್ನು ತೆರೆದಿಟ್ಟ ಕಾಜಲ್​: ಹಾರ್ಟ್ ಬ್ರೇಕಿಂಗ್ ಎಂದು ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ್ದ ಸುಂದರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 16 =
Remember me
