ಬೆಂಗಳೂರು:ರಾಜ್ಯ ರಾಜಧಾನಿ ಈಗ ಕರೊನಾ ರಾಜಧಾನಿಯಾಗುವತ್ತ ದಾಪುಗಾಲು ಇಟ್ಟಿದೆ. ಇದುವರೆಗೆ ಬೆಂಗಳೂರು ನಗರ ಪೊಲೀಸ್​, ಬಿಎಂಟಿಸಿ, ವಿಕಾಸಸೌಧದಲ್ಲಿ ಕಾಣಿಸಿಕೊಂಡಿದ್ದ ಕರೊನಾ ಸೋಂಕು ಈಗ ಅಗ್ನಿಶಾಮಕದಳಕ್ಕೂ ಹಬ್ಬಿದೆ.
ಬೆಂಗಳೂರು ನಗರದ ಅಗ್ನಿಶಾಮಕದಳದ ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುವ ನೌಕರರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ನೌಕರರನ್ನು ಅಗ್ನಿಶಾಮಕದಳದ ಕ್ವಾರ್ಟರ್ಸ್​ನಲ್ಲೇ ಕ್ವಾರಂಟೈನ್​ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದೀಗ ಕಂಟ್ರೋಲ್​ ರೂಂ ಅನ್ನು ಸೀಲ್​ ಡೌನ್​ ಮಾಡದಿರಲು ನಿರ್ಧರಿಸಲಾಗಿದೆ. ಸದ್ಯ ಅಲ್ಲಿ ಸ್ಯಾನಿಟೈಸಿಂಗ್​ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಅನ್ಯ ಸಿಬ್ಬಂದಿಯ ನೆರವಿನಿಂದ ಕಂಟ್ರೋಲ್​ ರೂಂನ ಕಾರ್ಯಾಚರಣೆ ಮುಂದುವರಿಸುವುದಾಗಿ ಅಗ್ನಿಶಾಮಕದಳದ ಎಡಿಜಿಪಿ ಸುನಿಲ್​ ಅಗರ್​ವಾಲ್​ ತಿಳಿಸಿದ್ದಾರೆ.
ದೇಶಿಯವಾಗಿ ಸಿದ್ಧವಾಗುತ್ತಿರುವ ಕೋವಿಡ್​ ಔಷಧ ಫ್ಯಾಬಿಫ್ಲೂ ಮಾತ್ರೆಯ ಬಗ್ಗೆ ಒಂದಷ್ಟು ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
