ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿನ ಗುಣಲಕ್ಷಣಗಳಿಲ್ಲದವರನ್ನು ಮತ್ತು ಸೌಮ್ಯ ಲಕ್ಷಣ ಹೊಂದಿರುವವರು ಮನೆಯುಲ್ಲೇ ಇದ್ದು ದೂರವಾಣಿ ಮೂಲಕ ವೈದ್ಯರ, ಆರೋಗ್ಯ ಸಿಬ್ಬಂದಿಯ ಸಲಹೆ ಪಡೆದು ಚಿಕಿತ್ಸೆ ಪಡೆಯುವಂತೆ ರಾಜ್ಯ ಆರೋಗ್ಯ ಇಲಾಖೆ ಶರತ್ತುಬದ್ಧ ಅವಕಾಶ ಕಲ್ಪಿಸಿದೆ.
ರಾಜ್ಯದ ಆಸ್ಪತ್ರೆಗಳು ಈಗಾಗಲೇ ಕೋವಿಡ್ ರೋಗಿಗಳಿಂದ ತುಂಬಿ ಹೋಗಿದ್ದು, ಹಾಸಿಗೆ ಕೊರತೆ ಎದುರಾಗಿದೆ. ಸೋಂಕಿನ ಗುಣಲಕ್ಷಣಗಳು ಗಂಭೀರವಾಗಿಲ್ಲದವರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಇದರಿಂದ ಗಂಭೀರ ಸ್ವರೂಪದ ಅರ್ಹ ರೋಗಿಗಳು ಅಗತ್ಯ ಚಿಕಿತ್ಸೆಯಿಂದ ವಂಚಿತರಾಗಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೋಮ್ ಐಸೋಲೇಷನ್ ಮಾರ್ಗಸೂಚಿ ಪ್ರಕಟಿಸಿದೆ.
ಸ್ವಲ್ಪ ಜ್ವರ (38 ಡಿಗ್ರಿ ಸೆಲ್ಷಿಯಸ್​ಗಿಂತ ಕಡಿಮೆ ಉಷ್ಣತೆ), ಆಮ್ಲಜನಕ ಮಟ್ಟ 95 ಅಥವಾ ಹೆಚ್ಚು ಇದ್ದವರಿಗೆ ಮಾತ್ರ ಹೋಮ್ ಐಸೋಲೇಷನ್​ನ ಅವಕಾಶ ಸಿಗಲಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ ಇರಬೇಕು. ಹೋಮ್ ಐಸೋಲೇಷನ್ ಸಂದರ್ಭದಲ್ಲಿ ರೋಗಿಯ ಮೇಲೆ ಸದಾ ನಿಗಾ ಇಡಲು ಒಬ್ಬ ವ್ಯಕ್ತಿ ಲಭ್ಯ ಇರಬೇಕು. ಈ ವ್ಯಕ್ತಿ ಮತ್ತು ಆಸ್ಪತ್ರೆಯ ಮಧ್ಯೆ ಹೋಮ್ ಐಸೋಲೇಷನ್ ಸಂದರ್ಭದಲ್ಲಿ ನಿರಂತರ ಸಂಪರ್ಕ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
60 ವರ್ಷ ದಾಟಿದವರು, ಪೂರ್ವ ಕಾಯಿಲೆಗಳಾದ ಹೈಪರ್ ಟೆನ್ಷನ್, ಮಧುಮೇಹ, ಹೃದ್ರೋಗ, ಶ್ವಾಸಕೋಶ, ಕಿಡ್ನಿ, ಲಿವರ್ ಸಮಸ್ಯೆ ಇರುವವರ ಆರೋಗ್ಯ ಸ್ಥಿತಿಗತಿಯ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ವೈದ್ಯಕೀಯ ಅಧಿಕಾರಿ, ಕುಟುಂಬದ ವೈದ್ಯರ ಅನುಮತಿ ಮೇಲೆ ಹೋಮ್ ಐಸೋಲೆಷನ್‌ಗೆ ಅವಕಾಶ ನೀಡಬಹುದು. ಹೋಮ್ ಐಸೋಲೇಷನ್ ಆಗುವುದಾಗಿ ಮತ್ತು ಹೋಮ್ ಐಸೋಲೇಷನ್‌ನ ನಿಯಮಗಳನ್ನು ಪಾಲಿಸುವುದಾಗಿ ಒಪ್ಪಿಗೆ ಪತ್ರ ಕೊಡಬೇಕು. ತನ್ನ ಆರೋಗ್ಯ ಪರಿಸ್ಥಿತಿ ಮೇಲೆ ಸದಾ ನಿಗಾ ಇಟ್ಟು ನಿಯಮಿತವಾಗಿ ಮಾಹಿತಿಯನ್ನು ಟೆಲಿಮಾನಿಟರಿಂಗ್ ಟೀಮ್‌ಗೆ ನೀಡುತ್ತಿರಬೇಕು.
ಬಾಣಂತಿಯರಿಗೂ ಹೋಮ್ ಐಸೋಲೇಷನ್:ಪ್ರಸವಕ್ಕೆ ಎರಡು ವಾರ ಬಾಕಿ ಇರುವ ಗರ್ಭಿಣಿಯರಿಗೆ ಹೋಮ್ ಐಸೋಲೇಶನ್ ಅವಕಾಶ ಇಲ್ಲ. ಆದರೆ ವೈದ್ಯರು ಅನುಮತಿ ನೀಡಿದರೆ ಬಾಣಂತಿಯರು ಹೋಮ್ ಐಸೋಲೇಶನ್‌ನಲ್ಲಿ ಇರಬಹುದು.
ಹೋಮ್ ಐಸೋಲೇಶನ್‌ಗೆ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ ಇರುವುದು ಕಡ್ಡಾಯ. ಹಿರಿಯ ನಾಗರಿಕರು, ಪೂರ್ವ ಕಾಯಿಲೆ ಇರುವವರಿಂದ ಸದಾ ಅಂತರ ಕಾಪಾಡಬೇಕು ಎಂದು ಮಾರ್ಗಸೂಚಿ ತಿಳಿಸಿದೆ. ಹಾಗೆಯೇ ರೋಗಿಯನ್ನು ಕೋವಿಡ್ ಆರೈಕೆ ಕೇಂದ್ರ ಮತ್ತು ಕೋವಿಡ್ ಚಿಕಿತ್ಸೆಗೆಂದು ನಿಗದಿ ಪಡಿಸಿರುವ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯು ಸತತ ಮೂರು ದಿನಗಳಿಂದ ಕೋವಿಡ್‌ನ ಗುಣ ಲಕ್ಷಣ ಹೊಂದಿಲ್ಲದಿದ್ದರೆ, ಸತತ ನಾಲ್ಕು ದಿನಗಳಿಂದ ಆಮ್ಲಜನಕದ ಮಟ್ಟ ೯೫ಕ್ಕಿಂತ ಹೆಚ್ಚಿದ್ದರೆ ಆ ವ್ಯಕ್ತಿಯನ್ನು ಆರೋಗ್ಯದ ಸಂಪೂರ್ಣ ಪರಿಶೀಲನೆ ನಡೆಸಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಒಂದು ತಿಂಗಳ ಕಾಲ ಸೆಕ್ಷನ್​ 144 ಘೋಷಣೆ! ಏಪ್ರಿಲ್​ 22ರಿಂದಲೇ ಜಾರಿ

ದೇಶದಲ್ಲಿ 44 ಲಕ್ಷ ಡೋಸೇಜ್​ ಕರೊನಾ ಲಸಿಕೆ ವ್ಯರ್ಥ! ಆರ್​ಟಿಐನಲ್ಲಿ ಬಯಲಾಯ್ತು ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
