| ಅವಿನಾಶ ಮೂಡಂಬಿಕಾನ ಬೆಂಗಳೂರು
ಐ ಮಾನಿಟರಿ ಅಡ್ವೈಸರಿ(ಐಎಂಎ)ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೂ ಕರೊನಾ ಗ್ರಹಣ ಕವಿದಿರುವ ಪರಿಣಾಮ ಪರಿಹಾರದ ನಿರೀಕ್ಷೆಯಲ್ಲಿದ್ದ 70 ಸಾವಿರಕ್ಕೂ ಅಧಿಕ ಮಂದಿಗೆ ನಿರಾಸೆಯಾಗಿದೆ. ಹೂಡಿಕೆಯ ಹಣದಲ್ಲಿ ಸ್ವಲ್ಪ ಪಾಲು ಇನ್ನೇನು ಗ್ರಾಹಕರ ಕೈಸೇರಬೇಕೆನ್ನುವಷ್ಟರಲ್ಲಿ ಕರೊನಾ ಕಾರಣದಿಂದಾಗಿ ಪರಿಹಾರ ಒದಗಿಸುವ ಪ್ರಕ್ರಿಯೆಯನ್ನೇ ಸಕ್ಷಮ ಪ್ರಾಧಿಕಾರ ಸ್ಥಗಿತಗೊಳಿಸಿದೆ.
ಎಲ್ಲವೂ ಸ್ಥಗಿತ: ವಂಚನೆ ಬೆಳಕಿಗೆ ಬಂದ ಬಳಿಕ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಸಂಸ್ಥೆ ಮಾಲೀಕ ಮೊಹಮದ್ ಮನ್ಸೂರ್​ನಿಂದ 450 ಕೋಟಿ ರೂ. ಜಪ್ತಿ ಮಾಡಿ ಆಸ್ತಿ ಹರಾಜಿಗೆ ಸಿದ್ಧರಾಗಿದ್ದರು. ಬಂದ ಹಣವನ್ನು ಗ್ರಾಹಕರಿಗೆ ಮರಳಿಸಲು ತೀರ್ವನಿಸಲಾಗಿತ್ತು. ಅದಕ್ಕಾಗಿಯೇ ರೂಪಿಸಿರುವ ಐಎಂಎ ಆಪ್ ಅಂತಿಮ ಹಂತದಲ್ಲಿತ್ತಲ್ಲದೆ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿತ್ತು. ವಾರದೊಳಗೆ ಪ್ರಕ್ರಿಯೆ ಮುಗಿಯಬೇಕೆನ್ನುವಷ್ಟರಲ್ಲಿ ಕರೊನಾ ಕಾರಣಕ್ಕೆ ಎಲ್ಲ ಕಾರ್ಯಗಳಿಗೂ ಬ್ರೇಕ್ ಬಿದ್ದಿದೆ. ಐಎಂಎ ಪ್ರಕರಣ ಇತ್ಯರ್ಥಪಡಿಸಲೆಂದೇ ರಚಿಸಲಾಗಿರುವ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಕೂಡ ತಾತ್ಕಾಲಿಕವಾಗಿ ನಿಂತಿದೆ.
ಇದನ್ನೂ ಓದಿ:VIDEO: ಹೆದ್ದಾರೀಲಿ ಕುದುರೆ ಸವಾರಿ ಮಾಡಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಎಂಎಲ್​ಎ ಪುತ್ರ…!
ಗ್ರಾಹಕರನ್ನು ಸೆಳೆಯಲು ಕಂಪನಿ ಭಾರಿ ಲಾಭಗಳಿಸುತ್ತಿ ರುವುದಾಗಿ ತಪು್ಪ ಲೆಕ್ಕ ತೋರಿಸಿ ಮನ್ಸೂರ್ 100 ಕೋಟಿ ರೂ.ಗೂ ಅಧಿಕ ಆದಾಯ ತೆರಿಗೆ ಪಾವತಿಸಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು. ಸಕ್ಷಮ ಪ್ರಾಧಿಕಾರ ಈ ಮೊತ್ತವನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆದು ವಂಚನೆಗೊಳಗಾದವರಿಗೆ ಮರಳಿಸಲು ನಿರ್ಧರಿಸಿತ್ತು. ಈ ಪ್ರಕ್ರಿಯೆಯೂ ನಿಂತು ಹೋದ್ದರಿಂದ ಸಂತ್ರಸ್ತರಿಗೆ ಸದ್ಯಕ್ಕೆ ಪರಿಹಾರ ಸಿಗುವ ಲಕ್ಷಣಗಳಿಲ್ಲ ಎನ್ನಲಾಗಿದೆ.
2 ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ವಂಚಿಸಿದ್ದ ಮನ್ಸೂರ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಮತ್ತೆ ತನಿಖೆ ಆರಂಭವಾಗುವವರೆಗೂ ಈತನ ವಿಚಾರಣೆ ನಡೆಸುವ ಸಾಧ್ಯತೆಗಳಿಲ್ಲ. ಈತ ಸಿಬಿಐ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯೂ ಕರೊನಾ ಹಿನ್ನೆಲೆಯಲ್ಲಿ ಸದ್ಯ ನಿಂತಿದೆ.
20 ವರ್ಷಗಳಿಂದ ಕೂಲಿ ಕೆಲಸ ಮಾಡಿ ಕೂಡಿಟ್ಟ -ಠಿ;10 ಲಕ್ಷವನ್ನು ಹೂಡಿಕೆ ಮಾಡಿದ್ದೆ. ಇದೀಗ ಜಪ್ತಿ ಮಾಡಿದ ಹಣದಲ್ಲಿ ಸ್ವಲ್ಪ ಹಣ ಕೈ ಸೇರಬಹುದು ಎಂದುಕೊಂಡಿದ್ದೆ. ಆದರೆ ಈಗ ನಿರಾಸೆ ಆಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಹಕ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ:ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
