ಬಳ್ಳಾರಿ: ಕರೊನಾ ಸೋಂಕು ತಗುಲಿದ್ದ 58 ವರ್ಷದ ಜಿಂದಾಲ್ ಉದ್ಯೋಗಿ ಶನಿವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಡಿದ್ದಾರೆ. ಬೆಂಗಳೂರು ಮೂಲದ ನೌಕರ ಜಿಂದಾಲ್ ಕಾರ್ಖಾನೆಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಜೂ.2ರಂದು ಬೆಂಗಳೂರಿಗೆ ತೆರಳಿದ್ದರು. ಜೂ.6ರಂದು ಅನಾರೋಗ್ಯ ಹಿನ್ನೆಲೆಯಲ್ಲಿ ಮೊದಲಿಗೆ ಸಂಜಯಗಾಂಧಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ನ್ಯೂಮೋನಿಯಾ ಇರುವುದರ ಜತೆಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಸೋಂಕಿತ ಶನಿವಾರ ಮೃತಪಟ್ಟಿದ್ದಾರೆ. ಉದ್ಯೋಗಿ ಮೃತಪಟ್ಟಿರುವುದನ್ನು ಜೆಎಸ್ ಡಬ್ಲ್ಯೂ ಸ್ಟೀಲ್ಸ್ ತೋರಣಗಲ್ ಘಟಕದ ಉಪಾಧ್ಯಕ್ಷ ಮಂಜುನಾಥ ಪ್ರಭು ಖಚಿತಪಡಿಸಿದ್ದಾರೆ.
ಜಿಂದಾಲ್ ನಲ್ಲಿ ತಮಿಳುನಾಡಿನಿಂದ ಆಗಮಿಸಿದ್ದ ಕೊರೆಕ್ಸ್ ವಿಭಾಗದ ನೌಕರನಿಗೆ ಜೂ.3ರಂದು ಮೊದಲು ಸೋಂಕು ದೃಢಪಟ್ಟಿತ್ತು. ಮರುದಿನ ಕಾಮನ್ ಮೆಂಟೇನೆನ್ಸ್ ವಿಭಾಗದ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಸೋಂಕಿತರೊಂದಿಗೆ ಮೃತ ಉದ್ಯೋಗಿ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!
ಜಿಂದಾಲ್ ಸೋಂಕಿತರ ಸಂಖ್ಯೆ ಭಾನುವಾರಕ್ಕೆ 106ಕ್ಕೆ ತಲುಪಿದೆ. ಜಿಂದಾಲ್ ನೌಕರರು ಬಳ್ಳಾರಿ, ಕುರುಗೋಡು, ಸಂಡೂರು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಾಸವಾಗಿದ್ದು, ಎಲ್ಲೆಡೆ ಸೋಂಕಿನ ಜಾಲ ಪಸರಿಸಿದೆ. ಕೊಪ್ಪಳ ಜಿಲ್ಲೆಗೂ ಸೋಂಕು ಹಬ್ಬಿರುವ ಅನುಮಾನ ವ್ಯಕ್ತವಾಗುತ್ತಿದೆ. ಗಂಗಾವತಿ ತಾಲೂಕಿನಲ್ಲಿ ದಂಪತಿಗೆ ಇಂದು ಕರೊನಾ ದೃಢಪಟ್ಟಿದೆ. ಈ ದಂಪತಿಯ ಪುತ್ರ ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದು, ಪುತ್ರನಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಜಿಂದಾಲ್ ಗೆ ಸಂಬಂಧಿಸಿ ಕಳೆದ ವಾರಕ್ಕೆ ಹೋಲಿಸಿದರೆ ಪ್ರಸ್ತುತ ಕರೊನಾ ನಿಯಂತ್ರಣದಲ್ಲಿದೆ. ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ ಎಂದು ಜೆಎಸ್ ಡಬ್ಲ್ಯೂ ಉಪಾಧ್ಯಕ್ಷ ಮಂಜುನಾಥ ಪ್ರಭು ವಿಜಯವಾಣಿ ಗೆ ತಿಳಿಸಿದರು.
ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು: 10 ಲಕ್ಷ ಜನರ ಮೇಲಿದೆ ಕರೊನಾ ಕತ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
