ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮಾರ್ಚ್​ 31ರವರೆಗೆ ಸಾರ್ವಜನಿಕ ಸಭೆ, ಸಮಾರಂಭ, ಮದುವೆ, ಜಾತ್ರೆ, ಧಾರ್ಮಿಕ ಉತ್ಸವಗಳನ್ನು ನಿಷೇಧಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್​ ಹೇಳಿದರು.
ಕರೊನಾ ವೈರಸ್​ ಸೋಂಕು ಹರಡುವಿಕೆ ಮೇಲೆ ನಿಗಾ ವಹಿಸಲು ಸಚಿವರು ಮತ್ತು ಮುಖ್ಯಕಾರ್ಯದರ್ಶಿ ಒಳಗೊಂಡ ಕಾರ್ಯಪಡೆ ರಚನೆ ಮಾಡಲಾಗಿದೆ. ಈ ಕಾರ್ಯಪಡೆ ಪ್ರತಿ ದಿನ ವೈರಸ್​ ಸೋಂಕು ಬಗ್ಗೆ 2 ಬಾರಿ ಬುಲೆಟಿನ್​ ಹೊರಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ವಿದೇಶದಿಂದ ಬಂದವರನ್ನು 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಿ ಕೊಠಡಿಯಲ್ಲಿ ಇರಿಸಲಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತ-ಮುತ್ತ ಇರುವ ಸರ್ಕಾರಿ, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಹೋಟೆಲ್​, ರೆಸಾರ್ಟ್​ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಮಾರ್ಚ್​ 31ರವರೆಗೆ ಹೋಟೆಲ್​ ಪಬ್​, ಜಾತ್ರೆ, ಮದುವೆ, ಸಮಾರಂಭ ನಿಷೇಧಿಸಲಾಗಿದೆ. 300 ಜನಕ್ಕಿಂತ ಹೆಚ್ಚು ಮಂದಿ ಸೇರುವ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ರದ್ದುಗೊಳಿಸಲಾಗಿದೆ. ವಿಧಾನಸಭೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದರು.
ವಿದೇಶದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಬಲಗೈ ಮೇಲೆ ಸ್ಟಾಂಪ್​ ಹಾಕಲಾಗುವುದು. ಅವರು ವಿದೇಶದಿಂದ ಬಂದವರು ಎಂದು ಗುರುತಿಸಲು ಇದು ಸಹಾಯಕವಾಗುತ್ತದೆ.
ಕರೊನಾ ವೈರಸ್​ ಸೋಂಕಿನಿಂದ ಸಾವು ಸಂಭವಿಸುವುದು ತೀರ ಕಡಿಮೆ. ಹೀಗಾಗಿ ಸಾರ್ವಜನಿಕರು ಭಯಪಡುವುದು ಬೇಡ. ಈ ವೈರಸ್​ ವೇಗವಾಗಿ ಹರಡುವುದರಿಂದ ಭೀತಿ ಉಂಟಾಗುತ್ತದೆ.
ಆತಂಕ ಬೇಡ: ಈವರೆಗೆ ರಾಜ್ಯದಲ್ಲಿ 1,17306 ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ವಿಶ್ವದಲ್ಲಿ ಸೋಂಕಿಗೆ ತುತ್ತಾದವರ ಸಂಖ್ಯೆ 80,881 ಇದರಲ್ಲಿ 68 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಕೇವಲ 3 ಸಾವಿರ ಮಂದಿ ಮಾತ್ರ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ಶೇ.0.5 ಮಾತ್ರ ಹೀಗಾಗಿ ಸಾರ್ವಜನಿಕರು ಭಯಪಡುವುದು ಬೇಡ ಎಂದರು.
ಮಾರ್ಚ್​ 31ರವರೆಗೂ ಕರ್ನಾಟಕ ಬಂದ್​! ತುರ್ತು ಸಚಿವ ಸಂಪುಟ ಸಭೆಯಲ್ಲಿ ಬಂದ್​ ವಿಸ್ತರಣೆಯ ಮಹತ್ವದ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
