ಬೆಂಗಳೂರು:ಕೊರೊನಾ ಸೋಂಕು ಪತ್ತೆಯಾಗಿರುವ ಟೆಕ್ಕಿಯ ಪತ್ನಿ, ಮಗಳು ಕಲಿಯುತ್ತಿರುವ ಶಾಲೆಗೆ ಪತ್ರ ಬರೆದು ಶಾಲೆಗೆ ರಜೆ ನೀಡುವಂತೆ ಕೋರಿರುವುದು ಬೆಳಕಿಗೆ ಬಂದಿದೆ.
ನನ್ನ ಪತಿಗೆ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ. ಮಗಳು ಶಾಲೆಗೆ ಬಂದರೆ ಕೊರೊನಾ ವೈರಸ್​ ಹರಡಬಹುದು. ಹೀಗಾಗಿ ಇಡೀ ಶಾಲೆಗೆ ರಜೆ ಘೋಷಿಸಬೇಕು ಎಂದು ಸೋಂಕು ಪೀಡಿತ ಟೆಕ್ಕಿಯ ಪತ್ನಿ ಶಾಲೆಗೆ ಇಮೇಲ್​ ಕಳುಹಿಸಿದ್ದಾರೆ.
ಇಮೇಲ್​ ನೋಡಿ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ. ಅಲ್ಲದೆ ಪಾಲಕರಿಗೆ, ನಮ್ಮ ಶಾಲೆಯ ವಿದ್ಯಾರ್ಥಿಯ ಪಾಲಕರೊಬ್ಬರಿಗೆ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ. ಹೀಗಾಗಿ ರಜೆ ಘೋಷಿಸಲಾಗಿದೆ ಎಂದು ಶಾಲಾ ಆಡಳತಿ ಮಂಡಳಿ ಮಾಹಿತಿ ನೀಡಿದೆ.
ಶಾಲೆಗೆ ರಜೆ ಘೋಷಿಸಿರುವುದು ಗಮನಕ್ಕೆ ಬರುತ್ತಲೇ ಆರೋಗ್ಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ತೆರಳಿ ಮಾಹಿತಿ ಪಡೆದರು. ವಿಷಯವನ್ನು ಮುಚ್ಚಿಟ್ಟ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಸಿಡಿಮಿಡಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + ten =
Remember me
