ಬೆಂಗಳೂರು: ನಗರದಲ್ಲಿ ಭಾನುವಾರ 21 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಪೊಲೀಸ್, ವೈದ್ಯೆ, ವ್ಯಾಪಾರಿ ಹಾಗೂ ಬಿಬಿಎಂಪಿ ಅಧಿಕಾರಿಯ ಪತ್ನಿಯೂ ಸೇರಿದ್ದಾರೆ. ಇನ್ನು ಒಂದೇ ದಿನ 59 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಅಧಿಕವಾಗಿದೆ.
ಒಟ್ಟು 6 ಅಂತಾರಾಷ್ಟ್ರೀಯ ಪ್ರಯಾಣಿಕರು, 3 ಮುಂಬೈನಿಂದ ಬಂದವರು, ಡಿ.ಜೆ. ಹಳ್ಳಿಯ ಕೊಳೆಗೇರಿಯಲ್ಲಿ ಸೋಂಕಿಗೆ ಒಳಗಾಗಿದ್ದ ಮಹಿಳೆಯ ಪ್ರಾಥಮಿಕ ಸಂಪರ್ಕ 4, ಪೊಲೀಸ್ ಪೇದೆ, ಬಿಬಿಎಂಪಿ ಅಧಿಕಾರಿ ಪತ್ನಿ, ವೈದ್ಯೆ, ತರಕಾರಿ ವ್ಯಾಪಾರಿ, ಲಾರಿ ಚಾಲಕ ಹಾಗೂ ಗರ್ಭಿಣಿ ಹಾಗೂ ಪಾದರಾಯನಪುರದಲ್ಲಿ ಕಂಟೇನ್ಮೆಂಟ್ ಸಂಪರ್ಕ ಹೊಂದಿದ ಮಹಿಳೆ ಸೇರಿದ್ದಾರೆ. ನಗರದ ಒಟ್ಟಾರೆ ಸೋಂಕಿತರಲ್ಲಿ ವಿಭಿನ್ನ ವೃತ್ತಿಯ ಹಿನ್ನೆಲೆಯುಳ್ಳವರು ಸೋಂಕಿಗೆ ತುತ್ತಾಗಿದ್ದು, ಅವರೆಲ್ಲರೂ ನಿರಂತರವಾಗಿ ಕೆಲಸ ಮಾಡುತ್ತಾ ಹೆಚ್ಚು ಜನರಿಗೆ ಸೋಂಕು ಹರಡಲು ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಬಾಲಿವುಡ್​ ನಟ ಅರ್ಷದ್​ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್​ ಬಿ ಪುತ್ರ ಅಭಿಷೇಕ್​ ಬಚ್ಚನ್
59 ಜನರು ಗುಣಮುಖ
ರಾಜಧಾನಿಯಲ್ಲಿ ಭಾನುವಾರ 59 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಗರದಲ್ಲಿ ಒಟ್ಟು 357ಕ್ಕೆ ಸೋಂಕಿತರ ಸಂಖ್ಯೆಯಿದ್ದು, ಅದರಲ್ಲಿ 231 ಜನರು ಬಿಡುಗಡೆಯಾಗಿದ್ದು, 115 ನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.
ವೈದ್ಯೆಗೆ ಸೋಂಕು:ಗುರಪ್ಪನಪಾಳ್ಯದ ಖಾಸಗಿ ಕ್ಲಿನಿಕ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ದಂತ ವೈದ್ಯೆಗೆ ಸೋಂಕು ದೃಢಪಟ್ಟಿದೆ. ಇವರು ಪ್ರತಿನಿತ್ಯ ಚಿಕಿತ್ಸೆ ನೀಡುತ್ತಿದ್ದು, ಅವರ ಪ್ರಾಥಮಿಕ ಸಂಪರ್ಕದ 7, ದ್ವಿತೀಯ ಸಂಪರ್ಕದ 14 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಡಿ.ಜೆ.ಹಳ್ಳಿಯ ಮಹಿಳೆ ಸಂಪರ್ಕ ಹೊಂದಿದ್ದ ಪೊಲೀಸ್ ಪೇದೆಗೆ ಸೋಂಕು ಕಾಣಿಸಿಕೊಂಡಿದೆ. ಹೊಸಕೆರೆಹಳ್ಳಿ ವಾರ್ಡ್​ನ ನಿವಾಸಿಯೊಬ್ಬ ಪ್ರತಿನಿತ್ಯ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗಿ ಮಧ್ಯವರ್ತಿಯಾಗಿ ವ್ಯಾಪಾರ ಮಾಡಿ ಬರುತ್ತಿದ್ದನು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಸೋಂಕು ದೃಢಪಟ್ಟಿದ್ದು ಈತನ ಸಂಪರ್ಕದ 14 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಇದನ್ನೂ ಓದಿ:ಲಾರಿಗೆ ಸಿಲುಕಿ ಟೋಲ್ ನೌಕರ ಸಾವು
32 ಕಂಟೇನ್ಮೆಂಟ್ ಪ್ರದೇಶಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ 7 ಹೊಸ ವಾರ್ಡ್​ಗಳಲ್ಲಿ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಗುರುವಾರ ಕೇವಲ 25 ಇದ್ದ ಕಂಟೇನ್ಮೆಂಟ್ ಪ್ರದೇಶ ಶನಿವಾರದ ಅಂತ್ಯಕ್ಕೆ 32ಕ್ಕೆ ಏರಿಕೆಯಾಗಿದೆ. ಮೇ 29 ರಂದು ಸಿದ್ದಾಪುರ, ಹೊಸಹಳ್ಳಿ, ಬೊಮ್ಮನಹಳ್ಳಿ, ಎಚ್​ಎಸ್​ಆರ್ ಲೇಔಟ್ ಹಾಗೂ 30 ರಂದು ಅಗರ, ಕಾಡುಗೋಡಿ, ಚೊಕ್ಕಸಂದ್ರ ವಾರ್ಡ್ ಗಳಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್​ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಪಾಲಿಕೆಯಲ್ಲಿ ಸೋಂಕಿನ ಆತಂಕ:ಪಾದರಾಯನಪುರದ ವಾರ್ಡ್ ಕಾಪೋರೇಟರ್ ಇಮ್ರಾನ್​ಪಾಷಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಹಾಗೂ ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಜಾಹೀರಾತು ವಿಭಾಗದ ಅಧಿಕಾರಿ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದ್ದು, ಅಧಿಕಾರಿ ಸೇರಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಕಚೇರಿಯಲ್ಲಿ ಅಧಿಕಾರಿ ಸಂಪರ್ಕದಲ್ಲಿರುವವರಿಗೆ ಈಗ ಸೋಂಕಿನ ಆತಂಕ ಶುರುವಾಗಿದೆ.
11 ತಿಂಗಳ ಮಗು ಬಕೆಟ್​ಗೆ ಬಿದ್ದು ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
