ಬೆಂಗಳೂರು: ಕರೊನಾ ಸೋಂಕು ತಡೆಗೆ ನಮ್ಮ ಕಣ್ಮುಂದೆ ಕೆಲಸ ಮಾಡುವ ಹಲವು ಸಿಬ್ಬಂದಿ ಜತೆಗೆ, ತೆರೆಮರೆಯಲ್ಲಿ ನೆರವಾಗುತ್ತಿರುವ ತಾಂತ್ರಿಕ ಸೇವಾ ಸಿಬ್ಬಂದಿಗೆ ನಮ್ಮ ಸಲಾಂ ಸಲ್ಲಿಸುವುದು ಅಗತ್ಯವಾಗಿದೆ.
ಹೌದು.. ಕರೊನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಹಾಗೂ ಜನರು ಮನೆಯಿಂದ ಹೊರಗೆ ಬಂದು ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ಪೊಲೀಸರು ಹಾಗೂ ಸ್ವಚ್ಛತೆ ಕಾಪಾಡುವ ಪೌರ ಕಾರ್ವಿುಕರು ನಮ್ಮ ಕಣ್ಣಿಗೆ ಕಾಣಿಸುತ್ತಿದ್ದಾರೆ. ಅವರೆಲ್ಲರಿಗೂ ನಾವು ಮನಪೂರ್ವಕವಾಗಿ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಅದೇ ರೀತಿ ಕರೊನಾ ಸೋಂಕಿತರು, ಶಂಕಿತರು, ನಿಗಾಬಂಧನದಲ್ಲಿರುವ ವ್ಯಕ್ತಿಗಳು ಹಾಗೂ ಜನರ ತಪಾಸಣೆಗೆ ನೆರವಾಗುವಂತೆ ‘ಕರೊನಾ ವಾರ್ ರೂಂ ಸಿಬ್ಬಂದಿ’ ಕೆಲಸ ಮಾಡುತ್ತಿದ್ದಾರೆ.
ಕರೊನಾ ವಾರ್ ರೂಂ ಸೇವೆ:ಕರೊನಾ ಸೋಂಕು ನಿಯಂತ್ರಣಕ್ಕೆ ಚಿಕಿತ್ಸೆ ಜತೆಗೆ ತಾಂತ್ರಿಕ ಸೇವೆಯೂ ಅಗತ್ಯ ಎಂಬುದನ್ನು ಕರೊನಾ ವಾರ್ ರೂಂ’ ಮೂಲಕ ದೇಶಕ್ಕೆ ಬಿಬಿಎಂಪಿ ತೋರಿಸಿಕೊಟ್ಟಿದೆ. ಸೋಂಕಿತರ ಪ್ರಮಾಣ, ಸೋಂಕಿನ ವ್ಯಾಪ್ತಿ, ಸೋಂಕಿತರ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲು ‘ವಾರ್ ರೂಂ ಸಿಬ್ಬಂದಿ 247’ ಸೇವೆ ಸಲ್ಲಿಸುತ್ತಿದೆ. ಬಿಬಿಎಎಂಪಿಗೆ ಸೀಮಿತವಾಗಿದ್ದ ‘ವಾರ್ ರೂಂ ತಾಂತ್ರಿಕ ಸೇವೆ’ಯನ್ನು ಸಿಎಂ ಆದೇಶದ ಮೇರೆಗೆ ರಾಜ್ಯಕ್ಕೆ ವಿಸ್ತರಣೆ ಮಾಡಲಾಯಿತು. ಈಗ ಬಿಬಿಎಂಪಿ ಹಾಗೂ ರಾಜ್ಯ ವ್ಯಾಪ್ತಿಯ ಕರೊನಾ ಸೋಂಕಿತರ ಕಣ್ಗಾವಲಾಗಿ ವಾರ್ ರೂಂ ಕಾರ್ಯ ನಿರ್ವಹಿಸುತ್ತಿದೆ.
150 ಸಿಬ್ಬಂದಿ ಸೇವೆ:ಲಾಕ್​ಡೌನ್ ನಡುವೆಯೂ ಅಗತ್ಯ ಸೇವೆಯಲ್ಲಿ ಕರೊನಾ ವಾರ್ ರೂಂ ಸಿಬ್ಬಂದಿ ಹಗಲಿರುಳು 3 ಪಾಳಿಯಲ್ಲಿ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡ್ಯಾಶ್ ಬೋರ್ಡ್ ಹಾಗೂ ಬುಲೆಟಿನ್ ಹಾಗೂ ಆಪ್​ಗಳ ಮೂಲಕ ಕ್ಷಣ-ಕ್ಷಣದ ದತ್ತಾಂಶ ಒದಗಿಸುತ್ತಾರೆ. ಬಿಬಿಎಂಪಿ ಸಹಾಯವಾಣಿ, ದಾಸೋಹ ಸಹಾಯವಾಣಿ ಹಾಗೂ ಸಹಾಯ 2.0, ಪಿಎಚ್​ಇಐಸಿ, ನಮ್ಮ ಬೆಂಗಳೂರು ಆಪ್​ಗಳ ಮೂಲಕ ದೂರು ಸ್ವೀಕರಿಸಲಾಗುತ್ತದೆ. ವಾರ್ ರೂಂ ನೆರವಿನೊಂದಿಗೆ ಕರೊನಾ ಸೋಂಕಿತ ವ್ಯಕ್ತಿಗಳ ಚಿಕಿತ್ಸೆಗೆ ಕರೊನಾ ವಾಚ್ ಆಪ್ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಆಂಬುಲೆನ್ಸ್, ವೈದ್ಯರು ಹಾಗೂ ಆಸ್ಪತ್ರೆಯ ಹಾಸಿಗೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಸರ್ಕಾರದ ಯೋಜನೆಗಳಿಗೆ ಸಹಕಾರಿ:ವಾರ್ ರೂಂನಲ್ಲಿ ಸಿದ್ಧಪಡಿಸುವ ತಾಂತ್ರಿಕ ಮಾಹಿತಿ ಆಧಾರದ ಮೇಲೆ ಸರ್ಕಾರ ಮತ್ತು ಬಿಬಿಎಂಪಿ ತಮ್ಮ ಮುಂದಿನ ಯೋಜನೆಗಳನ್ನು ರೂಪಿಸುತ್ತಿದೆ. ಕರೊನಾ ಸೋಂಕಿತ ವ್ಯಕ್ತಿ ಕಂಡುಬಂದರೆ, ಅವರು ನೆಲೆಸಿದ್ದ ಸ್ಥಳದ ಸುತ್ತಲೂ 3 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್​ವೆುಂಟ್ ವಲಯ ಎಂದು ಗುರುತಿಸಲಾಗುತ್ತದೆ. ಈ ಮಾಹಿತಿ ಆಧರಿಸಿ ಆರೋಗ್ಯಾಧಿಕಾರಿಗಳು ಜನರ ತಪಾಸಣೆ ಮಾಡುತ್ತಾರೆ. ಹಾಟ್​ಸ್ಪಾಟ್ ಪ್ರದೇಶಗಳನ್ನು ಗುರುತಿಸಲಾಗುತ್ತದೆ. ಜತೆಗೆ ಲಾಕ್​ಡೌನ್ ಹಾಗೂ ಸೀಲ್​ಡೌನ್ ಮಾಡಲು ಕರೊನಾ ವಾರ್ ರೂಂ ದತ್ತಾಂಶಗಳು ಪೂರಕವಾಗಿವೆ.ವಾರ್ ರೂಂ ದತ್ತಾಂಶಗಳ ನೆರವಿನೊಂದಿಗೆ ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆ ಸೇರಿ ಜೂ.30ರ ವರೆಗೆ ಯೋಜನೆಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ಧಪಡಿಸಿಕೊಳ್ಳಲಾಗಿದೆ. ಕರೊನಾ ಸೋಂಕು ತಡೆಯಲು ಬಾಹ್ಯ ಸೇವೆಯ ಜತೆಗೆ ತಾಂತ್ರಿಕ ಸೇವೆ ಮುಖ್ಯವಾಗಿದೆ.| ಹೆಪ್ಸಿಬಾರಾಣಿ ಕೊರ್ಲಪಾಟಿ, ಎಂಡಿ, ಬೆಂಗಳೂರು ಸ್ಮಾರ್ಟ್​ಸಿಟಿ ಲಿ.ದಂತ ವೈದ್ಯಕೀಯ ಕ್ಲಿನಿಕ್ ತೆರೆಯುವುದು ಕಷ್ಟದಂತ ವೈದ್ಯಕೀಯ ಕ್ಲಿನಿಕ್​ಗಳನ್ನು ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡುವ ಲಕ್ಷಣ ಕಾಣುತ್ತಿಲ್ಲ. ಎರಡನೇ ಸುತ್ತಿನ ಲಾಕ್​ಡೌನ್ ಬಳಿಕವೂ ದಂತ ವೈದ್ಯಕೀಯ ಕ್ಲಿನಿಕ್ ತೆರೆಯುವುದಕ್ಕೆ ಅನುಮತಿ ನೀಡುವುದು ಕಷ್ಟ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ದಂತವೈದ್ಯರು ರೋಗಿಗಳಿಗೆ ಬಹಳ ಹತ್ತಿರದಿಂದ ಚಿಕಿತ್ಸೆ ನೀಡಬೇಕಾಗಿದೆ. ಇದು ಕರೊನಾ ವೈರಸ್ ಹರಡುವಿಕೆಗೆ ಎಡೆ ಮಾಡಿಕೊಡಲಿದೆ. ಎರಡನೇ ಸುತ್ತಿನ ಲಾಕ್​ಡೌನ್ ಬಳಿಕವೂ ದಂತ ವೈದ್ಯಕೀಯ ಕ್ಲಿನಿಕ್ ತೆಗೆಯಲು ಅವಕಾಶ ನೀಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಫೇಸ್ ಶೀಲ್ಡ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಬೇಕೆಂದು ದಂತ ವೈದ್ಯರ ಒಕ್ಕೂಟ ಮನವಿ ಮಾಡಿದೆ. ಮುಖ್ಯಮಂತ್ರಿ ಬಳಿ ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಡಿಎ ಸ್ವಾಧೀನದ ಅಕ್ರಮ ಮನೆ, ಸೈಟ್ ಸಕ್ರಮಕ್ಕೆ ಕಾಯ್ದೆ ತಿದ್ದುಪಡಿಗೆ ತೀರ್ಮಾನ ತೆಗೆದುಕೊಂಡಿದೆ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನ

ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
