ಬೆಳಗಾವಿ:ಕೋವಿಡ್​ 19 ಸೋಂಕಿತರ ಚಿಕಿತ್ಸೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಕರೊನಾ ವಾರಿಯರ್​ ನರ್ಸ್​ ಸುಗಂಧಾ ಕೊನೆಗೂ ಮನೆಗೆ ಮರಳಿದ್ದಾರೆ. ಅಮ್ಮ ಮನೆಗೆ ಬರುತ್ತಿರುವ ಸುದ್ದಿ ತಿಳಿದು ಅವರ ಮಗಳು ಓಡೋಡಿ ಬಂದು ಅಮ್ಮನನ್ನು ಅಪ್ಪಿಕೊಂಡು, ಮುದ್ದಾಡಿದ್ದಲ್ಲದೆ, ತನ್ನನ್ನು ಕಂಡು ಅಮ್ಮನ ಕಣ್ಣಲ್ಲಿ ಜಿನುಗಿದ ನೀರನ್ನು ಒರೆಸಿ ಪ್ರೀತಿ, ಮಮತೆ ತೋರಿದಳು.
ಕೆಲದಿನಗಳ ಹಿಂದಷ್ಟೇ ಬೆಳಗಾವಿಯ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ನರ್ಸ್​ ಸುಗಂಧಾ ಅವರನ್ನು ಪುತ್ರಿ ದೂರದಿಂದಲೇ ನೋಡಿ, ಕಣ್ಣೀರು ಹಾಕುತ್ತಾ, ಅಮ್ಮ ಬಾಮ್ಮಾ… ನನ್ನನ್ನು ಎತ್ತಿಕೋ… ಎಂದು ಕಣ್ಣೀರು ಹಾಕಿದ್ದ ದೃಶ್ಯ ಎಲ್ಲರ ಮನಕಲಕಿತ್ತು.
ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ, ಹೋಟೆಲ್​ನಲ್ಲಿ 14 ದಿನಗಳ ಕ್ವಾರಂಟೈನ್​ನಲ್ಲಿದ್ದ ಕರೊನಾ ವಾರಿಯರ್​ ನರ್ಸ್​ ಸುಗಂಧಾ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಕೂಡ ಫೋನ್​ ಮಾಡಿ ಸುಗಂಧಾ ಅವರಿಗೆ ಸಮಾಧಾನ ಹೇಳಿದ್ದರು.
ಇದೀಗ 21 ದಿನಗಳ ಬಳಿಕ ಮನೆಗೆ ಮರಳಿದ ಸುಗಂಧಾ ಅವರನ್ನು ಕಂಡು ಮಗಳು ಓಡೋಡಿ ಬಂದು ಅಪ್ಪಿಕೊಂಡ ದೃಶ್ಯ ಎಲ್ಲ ಕಣ್ಣನ್ನು ತೇವವಾಗಿಸಿತು. ಪುತ್ರಿಯನ್ನು ಎತ್ತಿಕೊಂಡು ಮುದ್ದಾಡಿದ ಸುಗಂಧಾ ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.
ಲಾಕ್​ಡೌನ್​ ಅವಧಿಯಲ್ಲಿ ದೇಶದ ಮೂಲೆ ಮೂಲೆಗೂ ಔಷಧ ತಲುಪಿದ್ದು ಹೇಗೆ ಗೊತ್ತಾ? ಇಲ್ಲಿದೆ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
