ಬೆಳ್ತಂಗಡಿ: ಸುರಿಯುವ ಮಳೆಯಲ್ಲಿ ಕಾಡಿನ ಮಧ್ಯೆ ಹರಿಯುವ ನದಿಯನ್ನು ಅಪಾಯಕಾರಿ ಮರದ ಸೇತುವೆ ಮೂಲಕ ಹಾದು ಕೊರಗ ಕುಟುಂಬಗಳಲ್ಲಿ ಕೋವಿಡ್-19 ಜಾಗೃತಿ ಮೂಡಿಸು ತ್ತಿರುವ ಆಶಾ ಕಾರ್ಯಕರ್ತೆ ಹೇಮಲತಾ ಶೆಟ್ಟಿ ಮತ್ತು ನರ್ಸ್ ಪ್ರೀತಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಾಲೂಕಿನ ಸುಲ್ಕೇರಿ ಗ್ರಾಪಂ ವ್ಯಾಪ್ತಿಯ ಅಟ್ರಿಂಜೆ ಎಂಬಲ್ಲಿ ಕಾಡಿನ ಮಧ್ಯೆ ವಾಸಿಸುತ್ತಿರುವ ಆರು ಕೊರಗ ಕುಟುಂಬಗಳ ಪೈಕಿ ಸದಸ್ಯರೊಬ್ಬರು ಸೋಂಕಿತನೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದರು. ಅವರಿಗೆ ಹೋಂ ಕ್ವಾರಂಟೈನ್ ಮಾಹಿತಿ ನೀಡಲು ಹೇಮಲತಾ ಮತ್ತು ಪ್ರೀತಿ ಅಪಾಯಕಾರಿ ಹಾದಿ ತುಳಿದು, ಜೀವದ ಹಂಗನ್ನೂ ತೊರೆದು ಮಂಗಳವಾರ ಕಾಲನಿಗೆ ತೆರಳಿದರು. ಸ್ಥಳೀಯರನ್ನು ಭೇಟಿ ಮಾಡಿ, ಕರೊನಾ ಮತ್ತು ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಮಾಹಿತಿ ನೀಡಿದ್ದಾರೆ.
ಸಚಿವ ಶ್ರೀರಾಮಲು ಮೆಚ್ಚುಗೆ:ಆಶಾ ಕಾರ್ಯಕರ್ತೆ ಹೇಮಲತಾ ಮತ್ತು ವೈದ್ಯಕೀಯ ಸಿಬ್ಬಂದಿ ಪ್ರೀತಿ ಸೇವೆಯನ್ನು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್​ನಲ್ಲಿ ಶ್ಲಾಘಿಸಿದ್ದಾರೆ. ಕೊರಗ ಸಮುದಾಯದ ಈ ಕಾಲನಿಯ ಕೆಲವರಲ್ಲಿ ಡೆಂಘೆ ಸೇರಿ ಜ್ವರ ಲಕ್ಷಣಗಳು ಕಾಣಿಸಿಕೊಂಡಿವೆ. ಸುರಿಯುತ್ತಿರುವ ಮಳೆ, ರಭಸವಾಗಿ ಹರಿಯುತ್ತಿರುವ ನದಿಯನ್ನು ಕಿರಿದಾದ ಕಾಲು ಸಂಕದ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಕರೊನಾ ವಾರಿಯರ್ಸ್ ಚಿಕಿತ್ಸೆ ನೀಡಿದ್ದಾರೆ. ರೋಗಗಳ ಕುರಿತು ಅರಿವು ಮೂಡಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಪ್ರಶಂಸಾರ್ಹ ಎಂದಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌
ಸಂಕಷ್ಟಕ್ಕೆ ಬೆಳಕು ಚೆಲ್ಲಿದ್ದ ವಿಜಯವಾಣಿ:ಈ ಕುಟುಂಬಗಳು ಮಳೆಗಾಲದಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ವಿಜಯವಾಣಿ ಹಿಂದೆ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿತ್ತು. ಇಲ್ಲಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಆಡಳಿತ, ರಾಜಕೀಯ ಮುಖಂಡರು ಭೇಟಿ ನೀಡಿದ್ದರು. ಈ ಪ್ರದೇಶದಿಂದ ಹೊರಬರುವಂತೆ ಕುಟುಂಬಗಳಿಗೆ ಮನವಿ ಮಾಡಿ, ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನೂ ನೀಡಿದ್ದರು. ಆದರೆ, ಇಲ್ಲಿನ ನಿವಾಸಿಗಳು ಕಾಡಲ್ಲೇ ಉಳಿಯá-ವ ನಿರ್ಧಾರ ಕೈಗೊಂಡಿದ್ದರು.
ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
