ಬೆಂಗಳೂರು:ಶಾಸಕರ ಭವನದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಪೊಲೀಸರು, ಮತ್ತಿತರರಲ್ಲಿ ಕರೊನಾ ಸೋಂಕು​ ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಶಾಸಕರ ಭವನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್​ ಮಾಡಲಾಗಿದೆ. ಕಟ್ಟಡಕ್ಕೆ ತುರ್ತು ಸೋಂಕು ನಿವಾರಣಾ ಔಷಧಿ ಸಿಂಪಡಿಸಲಾಯಿತು.
ಶಾಸಕರ ಭವನಕ್ಕೆ ಕರೊನಾ ಕಾಲಿಟ್ಟ ಬೆನ್ನಲ್ಲೇ ವಿಧಾನಸಭೆ ಅಧ್ಯಕ್ಷರು ಮತ್ತು ವಿಧಾನ ಪರಿಷತ್​ ಸಭಾಪತಿಯವರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಿಯಂತ್ರಣಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಶಾಸಕರ ಭವನದ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.ಇದನ್ನೂ ಓದಿ:ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’
ಇನ್ನು ಮುಂದೆ ಶಾಸಕರ ಭವನಕ್ಕೆ ಬರುವವರು ಮುಖ್ಯದ್ವಾರದಲ್ಲಿ ಇಡಲಾದ ಪಟ್ಟಿಯಲ್ಲಿ ತಮ್ಮ ಹೆಸರು, ಫೋನ್​ ನಂಬರ್, ಭೇಟಿಯ ಉದ್ದೇಶಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರಾಥಮಿಕ ವೈದ್ಯಕೀಯ ತಪಾಸಣೆಗೆ ಸಹಕರಿಸಬೇಕು.
ಹಾಗೇ ಭವನಕ್ಕೆ ಆಗಮಿಸುವ ಶಾಸಕರೊಂದಿಗೆ ಅವರ ಆಪ್ತಸಹಾಯಕ, ಕಾರು ಚಾಲಕ ಮತ್ತು ಅಂಗರಕ್ಷಕರು ಮಾತ್ರ ಬರಬಹುದು. ಪಾರ್ಕಿಂಗ್​ ಸ್ಥಳದಲ್ಲಿ ಶಾಸಕರ ವಾಹನಗಳನ್ನು ಮಾತ್ರ ನಿಲ್ಲಿಸಬಹುದು.ಇದನ್ನೂ ಓದಿ:ಪಾಕಿಸ್ತಾನದಲ್ಲಿ ಶೇ.30ರಷ್ಟು ನಕಲಿ ಪೈಲಟ್​​ಗಳು…ಹಣ ಕೊಟ್ಟು ಲೈಸನ್ಸ್​ ಪಡೆದವರು !
ಶಾಸಕರ ಭವನದಲ್ಲಿರುವ ಎಲ್ಲ ಸಿಬ್ಬಂದಿಯನ್ನೂ ಕೊವಿಡ್​-19 ಟೆಸ್ಟ್​ಗೆ ಒಳಪಡಿಸಲಾಗುವುದು. ಹಾಗೂ ಯಾರಾದರೂ ಅಲ್ಲಿ ಅನಗತ್ಯವಾಗಿ ವಾಸವಾಗಿದ್ದರೆ, ಅವರನ್ನು ಅಲ್ಲಿಂದ ಕಳಿಸಲಾಗುವುದು ಹಾಗೂ ಸಾಮಾಜಿಕ ಅಂತರ ನಿಯಮ, ಮಾಸ್ಕ್​ ಧರಿಸುವುದನ್ನೆಲ್ಲ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ.
https://www.facebook.com/VVani4U/videos/565624180790562/?t=0
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − five =
Remember me
