ಮಂಗಳೂರು:ಒಂದೆಡೆ ಕರೊನಾ ವೈರಸ್​ ನಿಯಂತ್ರಣಕ್ಕೆ ಸಂಬಂಧಪಟ್ಟ ಕರ್ತವ್ಯ…ಮತ್ತೊಂದೆಡೆ ಎರಡು ವರ್ಷದ ಮಗು…ಹೀಗಿರುವ ಪರಿಸ್ಥಿತಿಯಲ್ಲಿ ಈ ಜಿಲ್ಲಾಧಿಕಾರಿ ಕರ್ತವ್ಯವನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿಕೊಂಡು..ಮಗುವಿನಿಂದ ಅಂತರ ಕಾಯ್ದುಕೊಂಡಿದ್ದಾರೆ. ತನ್ಮೂಲಕ ಕರ್ತವ್ಯ ನಿಷ್ಠೆಯಲ್ಲಿ ಮಾದರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್​ ಅವರು ತಮ್ಮ ಎರಡು ವರ್ಷದ ಪುಟಾಣಿ ಮಗುವನ್ನು 23 ದಿನಗಳಿಂದ ದೂರ ಇಟ್ಟಿದ್ದಾರೆ. ಇದಕ್ಕೆ ಕಾರಣ ಕರೊನಾ ವೈರಸ್​. ಆಯಾ ಜಿಲ್ಲೆಗಳ ಕರೊನಾ ವೈರಸ್​, ಲಾಕ್​ಡೌನ್ ಪರಿಸ್ಥಿತಿಗಳ ನಿರ್ವಹಣೆ ಹೊಣೆ ಜಿಲ್ಲಾಧಿಕಾರಿಗಳ ಮೇಲೆ ಇದೆ. ಅದಕ್ಕೆ ಸಿಂಧು ಅವರು ಕೂಡ ಹೊರತಲ್ಲ. ಆದರೆ ಅವರು ತಮ್ಮ ಪುಟ್ಟ ಮಗುವನ್ನು ತಂದೆ-ತಾಯಿಯರೊಂದಿಗೆ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಿಗೆ ಪ್ರತಿದಿನ ಭೇಟಿ ನೀಡುತ್ತಿರುವ ಸಿಂಧು ಅವರು, ಸದ್ಯ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕರೊನಾ ವೈರಸ್ ಪ್ರಕರಣ ಕಂಡು ಬಂದ ದಿನದಿಂದಲೇ ಮಗುವಿನ ಸಂಪರ್ಕಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಮಗುವನ್ನು ದೂರದಿಂದಲೇ ಮಾತನಾಡಿಸುತ್ತಿದ್ದರು. ಈಗ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಪತಿಯ ಮನೆಗೆ ಕಳಿಸಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಆಗಿರುವ ಕಾರಣ ನಾನು ಪ್ರತಿದಿನ ಹಲವು ಕಡೆಗಳಿಗೆ ಭೇಟಿ ನೀಡಬೇಕು. ಸಭೆ ನಡೆಸಬೇಕು. ಎಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಸೋಂಕಿನ ಭೀತಿ ಇದ್ದೇ ಇರುತ್ತದೆ. ಹಾಗಾಗಿ ನಾನು ಮನೆಯಲ್ಲಿಯೇ ಸ್ವತಃ ಅಂತರ ಕಾಯ್ದುಕೊಂಡಿದ್ದೇನೆ. ಪ್ರತ್ಯೇಕವಾಗಿ ಇರುತ್ತಿದ್ದೇನೆ. ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಸ್ಪತ್ರೆ ವೈದ್ಯರು, ನರ್ಸ್​ಗಳೆಲ್ಲ ಹೀಗೆ ಮಾಡುತ್ತಿದ್ದಾರೆ ಎಂದು ಸಿಂಧು ತಿಳಿಸಿದ್ದಾರೆ.ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ಕೂಡ ತಮ್ಮ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಅಂತರವನ್ನು ಕಾಯ್ದುಕೊಂಡಿದ್ದು, ಮಕ್ಕಳನ್ನು ಮೈಸೂರಿನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
