ರಾಮನಗರ:ಜಿಂದಾಲ್​ ಕಾರ್ಖಾನೆಯ ಉದ್ಯೋಗಿಗಳು ಮತ್ತು ಕುಟುಂಬಸ್ಥರಲ್ಲಿ ನಡುಕು ಹುಟ್ಟಿಸಿರುವ ಕರೊನಾ ಸೋಂಕು ಈಗ ಮತ್ತೊಂದು ಪ್ರತಿಷ್ಠಿತ ಕಂಪನಿಗೂ ವಕ್ರದೃಷ್ಟಿ ಬೀರಿದ್ದು, ಆತಂಕದ ಕಾರ್ಮೋಡ ಕವಿದಿದೆ.
ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟ ಕಿರ್ಲೋಸ್ಕರ್​ ಮೋಟಾರ್ಸ್ ಕಂಪನಿಯ ಇಬ್ಬರಲ್ಲಿ ಕರೊನಾ ಪಾಸಿಟಿವ್​ ದೃಢಪಟ್ಟಿದೆ.
ಇದನ್ನೂ ಓದಿರಿಯುವಕ ಮೃತಪಟ್ಟ ಎರಡು ದಿನದ ಬಳಿಕ ಕುಟುಂಬಸ್ಥರಿಗೆ ಕಾದಿತ್ತೊಂದು ಶಾಕ್​!
ಟಯೋಟ ಕಿರ್ಲೋಸ್ಕರ್ ಕಂಪನಿಯ ಉದ್ಯೋಗಿಗಳಾದ ಪಾಂಡವಪುರ ಮೂಲದ ವ್ಯಕ್ತಿ ಹಾಗೂ ಬೆಂಗಳೂರಿನ ಹೆಬ್ಬಗೋಡಿ ಮೂಲದ ಯುವಕನಿಗೆ ಕರೊನಾ ಇರುವುದು ದೃಢಪಟ್ಟ ಬೆನ್ನಲ್ಲೇ ಇಂದು ಕಂಪನಿಯನ್ನು ಸೀಲ್​ಡೌನ್​ ಮಾಡಲಾಗಿದೆ.
ಹೆಬ್ಬಗೋಡಿ ಮೂಲದ ಯುವಕ ನಿನ್ನೆ(ಮಂಗಳವಾರ) ಕಂಪನಿಯಲ್ಲಿ ಕೆಲಸ ಮಾಡಿದ್ದ. ಇವನ ಕೆಲಸ ಮಾಡಿದ ಸಿಬ್ಬಂದಿಗೂ ಕ್ವಾರಂಟೈನ್​ ಮಾಡಲಾಗುತ್ತಿದೆ. ನಿನ್ನೆ ಕೂಡ ಸಾಕಷ್ಟು ಸಿಬ್ಬಂದಿ ಸೋಂಕಿತ ಯುವಕನ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದ್ದು, ಅವರಲ್ಲೀಗ ಸೋಂಕಿನ ಭೀತಿ ಆವರಿಸಿದೆ.
ಅಧಿಕಾರಿಗಳು ಸೋಂಕಿತರ ಟ್ರಾವೆಲ್ ಹಿಸ್ಟರಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್​19 ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿರಿಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
