ಬೆಂಗಳೂರು:ವಾರಾಂತ್ಯ ಬಂತೆಂದರೆ ಸಿನಿಮಾ ಹಾಗೂ ಶಾಪಿಂಗ್ ಪ್ರಿಯರು, ಕುಟುಂಬ ಸಹಿತ ಸುತ್ತಾಟಕ್ಕೆ ಹೋಗುವವರಿಂದ ಗಿಜಿಗುಡುತ್ತಿದ್ದ ರಾಜಧಾನಿ ಈ ಶನಿವಾರ ಮಾತ್ರ ಇವೆಲ್ಲಕ್ಕೂ ಅಪವಾದದಂತಿತ್ತು.
ಕಲುಬುರಗಿಯಲ್ಲಿ ಕರೊನಾ ಸೋಂಕಿತ ವೃದ್ಧನ ಸಾವಿನಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಮುಂದಿನ ಒಂದು ವಾರ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಘೋಷಿಸಿದ್ದರಿಂದ ಸಿಲಿಕಾನ್ ಸಿಟಿ ಸಂಪೂರ್ಣ ಸ್ತಬ್ಧವಾಗಿತ್ತು. ಸಿನಿಮಾ ಥಿಯೇಟರ್ ಸಂಪೂರ್ಣ ಬಂದ್ ಆಗಿದ್ದರಿಂದ, ಚಿತ್ರಮಂದಿರಗಳ ಬಳಿ ಯಾರೊಬ್ಬರೂ ಕಾಣುತ್ತಿರಲಿಲ್ಲ. ಒರಾಯನ್ ಮಾಲ್, ಗೋಪಾಲನ್ ಮಾಲ್, ಮಂತ್ರಿ ಮಾಲ್, ಗರುಡಾ ಮಾಲ್ ಸೇರಿ ಬಹುತೇಕ ಮಾಲ್​ಗಳು ಬಂದ್ ಆಗಿದ್ದವು. ಆದರೆ, ಕೆಲವೆಡೆ ಬಿಗ್ ಬಜಾರ್, ವಿಶಾಲ್ ಮಾರ್ಟ್ ಸೇರಿ ಇತರ ಬೃಹತ್ ಮಳಿಗೆಗಳು ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದವು. ಸ್ಥಳೀಯ ಅಧಿಕಾರಿಗಳು ಮಾರ್ಟ್​ಗಳಿಗೆ ಎಚ್ಚರಿಕೆ ಕೊಟ್ಟು ಸಂಜೆ ವೇಳೆಗೆ ಬಂದ್ ಮಾಡಿಸಿದ ದೃಶ್ಯ ಕೆಲವೆಡೆ ಕಂಡುಬಂತು.
ನಿಗದಿತ ಮದುವೆ ಸಮಾರಂಭಗಳನ್ನು ಸಾಧ್ಯವಾದರೆ ಮುಂದೂಡಿ ಇಲ್ಲವಾದರೆ ಸರಳ ವಿವಾಹ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದರು. ಅದರಂತೆ, ಕೆಲ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ನಡೆದಿವೆ. ಅಲ್ಲಿಯೂ ಮುಂಜಾಗ್ರತೆ ಕ್ರಮವಾಗಿ ಹ್ಯಾಂಡ್ ಸ್ಯಾನಿಟೈಸರ್​ನ ದೊಡ್ಡ ಡಬ್ಬ ಇಟ್ಟು ಅತಿಥಿಗಳಿಗೆ ನೀಡಲಾಗಿದೆ. ಉಳಿದಂತೆ ಬಂಧುಗಳ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು. ಮಲ್ಲೇಶ್ವರದ ತಿರುಪತಿ ತಿರುಮಲ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಇಸ್ಕಾನ್, ರಾಗಿಗುಡ್ಡ ಆಂಜನೇಯ, ಬಸವನಗುಡಿ ದೊಡ್ಡಗಣಪತಿ, ಗಾಳಿ ಆಂಜನೇಯ ದೇವಸ್ಥಾನ ಸೇರಿ ಬಹುತೇಕ ಕಡೆ ಸ್ಥಳೀಯ ಭಕ್ತರು ಮಾತ್ರ ಕಾಣುತ್ತಿದ್ದರು.
ರೈಲು, ಬಸ್ ನಿಲ್ದಾಣಗಳು ಬಿಕೋ..
ಸದಾ ಜನಜಂಗುಳಿಯಲ್ಲೇ ತುಂಬಿರುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳತ್ತ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಮಾಲ್, ಸಿನಿಮಾ ಮಂದಿರ, ಪಬ್, ಬಾರ್​ಗಳು ಬಂದ್ ಆಗಿದ್ದವು. ಶಾಲೆ- ಕಾಲೇಜುಗಳಿಗೂ ರಜೆ ಇತ್ತು. ಪರಿಣಾಮ ಸಾರ್ವಜನಿಕರ ಸಂಚಾರ ವ್ಯವಸ್ಥೆಯಲ್ಲಿ ಪ್ರಯಾಣಿಕರೇ ಇರಲಿಲ್ಲ.
ಹುಟ್ಟೂರಿನತ್ತ ಕಾರ್ವಿುಕರು
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ದಿನಗೂಲಿ ನೌಕರರು, ಮಾಲ್, ಚಿತ್ರಮಂದಿರ, ಇನ್ನಿತರ ಕಂಪನಿ, ವಾಣಿಜ್ಯ ಮಳಿಗೆಗಳ ಕಾರ್ವಿುಕರು ವಹಿವಾಟು ಇಲ್ಲದೆ ಹುಟ್ಟೂರಿನತ್ತ ಮುಖ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕರೊನಾ ಸೋಂಕು ಭೀತಿಯಿಂದ ತಾತ್ಕಾಲಿಕವಾಗಿ ನಗರ ತೊರೆಯುತ್ತಿದ್ದಾರೆ.
ಬಿಎಂಟಿಸಿ ಕಂಡಕ್ಟರ್ ಎಡವಟ್ಟು
ಬಿಎಂಟಿಸಿ ಬಸ್ ಕಂಡಕ್ಟರೊಬ್ಬರು ಪ್ರಯಾಣಿಕರಿಗೆ ಟಿಕೆಟ್ ಕೊಡುವಾಗ ತನ್ನ ಬೆರಳಿಗೆ ಎಂಜಲು ಸವರಿ ಟಿಕೆಟ್ ಕಿತ್ತು ಕೊಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಕೆಲ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.
ಬೀದಿಬದಿ ವ್ಯಾಪಾರಸ್ಥರು ಕಂಗಾಲು
ಬೆಂಗಳೂರು: ನಗರದಲ್ಲಿ ಕರೊನಾ ಮುನ್ನೆಚ್ಚರಿಕೆಗಾಗಿ ಮದುವೆ, ಶುಭ ಸಮಾರಂಭಗಳಿಗೆ ಮುಂದಿನ ಹತ್ತು ದಿನಗಳವರೆಗಿನ ನಿರ್ಬಂಧ ಹೇರಿರುವ ಕಾರಣ ಶನಿವಾರ ತರಕಾರಿ, ಹೂವು, ಹಣ್ಣು ಹಾಗೂ ಸಗಟು ದಿನಸಿ ಪದಾರ್ಥಗಳ ವಹಿವಾಟಿನಲ್ಲಿ ಭಾರಿ ಕುಸಿತ ಕಂಡು ಬಂತು. ಸದಾ ಜನ ಜಾತ್ರೆಯಂತೆ ಇರುತ್ತಿದ್ದ ಕೆ.ಆರ್.ಮಾರುಕಟ್ಟೆಯಲ್ಲಿ ಶನಿವಾರ ಬೆರಳೆಣಿಕೆ ಗ್ರಾಹಕರಿದ್ದರು. ಯಶವಂತಪುರ, ಕೆ.ಆರ್.ಮಾರುಕಟ್ಟೆ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ ಮಾರುಕಟ್ಟೆಯಲ್ಲೂ ಜನರ ಓಡಾಟ ಕಡಿಮೆಯಾಗಿತ್ತು. ಕಳೆದ ವಾರ ಭಾರಿ ಇಳಿಕೆ ಕಂಡಿದ್ದ ತರಕಾರಿ ದರ ಮತ್ತಷ್ಟು ಇಳಿದಿದೆ. ತರಕಾರಿ ಬೆಲೆ ಕಡಿಮೆ ಇದ್ದರೂ ಕೊಳ್ಳುವವರಿಲ್ಲದೇ ಮಾರುಕಟ್ಟೆಗಳು ಬಣಗುಟ್ಟುತ್ತಿತ್ತು. ಫೆಬ್ರವರಿಯಿಂದ ಮೇ ತಿಂಗಳವರೆಗೆ ಹೆಚ್ಚು ಮದುವೆ ಹಾಗೂ ಶುಭ ಸಮಾರಂಭಗಳು ಎಲ್ಲೆಡೆ ನಡೆಯುತ್ತವೆ. ಈ ವೇಳೆ ತರಕಾರಿ, ಹೂವಿನ ಆವಕ ಪ್ರಮಾಣವೂ ಅಧಿಕವಾಗಿರುತ್ತದೆ. ಕರೊನಾ ಸೋಂಕಿನ ನಿರ್ಬಂಧದಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ
ಎಪಿಎಂಸಿಗೆ ಬರುವ ಗ್ರಾಹಕರ ಸಂಖ್ಯೆ ಶನಿವಾರ ಮತ್ತು ಭಾನುವಾರ ಬಹಳ ಕಡಿಮೆಯಾಗಿರುತ್ತದೆ. ಹೀಗಾಗಿ ಸಗಟು ವ್ಯಾಪಾರದಲ್ಲಿ ಯಾವುದೇ ವ್ಯತ್ಯಾಸ ಕಂಡಿಲ್ಲ. ಪ್ರತಿ ದಿನದಂತೆ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದ ತರಕಾರಿ ಹಾಗೂ ದಿನಸಿ ಪದಾರ್ಥಗಳು ಆವಕವಾಗಿವೆ. ವ್ಯಾಪಾರ ವಹಿವಾಟಿನ ಕುಸಿತ ಹಾಗೂ ಏರಿಕೆಯ ಬಗ್ಗೆ ಸೋಮವಾರದಿಂದಲೇ ತಿಳಿಯಲಿದೆ ಎಂದು ಎಪಿಎಂಸಿ ಜಂಟಿ ನಿರ್ದೇಶಕ ವಿ.ರಮೇಶ್ ವಿಜಯವಾಣಿಗೆ ತಿಳಿಸಿದರು.
ಕೋವಿಡ್ ಸೋಂಕಿತರ ನಿಗಾಕ್ಕೆ ಮಾರ್ಗಸೂಚಿ
ಬೆಂಗಳೂರು: ಕರೊನಾ ವೈರಸ್ ಸೋಂಕಿತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿ ನಿಗಾ ವಹಿಸುವುದು, ಅವರ ಮಾದರಿ ಸಂಗ್ರಹಣೆ, ವೈದ್ಯಕೀಯ ತಪಾಸಣೆ, ಹೆಚ್ಚುವರಿ ಪ್ರಯೋಗಾಲಯಗಳ ಸ್ಥಾಪನೆ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಳಸಿಕೊಳ್ಳಲು ನಿಯಮಾವಳಿ ರೂಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ನಿಗಾದಲ್ಲಿರುವ ಕರೊನಾ ವೈರಸ್ ಸೋಂಕಿತರು ಹಾಗೂ ಶಂಕಿತರಿಗೆ ಅಹಾರ, ಬಟ್ಟೆ, ವೈದ್ಯಕೀಯ ಸೇವೆ, ಗಂಟಲ ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಣೆ, ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ಸೋಂಕಿತರ ಸಂಪರ್ಕ ಹೊಂದಿದ ವ್ಯಕ್ತಿಗಳ ಪತ್ತೆ ಕಾರ್ಯಕ್ಕೆ ಅಗತ್ಯವಿರುವ ವೆಚ್ಚಗಳನ್ನು ರಾಜ್ಯ ಕಾರ್ಯಕಾರಿ ಸಮಿತಿ (ಎಸ್​ಇಸಿ)ನಿಗದಿಪಡಿಸಲಿದೆ. ಇದಕ್ಕಾಗಿ ಎಸ್​ಡಿಆರ್​ಎಫ್ ನಿಧಿಯ ಒಟ್ಟು ಮೀಸಲು ಹಣದಲ್ಲಿ ಶೇ. 25 ಮಾತ್ರ ಪಡೆಯುವಂತೆ ಸೂಚಸಿಲಾಗಿದೆ.
ಉಳಿದಂತೆ ಸೋಂಕಿತರ ವೈದ್ಯಕೀಯ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಭರಿಸಬೇಕು. ಪ್ರಯೋಗಾಲಯ ಸ್ಥಾಪನೆ ಹಾಗೂ ಆವುಗಳಿಗೆ ಅಗತ್ಯ ಉಪಕರಣಗಳ ಖರೀದಿ, ವೈದ್ಯರು, ಪೊಲೀಸ್ ಹಾಗೂ ಅಗ್ನಿಶಾಮಕ ದಳಗಳಿಗೆ ಅಗತ್ಯವಿರುವ ಜೀವ ರಕ್ಷಕ ಸಾಧನ, ಥರ್ಮಲ್ ಸ್ಕ್ಯಾನರ್, ವೆಂಟಿಲೇಟರ್, ಏರ್ ಪ್ಯೂರಿಫೈಯರ್​ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಖರೀದಿಸಬಹುದು. ಇದಕ್ಕಾಗಿ ಎಸ್​ಡಿಆರ್​ಎಫ್ ನಿಧಿಗೆ ಒದಗಿಸಿರುವ ಒಟ್ಟು ಅನುದಾನದ ಶೇ.10 ಮೀರಬಾರದು ಎಂದು ಹೇಳಲಾಗಿದೆ.
ಕರೊನಾ ಸೋಂಕಿನಿಂದ ಮೃತನಾದ ವೃದ್ಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರ ಮೇಲೆಯೂ ತೀವ್ರ ನಿಗಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
