ಬೆಂಗಳೂರು:ತುರ್ತು ನಿಗಾ ಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಸೋಂಕಿ ಬಳಿ ಚಿನ್ನ ಮತ್ತು ಮೊಬೈಲ್​ ಕಳವು ಮಾಡಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಣಸವಾಡಿಯ ಎಂ.ಜಗನ್ನಾಥ್​ ದೂರು ನೀಡಿದ್ದಾರೆ. ಇದರ ಅನ್ವಯ ಕಮ್ಮನಹಳ್ಳಿಯ ಕ್ಯೂರಾ ಆಸ್ಪತ್ರೆ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಗನ್ನಾಥ್​ ಅವರು ತಮ್ಮ ತಾಯಿ ಇಂದಿರಾ ಅವರನ್ನು ಕರೊನಾ ಚಿಕಿತ್ಸೆಗಾಗಿ ಮೇ 11ರಂದು ಕ್ಯೂರಾ ಆಸ್ಪತ್ರೆಗೆ ದಾಖಲಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಜೊತೆಗೆ ವಿಡಿಯೋ ಕಾಲ್​ ಮಾಡಿ ಮಗ ಮಾತನಾಡುತ್ತಿದ್ದರು. ಮೇ 16ರಂದು ವಿಡಿಯೋ ಕಾಲ್​ ಮಾಡಿದಾಗ ಇಂದಿರಾ ಕತ್ತಿನಲ್ಲಿ ಚಿನ್ನದ ಸರ ನಾಪತ್ತೆಯಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣಕ್ಕೆ ಚಿನ್ನದ ಸರ ತೆಗೆದಿರಬೇಕೆಂದು ಸುಮ್ಮನಾಗಿದ್ದರು. ಕೊನೆಗೆ ಚಿಕಿತ್ಸೆ ಲಿಸದೆ ಇಂದಿರಾ ಮೇ 19 ರಂದು ಅಸುನೀಗಿದ್ದರು. ಶವ ಸಂಸ್ಕಾರದ ಬಳಿಕ ಇಂದಿರಾ ಬಳಿಯಿದ್ದ ಚಿನ್ನದ ಸರ ಮತ್ತು ಮೊಬೈಲ್​ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಸೂಕ್ತ ಉತ್ತರ ಕೊಟ್ಟಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಕಳ್ಳತನ ಮಾಡಿರಬೇಕೆಂದು ದೂರಿನಲ್ಲಿ ಜಗನ್ನಾಥ್​ ಉಲ್ಲೇಖಿಸಿದ್ದಾರೆ. ಇದರ ಅನ್ವಯ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರೊನಾವನ್ನು ಜೈವಿಕ ಅಸ್ತ್ರವೆಂದ ಲಕ್ಷದ್ವೀಪ ನಟಿ: ದೇಶದ್ರೋಹ ಕೇಸು ದಾಖಲಿಸಿದ ಬಿಜೆಪಿ ನಾಯಕ

ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ

ಇಂಜಿನಿಯರಿಂಗ್‌ ಪದವೀಧರರಿಗೆ ಬ್ಯೂರೋ ಆಫ್‌​ ಇಂಡಿಯನ್​ ಸ್ಟ್ಯಾಂಡರ್ಡ್ಸ್​ನಲ್ಲಿವೆ 28 ಹುದ್ದೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
