ಬೆಂಗಳೂರು:ಕರೊನಾ ನಿರ್ವಹಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಲಾಕ್​ಡೌನ್ ಮುಂದುವರಿಕೆ ಪರಿಣಾಮ ಎದುರಾಗ ಬಹುದಾದ ಹೊಸ ಸವಾಲನ್ನು ಎದುರಿಸಲು ಬುಧವಾರ ಸಿಎಂ, ಸಚಿವ ಸಂಪುಟ ಸಹೋದ್ಯೋಗಿಗಳ ಜತೆ ವಿಚಾರ ವಿನಿಮಯ ನಡೆಸಿದರು. ಪ್ರಮುಖವಾಗಿ ಐದು ವಿಷಯಗಳಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ವಲಸೆ ಕೂಲಿಕಾರ್ವಿುಕರಿಗೆ ತೊಂದರೆಯಾಗದಂತೆ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆಗೆ ತೊಂದರೆಯಾಗದಂತೆ ಮತ್ತು ಈಗ ಇರುವಲ್ಲಿಂದ ಊರು ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಕರೊನಾ ಇನ್ನಷ್ಟು ವ್ಯಾಪಿಸದಂತೆ ತಡೆಯಲು ರೆಡ್ ಝೋನ್​ನಲ್ಲಿರುವ ಹಾಗೂ ಹಾಟ್​ಸ್ಪಾಟ್​ಗಳಲ್ಲಿ ಬಿಗಿ ಕ್ರಮಕೈಗೊಂಡು ಜನರ ಓಡಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮಕೈಗೊಳ್ಳುವುದು, ಪಡಿತರ ವಿತರಣೆ ಗೊಂದಲ ಕಡಿಮೆ ಮಾಡಿ ಕಾರ್ಡದಾರರು ಮತ್ತು ಕಾರ್ಡ್ ಇಲ್ಲದ ಬಡವರಿಗೆ ಪಡಿತರ ತಲುಪುವಂತೆ ನೋಡಿಕೊಳ್ಳುವುದರ ಬಗ್ಗೆ ಸಿಎಂ ಸಲಹೆ ನೀಡಿದರು. ದಿನಬಳಕೆ ಅಗತ್ಯ ವಸ್ತು, ದಿನಸಿ, ತರಕಾರಿ ಹಣ್ಣು ಸರಬರಾಜು ವ್ಯವಸ್ಥೆಯಲ್ಲಿ ಒಂದಷ್ಟು ತೊಡಕುಗಳಿವೆ. ಅದನ್ನು ಸರಿಪಡಿಸುವುದು, ನಿರಾತಂಕವಾಗಿ ಈ ವಸ್ತುಗಳು ತಲುಪಬೇಕಾದಲ್ಲಿಗೆ ತಲುಪಲು ಕ್ರಮಕೈಗೊಳ್ಳುವುದು, ಇ-ಕಾಮರ್ಸ್ ಸೇವೆಗಿರುವ ತೊಡಕು ನಿವಾರಣೆ ಮತ್ತು ಆರೋಗ್ಯ ವ್ಯವಸ್ಥೆ ನಿರ್ವಹಣೆಗೆ ಅಗತ್ಯವಾದ ಕೊರತೆ ನೀಗಿಸಿಕೊಳ್ಳುವ ವಿಚಾರದಲ್ಲಿ ಸಿಎಂ, ಸಚಿವರಿಗೆ ಮಾರ್ಗದರ್ಶನ ಮಾಡಿ ಜವಾಬ್ದಾರಿ ಹಂಚಿಕೆ ಮಾಡಿದರು.
ಸಿಎಂ ಯಡಿಯೂರಪ್ಪ ಪರಿಶೀಲನೆ
ಲಾಕ್​ಡೌನ್ ಪರಿಶೀಲನೆಗಾಗಿ ರಸ್ತೆಗಿ ಳಿದಿದ್ದ ಸಿಎಂ ಯಡಿಯೂರಪ್ಪ, ಬುಧವಾರ ವಲಸೆ ಕಾರ್ವಿುಕರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ದರು. ಎಂ.ಜಿ. ರಸ್ತೆ ಸಮೀಪದ ಸಮಾಜ ಕಲ್ಯಾಣ ಹಾಸ್ಟೆಲ್​ಗೆ ಭೇಟಿ ಕೊಟ್ಟು ಅಲ್ಲಿರುವ ಕಾರ್ವಿುಕರದೊಂದಿಗೆ ಚರ್ಚೆ ನಡೆಸಿದರು.
ಇನ್ನೂ ಎರಡು ವರ್ಷ ಕಾಯ್ದುಕೊಳ್ಳಬೇಕಾಗುತ್ತೆ ಸಾಮಾಜಿಕ ಅಂತರ: ವಿಜ್ಞಾನಿಗಳ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + five =
Remember me
