ಬೆಂಗಳೂರು:ಅನಿರೀಕ್ಷಿತವಾಗಿ ಎದುರಾದ ಕರೊನಾ ಬೆಳವಣಿಗೆ ರಾಜಕೀಯ ಪಕ್ಷಗಳು ಮತ್ತು ನಾಯಕರಲ್ಲಿ ದಿಗಿಲು ಹುಟ್ಟಿಸಿವೆ. ಲಾಕ್​ಡೌನ್ ಆತಂಕದ ನಡುವೆಯೂ ಪರಿಸ್ಥಿತಿ ಲಾಭ ಮಾಡಿಕೊಳ್ಳಲು ಎದುರಾಳಿ ನಡೆಸುವ ಚಟುವಟಿಕೆಯನ್ನು ಅನುಮಾನದಲ್ಲೇ ನೋಡಿ ಲಾಭ-ನಷ್ಟದ ಲೆಕ್ಕಾಚಾರ ಹಾಕಿ ಪ್ರತಿದಾಳ ಉರುಳಿಸುವ ಕೆಲಸ ಭರದಿಂದ ಸಾಗಿದೆ.
‘ಇಂಥ ಸಂದರ್ಭ ರಾಜಕೀಯ ಸರಿಯಲ್ಲ’ ಎಂದು ಹೇಳಿಕೊಳ್ಳುತ್ತಲೇ ನಾಯಕರುಗಳು ಜನರ ಮೇಲೆ ಪರೋಕ್ಷವಾಗಿ ಹಿಡಿತ ಸಾಧಿಸಲು, ಮನಸ್ಸು ಗೆಲ್ಲಲು ಪ್ರಯತ್ನ ನಡೆದಿರುವುದು ಗುಟ್ಟಾಗಿ ಉಳಿದ ವಿಚಾರವೇನಲ್ಲ. ಸರ್ಕಾರ ನೀಡಿದ ಆಹಾರ ಕಿಟ್​ಗಳ ಮೇಲೆ ತಮ್ಮ ಫೋಟೋ ಇರುವ ಸ್ಟಿಕ್ಕರ್ ಹಚ್ಚಿ ಮುಜುಗರ ಪಡೆದೆ ಜನರಿಗೆ ವಿತರಿಸುವುದು, ಕೆಎಂಎಫ್ ನಂದಿನಿ ಹಾಲನ್ನು ತಮ್ಮ ಕಾರ್ಯಕರ್ತರ ಮುಖೇನ ಹಂಚಿಸುವುದು, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿ ಅದು ತಾವೇ ಮಾಡಿದ್ದೆಂದು ಜನರ ಮನಸ್ಸಿಗೆ ಮುಟ್ಟುವಂತೆ ಹೇಳುವುದು ಲಾಕ್​ಡೌನ್ ಅವಧಿಯಲ್ಲಿ ಸಾಮಾನ್ಯ ಸಂಗತಿ.
ಮೇಲ್ನೋಟಕ್ಕೆ ನಾವು ರಾಜಕೀಯ ಬಿಟ್ಟು ಸಮಾಜ ಸೇವೆ ಮಾಡೋಣವೆಂದು ಕಾಂಗ್ರೆಸ್-ಬಿಜೆಪಿ ಹೇಳುತ್ತಿದ್ದರೂ, ಒಂದರ ಮೇಲೆಂದು ಟಾಸ್ಕ್ ನೀಡುತ್ತಿದೆ. ಬೆಂಗಳೂರಿಂದ ಏಕಕಾಲಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಶಾಸಕರು, ಜಿಲ್ಲಾ ಘಟಕಗಳಿಗೆ ಯಾವ ರೀತಿ ಚಟುವಟಿಕೆ ನಡೆಸಬೇಕೆಂದು ಸೂಚನೆ ಕೊಡುತ್ತಿವೆ. ಮೊದಲ ಹಂತದಲ್ಲಿ ಸಿದ್ಧ ಆಹಾರ ಹಾಗೂ ದಿನಸಿ ಕಿಟ್ ವಿತರಣೆ, ಔಷಧ ವಿತರಣೆ ಮಾಡಿದ್ದ ಕಾಂಗ್ರೆಸ್-ಬಿಜೆಪಿ ನಾಯಕರಿಗೆ ಮುಂದಿನ ಹಂತದಲ್ಲಿ ಯಾವೆಲ್ಲ ಚಟುವಟಿಕೆ ನಡೆಸಬೇಕೆಂದು ಸಂದೇಶ ಬಂದಿದೆ.
ಕಾಂಗ್ರೆಸ್​ನವರು ರೈತರನ್ನು ಗುರಿಯಾಗಿಸಿ ಚಟುವಟಿಕೆ ಆರಂಭಿಸಿದ್ದಾರೆ. ರೈತರ ಬೆಳೆಗಳನ್ನು ಖರೀದಿಸಿ ಅದನ್ನು ತಮ್ಮ ಕ್ಷೇತ್ರದಲ್ಲಿ ಮಾರಾಟ ಮಾಡಲು ಅಥವಾ ಉಚಿತವಾಗಿ ಹಂಚಲು ಸೂಚನೆ ಕಳಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಚಟುವಟಿಕೆಗೆ ಹೋಲಿಸಿದರೆ ಜೆಡಿಎಸ್​ನದ್ದು ವಿಭಿನ್ನ. ಮಂಡ್ಯದಲ್ಲಿ ಸ್ಯಾನಿಟೈಸರ್ ಸುರಂಗ ಮಾಡಿ ನಿಖಿಲ್ ಫೋಟೋ ದೊಡ್ಡದಾಗಿ ಬಳಸಿ ಪ್ರಚಾರ ಮಾಡಿಕೊಳ್ಳಲಾಗುತ್ತಿದೆ. ನಾಯಕರ ವಿಚಾರಕ್ಕೆ ಬಂದರೆ, ಇಂದಿರಾ ಕ್ಯಾಂಟಿನ್​ನಿಂದ ಹೆಚ್ಚು ಅನುಕೂಲವಾಗುತ್ತಿದೆ ಎಂದು ಬಿಂಬಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದಾರೆ. ಈ ಸಂಬಂಧ ಸಿಎಂ ಜತೆಗೆ ಚರ್ಚೆ ನಡೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ವಿವಿಧ ವರ್ಗದ ಜನರ ಸಂಕಷ್ಟ ಪ್ರತಿಬಿಂಬಿಸಿ ಸರ್ಕಾರವನ್ನು ಟೀಕಿಸಿ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆ, ಜನತೆ ಸಂಕಷ್ಟದಲ್ಲಿರುವಾಗ ಸಹಾಯ ಮಾಡಿ ಅವರ ಮನಸ್ಸಿನಲ್ಲಿ ನೆಲೆ ನಿಂತರೆ ಭವಿಷ್ಯದಲ್ಲಿ ರಾಜಕೀಯವಾಗಿ ಅನುಕೂಲ ಎಂಬ ಗೌಪ್ಯ ಲೆಕ್ಕಚಾರ ಪಕ್ಷಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿವೆ.
ಮುಂದೇನು?
ಬಿಜೆಪಿ:ಸಿದ್ಧ ಆಹಾರ, ದಿನಸಿ ಕಿಟ್ ವಿತರಣೆ. ಮನೆ ಬಾಗಿಲಿಗೆ ಉಚಿತವಾಗಿ ಸಣ್ಣಪುಟ್ಟ ಔಷಧ ವಿತರಣೆ
ಕಾಂಗ್ರೆಸ್:ರೈತರಿಂದ ತರಕಾರಿ ಖರೀದಿ, ಆಹಾರ, ಕಿಟ್ ವಿತರಣೆ. ಆಸ್ಪತ್ರೆಗೆ ಹೋಗುವವರಿಗೆ ನೆರವು
ಎರಡೂ ಪಕ್ಷದ ವಾರ್ ರೂಂ
ಕಾಂಗ್ರೆಸ್ ಮತ್ತು ಬಿಜೆಪಿ ವಾರ್ ರೂಂ ಆರಂಭಿಸಿ, ಜನರ ದೂರನ್ನು ಆಲಿಸಿ ತಕ್ಷಣ ಪರಿಹಾರ ನೀಡಲು ಪ್ರಯತ್ನಿಸಿವೆ. ಬೆಂಗಳೂರಿನ ಪಕ್ಷದ ಕಚೇರಿಯಿಂದ ನಿರ್ವಹಣೆಯಾಗುವ ಕಾಂಗ್ರೆಸ್ ವಾರ್ ರೂಂಗೆ ಪ್ರತಿನಿತ್ಯ 200-250 ಕರೆ ಬರುತ್ತಿದ್ದು, ತಕ್ಷಣದಲ್ಲೇ ಸ್ಪಂದಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಂಡ ರಚಿಸಿಕೊಳ್ಳಲಾಗಿದೆ. ಸರಿ ಸುಮಾರು 2 ಸಾವಿರ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸಹ ಬೆಂಗಳೂರಿನಿಂದ ವಾರ್ ರೂಂ ನಿರ್ವಹಿಸುತ್ತಿದ್ದು, ಯಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂಬ ದಾಖಲೆಯನ್ನೂ ಪ್ರತಿನಿತ್ಯ ಬೆಂಗಳೂರಿಗೆ ತರಿಸಿಕೊಳ್ಳುತ್ತಿದೆ. ಈವರೆಗೆ 20.13 ಲಕ್ಷ ಊಟದ ಪ್ಯಾಕೆಟ್ ವಿತರಣೆ, 5.95 ಲಕ್ಷ ಕುಟುಂಬಕ್ಕೆ ದಿನಸಿ ಕಿಟ್ ನೀಡಲಾಗಿದೆ.
ಒಂದು ಲೋಡ್​ ಹೂ ತೆಗೆದುಕೊಂಡು ಹೋಗಿ ಸಿಎಂ ಬಿಎಸ್​ವೈಗೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
