ಮಡಿಕೇರಿ:ಕರೊನಾ ವಿರುದ್ಧದ ಹೋರಾಟದಲ್ಲಿ ವೃತ್ತಿಪರತೆ ಮೆರೆದಿದ್ದಕ್ಕೆ ಮೊನ್ನೆಯಷ್ಟೇ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ ಅವರಿಗೆ ಅಮೆರಿಕದಲ್ಲಿ ಗೌರವ ಸೂಚಿಸಲಾಗಿತ್ತು. ಇದೀಗ ಅದೇ ಗೌರವಕ್ಕೆ ಕೊಡಗಿನ ಪ್ರೀತಿ ಸುಬ್ರಮಣಿ ಎಂಬುವರು ಭಾಜನರಾಗಿದ್ದಾರೆ. ಈ ಮೂಲಕ ಕರ್ನಾಟಕದ ಇಬ್ಬರು ವೈದ್ಯರಿಗೆ ವಿಶೇಷ ಗೌರವ ಸಿಕ್ಕಿದೆ.
ಕೊಡಗಿನ ಪ್ರೀತಿ ಸುಬ್ರಮಣಿ ಎಂಬುವರು ಅಮೆರಿಕದ ಸೈಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೋವಿಡ್-19 ವಿರುದ್ಧ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜಿಲ್ಲೆಯ ಬಿರುನಾಣಿ ಗ್ರಾಮದ ಸುಬ್ರಮಣಿ ಎಂಬುವರ ಪತ್ನಿ ಹಾಗೂ ರಣಜಿ ಆಟಗಾರ ರಾಜಪ್ಪ ಅವರ ಪುತ್ರಿ.
ಮೈಸೂರಿನ ಉಮಾ ಹಾಗೂ ಪ್ರೀತಿ ಒಟ್ಟೊಟ್ಟಿಗೆ ಸೇವೆ ಸಲ್ಲಿಸುತ್ತಿದ್ದು, ಪೊಲೀಸ್, ಅಗ್ನಿಶಾಮಕದಳ ಸೇರಿದಂತೆ ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರು ಸಹ ವಿವಿಧ ವಾಹನಗಳ ಮೂಲಕ ಭಿತ್ತಿ ಫಲಕಗಳನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ಸೈರನ್ ಮೊಳಗಿಸಿ ಕೈಬೀಸಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.(ದಿಗ್ವಿಜಯ ನ್ಯೂಸ್​)
VIDEO| ಮೈಸೂರು ಮೂಲದ ವೈದ್ಯೆಯ ಸೇವೆಗೆ ಅಮೆರಿಕನ್ನರ ಸಲಾಂ: ಮನೆಯ ಮುಂದಿನ ರಸ್ತೆಯಲ್ಲಿ ಕಾರುಗಳು ಪರೇಡ್​!

ಮನೆಯೇ ದೇವಾಲಯ, ಮನಸ್ಸೇ ಪರಮಾತ್ಮ, ಮನೆಯಲ್ಲಿರುವುದೇ ಧರ್ಮ: ಇಂದಿನ ಶ್ರೀಗುರುವಾಣಿಯಲ್ಲಿದೆ ಯಾವ ರೀತಿ ಎಂಬುದರ ವಿವರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
